कार झाडाला धडकून भीषण अपघात; चालक ठार, दोघे गंभीर जखमी | ವ್ಯಾಗನರ್ ಕಾರು ಮರಕ್ಕೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಮೃತ, ಇಬ್ಬರು ಗಂಭೀರ ಗಾಯ
रामनगर: रामनगर–धारवाड मार्गावरील मुंदवाड क्रॉसजवळ वॅगनर कार झाडाला धडकल्याने झालेल्या अपघातात चालकाचा जागीच मृत्यू झाला, तर दोन प्रवासी गंभीर जखमी झाले.
गोव्याच्या पणजी येथून अरणावरच्या दिशेने जात असलेली वॅगनर कार (क्रमांक: GA 05 BZ 323) रस्त्यालगत असलेल्या झाडाला जोरदार धडकल्याने हा अपघात घडला. या दुर्घटनेत चालक अब्दुल खाद (वय 55, रा. चिमला, पणजी–गोवा) यांचा घटनास्थळीच मृत्यू झाला.
कारमध्ये पुढील बाजूस बसलेले दादू कौसर (वय 30) तसेच मागील सीटवर बसलेल्या हिना कौसर (वय 39, रा. पणजी–गोवा) हे दोघे गंभीर जखमी झाले. त्यांना तात्काळ रामनगर येथील सरकारी रुग्णालयात प्राथमिक उपचार देण्यात आले असून पुढील उपचारासाठी बेळगाव येथे हलविण्यात आले आहे.
अपघातात वॅगनर कारचा समोरील भाग पूर्णतः चक्काचूर झाला आहे. घटनेची माहिती मिळताच खानापूर पोलिसांनी घटनास्थळी दाखल होत पंचनामा केला. मृत चालकाचा मृतदेह शवविच्छेदनासाठी खानापूर येथील सरकारी रुग्णालयात पाठविण्यात आला असून या प्रकरणाची नोंद खानापूर पोलीस स्थानकात करण्यात आली आहे.
ವ್ಯಾಗನರ್ ಕಾರು ಮರಕ್ಕೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಮೃತ, ಇಬ್ಬರು ಗಂಭೀರ ಗಾಯ
ರಾಮನಗರ–ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಸಮೀಪ ವ್ಯಾಗನರ್ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಹಾಗೂ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋವಾದ ಪಣಜಿ ನಗರದಿಂದ ಅರನವರ್ ಕಡೆಗೆ ತೆರಳುತ್ತಿದ್ದ ವ್ಯಾಗನರ್ ಕಾರು (ನೋಂದಣಿ ಸಂಖ್ಯೆ: GA 05 BZ 323) ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರು ಚಾಲಕ ಅಬ್ದುಲ್ ಖಾದ್ (55 ವರ್ಷ, ಚಿಮ್ಲಾ, ಪಣಜಿ–ಗೋವಾ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನ ಮುಂಭಾಗದಲ್ಲಿ ಕುಳಿತಿದ್ದ ದಾದು ಕೌಸರ್ (30 ವರ್ಷ) ಹಾಗೂ ಹಿಂಭಾಗದಲ್ಲಿ ಕುಳಿತಿದ್ದ ಹೀನಾ ಕೌಸರ್ (39 ವರ್ಷ, ಪಣಜಿ–ಗೋವಾ) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮೊದಲು ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕರೆದೊಯ್ಯಲಾಗಿದೆ.
ಅಪಘಾತದಿಂದ ವ್ಯಾಗನರ್ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗೊಂಡಿದೆ. ಮಾಹಿತಿ ಪಡೆದ ತಕ್ಷಣ ಖಾನಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದ್ದಾರೆ. ಮೃತದೇಹವನ್ನು ಶವಪರೀಕ್ಷೆಗೆ ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
