शाळेच्या आवारात विजेचा धक्का; सातवीतील विद्यार्थ्याचा मृत्यू | ಶಾಲಾ ಆವರಣದಲ್ಲಿ ವಿದ್ಯುತ್ ಸ್ಪರ್ಶ; ಏಳನೇ ತರಗತಿ ವಿದ್ಯಾರ್ಥಿ ಸಾವು
सदलगा | सदलगा येथील एका निवासी शाळेच्या आवारात गुरुवारी झालेल्या दुर्दैवी घटनेत एका विद्यार्थ्याचा विजेच्या धक्क्याने मृत्यू झाला. कृष्णा मंजुनाथ हेगडे (वय १३, रा. नवलीहाळ, ता. चिकोडी) असे मृत विद्यार्थ्याचे नाव आहे.
शाळेच्या परिसरात असलेल्या वीजखांबावरील तुटलेल्या वीजवाहिन्यांना स्पर्श झाल्याने कृष्णाला जोराचा विद्युत् धक्का बसला. या दुर्घटनेत तो गंभीर जखमी झाला आणि उपचारापूर्वीच त्याचा मृत्यू झाल्याचे समजते. तो इयत्ता सातवीत शिक्षण घेत होता.
ही घटना सदलगा पोलिस ठाण्याच्या कार्यक्षेत्रात घडली आहे. मात्र, रात्री उशिरापर्यंत या घटनेची अधिकृत नोंद पोलिस ठाण्यात झालेली नव्हती.
विद्यार्थ्याच्या अकाली मृत्यूमुळे परिसरात हळहळ व्यक्त होत असून, शाळा परिसरातील विद्युत् सुरक्षेबाबत गंभीर प्रश्न उपस्थित झाले आहेत.
ಶಾಲಾ ಆವರಣದಲ್ಲಿ ವಿದ್ಯುತ್ ಸ್ಪರ್ಶ; ಏಳನೇ ತರಗತಿ ವಿದ್ಯಾರ್ಥಿ ಸಾವು
ಸದಲಗಾ |
ಸದಲಗಾ ಪಟ್ಟಣದ ಒಂದು ನಿವಾಸಿ ಶಾಲೆಯ ಆವರಣದಲ್ಲಿ ಗುರುವಾರ ಸಂಭವಿಸಿದ ದುರ್ಘಟನೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಕೃಷ್ಣ ಮಂಜುನಾಥ ಹೆಗಡೆ (ವಯಸ್ಸು 13, ನಿವಾಸಿ ನವಲಿಹಾಳ, ಚಿಕೋಡಿ ತಾಲ್ಲೂಕು) ಎಂದು ಗುರುತಿಸಲಾಗಿದೆ.
ಶಾಲಾ ಆವರಣದಲ್ಲಿ ಇರುವ ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಕೃಷ್ಣಗೆ ತೀವ್ರ ವಿದ್ಯುತ್ ಶಾಕ್ ತಗುಲಿದ್ದು, ಸ್ಥಳದಲ್ಲೇ ಅಚೇತನಗೊಂಡಿದ್ದಾನೆ. ತಕ್ಷಣ ಚಿಕಿತ್ಸೆಗಾಗಿ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕೃಷ್ಣ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಈ ಘಟನೆ ಸದಲಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಗುರುವಾರ ರಾತ್ರಿ ತಡವರಗೆ ಪ್ರಕರಣದ ಕುರಿತು ಅಧಿಕೃತ ದೂರು ದಾಖಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿಯ ಮರಣವಾದ ಹಿನ್ನೆಲೆಯಲ್ಲಿ ಸದಲಗಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಳವಾದ ದುಃಖ ಮತ್ತು ಆಕ್ರೋಶ ವ್ಯಕ್ತವಾಗಿದ್ದು, ಶಾಲಾ ಆವರಣದಲ್ಲಿನ ವಿದ್ಯುತ್ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
