खानापूर

नंदगडजवळील अपघातात  दुचाकीस्वाराचा मृत्यू | ನಂದಗಡ ಬಳಿ ಸಂಭವಿಸಿದ ಅಪಘಾತದಲ್ಲಿ  ವಾಹನ ಸವಾರ ಮೃತ್ಯು

नंदगड: नंदगड पोलीस स्थानकाजवळील बसथांब्याजवळ झालेल्या दुचाकी अपघातात गर्बेनहट्टी येथील शेतकऱ्याचा उपचारादरम्यान मृत्यू झाला. कृष्णाजी पांडुरंग पाटील (वय 58, रा. गर्बेनहट्टी) असे मृत शेतकऱ्याचे नाव आहे.

कृष्णाजी पाटील हे नेहमीप्रमाणे नंदगड येथील संगोळी रायण्णा म्युझियममध्ये रोजंदारीचे काम करून शनिवार, दि. १० रोजी सायंकाळी सुमारे ६ वाजता दुचाकीवरून आपल्या घरी परतत होते. नंदगड पोलीस स्थानकाजवळील बसथांब्याजवळ ते रस्त्याच्या कडेला दुचाकी थांबवून उभे असताना पाठीमागून भरधाव वेगाने आलेल्या दुसऱ्या दुचाकीस्वाराने त्यांच्या दुचाकीला जोराची धडक दिली.

या अपघातात कृष्णाजी पाटील रस्त्यावर कोसळले असून त्यांच्या डोक्याला गंभीर दुखापत झाली. त्यांना तातडीने नंदगड येथील दवाखान्यात, त्यानंतर पुढील उपचारासाठी बेळगाव येथील रुग्णालयात दाखल करण्यात आले. मात्र उपचार सुरू असतानाच दोन दिवसांनी सोमवारी त्यांचा मृत्यू झाला. मंगळवारी त्यांच्यावर अंत्यसंस्कार करण्यात आले.

या घटनेची नोंद नंदगड पोलीस स्थानकात करण्यात आली आहे. त्यांच्या पश्चात पत्नी व तीन मुली असा परिवार आहे. या अपघाती निधनामुळे नंदगड व परिसरात हळहळ व्यक्त होत आहे.


ನಂದಗಡ ಬಳಿ ಸಂಭವಿಸಿದ ಅಪಘಾತದಲ್ಲಿ ಗರ್ಬೆನಹಟ್ಟಿ ಮೂಲದ ದ್ವಿಚಕ್ರ ವಾಹನ ಸವಾರ ಮೃತ್ಯು
ನಂದಗಡ (ವಾರ್ತಾಹಾರ) :
ನಂದಗಡ ಪೊಲೀಸ್ ಠಾಣೆಯ ಸಮೀಪದ ಬಸ್ ನಿಲ್ದಾಣದ ಬಳಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ ಗರ್ಬೆನಹಟ್ಟಿ ಗ್ರಾಮದ ರೈತರು ಚಿಕಿತ್ಸೆ ವೇಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ರೈತನನ್ನು ಕೃಷ್ಣಾಜಿ ಪಾಂಡುರಂಗ ಪಾಟೀಲ (ವಯಸ್ಸು 58, ನಿವಾಸಿ: ಗರ್ಬೆನಹಟ್ಟಿ) ಎಂದು ಗುರುತಿಸಲಾಗಿದೆ.
ಕೃಷ್ಣಾಜಿ ಪಾಟೀಲ ಅವರು ಪ್ರತಿದಿನದಂತೆ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂನಲ್ಲಿ ದಿನಗೂಲಿ ಕೆಲಸ ಮುಗಿಸಿ, ಶನಿವಾರ ಸಂಜೆ ಸುಮಾರು 6 ಗಂಟೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ನಂದಗಡ ಪೊಲೀಸ್ ಠಾಣೆಯ ಸಮೀಪದ ಬಸ್ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡಿದ್ದಾಗ, ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಅವರ ವಾಹನಕ್ಕೆ ಡಿಕ್ಕಿ ಹೊಡೆದನು.
ಅಪಘಾತದ ಪರಿಣಾಮ ಕೃಷ್ಣಾಜಿ ಪಾಟೀಲರು ರಸ್ತೆಯ ಮೇಲೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ನಂದಗಡ ಸರ್ಕಾರಿ ಆಸ್ಪತ್ರೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಸೋಮವಾರ ಅವರು ಕೊನೆಯುಸಿರೆಳೆದರು. ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರು ಪತ್ನಿ ಮತ್ತು ಮೂರು ಪುತ್ರಿಯರನ್ನು ಅಗಲಿದ್ದಾರೆ. ಈ ದುರ್ಘಟನೆಯಿಂದ ನಂದಗಡ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या