कणकुंबी येथील साडेपाच महिन्यांच्या गर्भवती महिलेचा रंकाळा तलावात मृतदेह | ಕಣಕುಂಬಿ ಮೂಲದ ಗರ್ಭಿಣಿ ಮಹಿಳೆ ರಂಕಾಳಾ ಕೆರೆಯಲ್ಲಿ ಆತ್ಮಹತ್ಯೆ
खानापुर: खानापूर तालुक्यातील कणकुंबी येथील एका गर्भवती महिलेने कोल्हापूरमधील रंकाळा तलावात उडी मारून आत्महत्या केल्याची धक्कादायक घटना समोर आली आहे. शनिवारी सकाळी तलावात तिचा मृतदेह आढळून आल्यानंतर ही बाब उघडकीस आली.
नेहा ज्ञानेश्वर पवार (वय २७, रा. कणकुंबी, ता. खानापूर, जि. बेळगाव) असे मृत महिलेचे नाव असून ती साडेपाच महिन्यांची गर्भवती होती. नेहा व तिचा पती ज्ञानेश्वर पवार हे दोघे गोव्यातील म्हापसा येथे एका बांधकामाच्या साईटवर काम करत होते.
शुक्रवारी सकाळी नेहा कोणालाही न सांगता घरातून बाहेर पडली होती. ती परत न आल्याने पती ज्ञानेश्वर व तिच्या आई-वडिलांनी तिचा शो

ध घेतला. मात्र, ती सापडली नाही. अखेर शनिवारी सकाळी ज्ञानेश्वर यांनी म्हापसा पोलीस ठाण्यात नेहा बेपत्ता झाल्याची तक्रार दाखल केली होती.
दरम्यान, शनिवारी सकाळी कोल्हापूरच्या रंकाळा तलावात एका महिलेचा मृतदेह आढळून आला. मृताच्या मोबाईल क्रमांकाच्या आधारे जुना राजवाडा पोलिसांनी तिची ओळख पटवून पती व नातेवाईकांशी संपर्क साधला. माहिती मिळताच नातेवाईकांनी कोल्हापूर गाठून रात्री उशिरा नेहाचा मृतदेह ताब्यात घेतला.
या घटनेची नोंद जुना राजवाडा पोलीस ठाण्यात करण्यात आली असून आत्महत्यामागील कारणांचा पुढील तपास पोलीस करत आहेत.
ಕಣಕುಂಬಿ ಮೂಲದ ಗರ್ಭಿಣಿ ಮಹಿಳೆ ರಂಕಾಳಾ ಕೆರೆಯಲ್ಲಿ ಆತ್ಮಹತ್ಯೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರು ಕೊಲ್ಹಾಪುರದ ರಂಕಾಳಾ ಕೆರೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಬೆಳಿಗ್ಗೆ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಈ ದುರ್ಘಟನೆ ಹೊರಬಂದಿದೆ.
ಮೃತ ಮಹಿಳೆಯನ್ನು ನೇಹಾ ಜ್ಞಾನೇಶ್ವರ ಪವಾರ (ವಯಸ್ಸು ೨೭, ಮೂಲ: ಕಣಕುಂಬಿ, ತಾ. ಖಾನಾಪುರ, ಜಿ. ಬೆಳಗಾವಿ) ಎಂದು ಗುರುತಿಸಲಾಗಿದೆ. ನೇಹಾ ಸದ್ಯಕ್ಕೆ ಸಾಡೆಐದು ತಿಂಗಳ ಗರ್ಭಿಣಿಯಾಗಿದ್ದರು. ನೇಹಾ ಹಾಗೂ ಅವರ ಪತಿ ಜ್ಞಾನೇಶ್ವರ ಪವಾರ ಗೋವಾದ ಮ್ಹಾಪ್ಸಾ ಪ್ರದೇಶದ ಒಂದು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು.
ಶುಕ್ರವಾರ ಬೆಳಿಗ್ಗೆ ನೇಹಾ ಯಾರಿಗೂ ತಿಳಿಸದೆ ಮ್ಹಾಪ್ಸಾದಲ್ಲಿನ ತಮ್ಮ ವಾಸಸ್ಥಳದಿಂದ ಹೊರಟಿದ್ದರು. ಅವರು ಮರಳಿ ಬಾರದೆ ಇದ್ದುದರಿಂದ ಪತಿ ಜ್ಞಾನೇಶ್ವರ ಹಾಗೂ ಅವರ ತಾಯಿ-ತಂದೆ ಹುಡುಕಾಟ ನಡೆಸಿದರು. ಆದರೆ ಯಾವುದೇ ಸುಳಿವು ದೊರಕಲಿಲ್ಲ. ಬಳಿಕ ಶನಿವಾರ ಬೆಳಿಗ್ಗೆ ಮ್ಹಾಪ್ಸಾ ಪೊಲೀಸ್ ಠಾಣೆಯಲ್ಲಿ ನೇಹಾ ಕಾಣೆಯಾಗಿರುವ ಬಗ್ಗೆ ಪತಿ ದೂರು ದಾಖಲಿಸಿದ್ದರು.
ಈ ನಡುವೆ ಶನಿವಾರ ಬೆಳಿಗ್ಗೆ ಕೊಲ್ಹಾಪುರದ ರಂಕಾಳಾ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾದ ಬಳಿಕ, ಶವದ ಬಳಿ ಲಭ್ಯವಾದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಜುನಾ ರಾಜವಾಡಾ ಪೊಲೀಸ್ ಠಾಣೆಯ ಪೊಲೀಸರು ಪತಿಯೊಂದಿಗೆ ಹಾಗೂ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿ ನೀಡಿದರು. ಮಾಹಿತಿ ತಿಳಿದ ಕೂಡಲೆ ಸಂಬಂಧಿಕರು ಕೊಲ್ಹಾಪುರಕ್ಕೆ ಆಗಮಿಸಿ ರಾತ್ರಿ ತಡವಾಗಿ ಶವವನ್ನು ವಶಕ್ಕೆ ಪಡೆದರು.
ಈ ಪ್ರಕರಣವನ್ನು ಜುನಾ ರಾಜವಾಡಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಆತ್ಮಹತ್ಯೆಗೆ ಕಾರಣಗಳ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
