अशोकनगर-नेरसा परिसरात हत्तींचा धुमाकूळ; ऊस-केळी पिकाचे मोठे नुकसान | ಅಶೋಕನಗರ-ನೇರ್ಸಾ ಪ್ರದೇಶದಲ್ಲಿ ಆನೆಗಳ ದಾಳಿ; ಕಬ್ಬು–ಬಾಳೆ ಬೆಳೆಗಳಿಗೆ ಭಾರೀ ಹಾನಿ
खानापूर: तालुक्यातील नेरसा परिसरात हत्तींच्या उपद्रवामुळे शेतकऱ्यांचे मोठे नुकसान झाल्याची घटना काल रात्री घडली.

नेरसे गावालगत असलेल्या अशोकनगर परिसरात जंगलातून आलेल्या हत्तीने शेतात घुसून ऊस व केळी पिकाचे मोठ्या प्रमाणात नुकसान केले. ही शेती रामप्पा सतप्पा मस्ती (रा. अशोकनगर) यांची असून सर्व्हे नंबर 110/A मधील पिकांची हत्तीने तुडवणूक केली. रात्रीच्या सुमारास ही घटना घडल्याने परिसरातील शेतकऱ्यांमध्ये भीतीचे वातावरण निर्माण झाले आहे.

या भागात अलीकडच्या काळात हत्तींचा वावर वाढल्याने शेतकरी हवालदिल झाले असून, वनविभागाने तातडीने उपाययोजना करून नुकसानग्रस्त शेतकऱ्यांना योग्य भरपाई द्यावी, अशी मागणी शेतकऱ्यांकडून करण्यात येत आहे. तसेच भविष्यात अशा घटना टाळण्यासाठी हत्तींच्या हालचालींवर नियंत्रण ठेवण्याची गरज व्यक्त केली जात आहे.
ಅಶೋಕನಗರ-ನೇರ್ಸಾ ಪ್ರದೇಶದಲ್ಲಿ ಆನೆಗಳ ದಾಳಿ; ಕಬ್ಬು–ಬಾಳೆ ಬೆಳೆಗಳಿಗೆ ಭಾರೀ ಹಾನಿ
ಖಾನಾಪುರ ತಾಲ್ಲೂಕಿನ ನೇರ್ಸಾ ಪ್ರದೇಶದಲ್ಲಿ ಆನೆಗಳ ಉಪದ್ರವದಿಂದ ರೈತರಿಗೆ ಭಾರೀ ನಷ್ಟ ಸಂಭವಿಸಿದ ಘಟನೆ ಕಳೆದ ರಾತ್ರಿ ನಡೆದಿದೆ.
ನೇರ್ಸಾ ಗ್ರಾಮದ ಸಮೀಪದ ಅಶೋಕನಗರ ಪ್ರದೇಶದಲ್ಲಿ ಕಾಡಿನಿಂದ ಬಂದ ಆನೆ ಒಂದು ರೈತನ ಹೊಲಕ್ಕೆ ನುಗ್ಗಿ ಕಬ್ಬು ಮತ್ತು ಬಾಳೆ ಬೆಳೆಗಳನ್ನು ವ್ಯಾಪಕವಾಗಿ ನಾಶಪಡಿಸಿದೆ. ಈ ಜಮೀನು ರಾಮಪ್ಪ ಸತಪ್ಪ ಮಸ್ತಿ (ಅಶೋಕನಗರ) ಅವರಿಗೆ ಸೇರಿದ್ದು, ಸರ್ವೆ ನಂ. 110/A ರಲ್ಲಿನ ಬೆಳೆಗಳನ್ನು ಆನೆ ತುಳಿದು ಹಾನಿಗೊಳಿಸಿದೆ. ರಾತ್ರಿ ಸಮಯದಲ್ಲಿ ಘಟನೆ ನಡೆದಿದ್ದರಿಂದ ಸುತ್ತಮುತ್ತಲಿನ ರೈತರಲ್ಲಿ ಭೀತಿ ಮೂಡಿದೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ರೈತರು ಆತಂಕದಲ್ಲಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ನಷ್ಟಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಆನೆಗಳ ಚಲನೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ರೈತರು ಮನವಿ ಮಾಡಿದ್ದಾರೆ.
