डीसीसी बँक: अण्णासाहेब जोल्ले अध्यक्ष, राजू कागे उपाध्यक्ष | ಡಿಸಿಸಿ ಬ್ಯಾಂಕ್: ಅಣ್ಣಾಸಾಹೆಬ್ ಜೊಳ್ಳೆ ಅಧ್ಯಕ್ಷ, ರಾಜು ಕಾಗೆ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
बेळगाव: जिल्हा मध्यवर्ती सहकारी (डीसीसी) बँकेच्या अध्यक्ष व उपाध्यक्ष निवडणुकीत जारकिहोळी पॅनेलला मोठे यश मिळाले आहे. माजी खासदार अण्णासाहेब जोल्ले यांची नव्या अध्यक्षपदावर बिनविरोध निवड झाली असून, आमदार राजू कागे यांचीही बिनविरोध उपाध्यक्षपदी निवड झाली आहे.
निवड प्रक्रिया आणि सभेचा कार्यक्रम पार पडल्यानंतर नूतन अध्यक्ष अण्णासाहेब जोल्ले व उपाध्यक्ष राजू कागे यांनी इटूरला जाऊन नामनिर्देशन पत्र दाखल केले. या प्रक्रियेदरम्यान आमदार भालचंद्र जारकिहोळी यांच्या कारमधूनच जोल्ले व कागे नामपत्र दाखल करण्यासाठी रवाना झाले, अशी माहिती समोर आली आहे.
डीसीसी बँकेतील निवडणूक ही गेल्या काही दिवसांपासून मोठ्या चर्चेत होती. अखेर जारकिहोळी पॅनेलने दोन्ही पदांवर निर्विवाद विजय मिळवून आपले वर्चस्व सिद्ध केले आहे.
ಬೆಳಗಾವಿ : ಡಿಸಿಸಿ ಬ್ಯಾಂಕ್ನಲ್ಲಿ ಜಾರಕಿಹೋಳಿ ಪ್ಯಾನೆಲ್ ಆಳ್ವಿಕೆ; ಅಣ್ಣಾಸಾಹೆಬ್ ಜೊಳ್ಳೆ ಅಧ್ಯಕ್ಷ, ರಾಜು ಕಾಗೆ ಉಪಾಧ್ಯಕ್ಷ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಜಾರಕಿಹೋಳಿ ಪ್ಯಾನಲ್ ಭರ್ಜರಿ ಜಯ ಸಾಧಿಸಿದೆ. ಮಾಜಿ ಸಂಸದ ಅಣ್ಣಾಸಾಹೆಬ್ ಜೊಳ್ಳೆ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಶಾಸಕ ರಾಜು ಕಾಗೆ ಅವರು ಅವಿರೋಧವಾಗಿ ಉಪಾಧ್ಯಕ್ಷರಾಗಿದ್ದಾರೆ.
ಚುನಾವಣಾ ಸಭೆ ಪೂರ್ಣಗೊಂಡ ನಂತರ, ನೂತನ ಅಧ್ಯಕ್ಷ ಅಣ್ಣಾಸಾಹೆಬ್ ಜೊಳ್ಳೆ ಮತ್ತು ಉಪಾಧ್ಯಕ್ಷ ರಾಜು ಕಾಗೆ ಇಟ್ಟೂರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಕಾರಿನಲ್ಲೇ ಜೊಳ್ಳೆ ಹಾಗೂ ಕಾಗೆ ನಾಮಪತ್ರ ಸಲ್ಲಿಕೆಗೆ ತೆರಳಿದರೆಂದು ತಿಳಿದುಬಂದಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯು ಕಳೆದ ಹಲವು ದಿನಗಳಿಂದ ಚರ್ಚೆಯ ವಿಷಯವಾಗಿತ್ತು. ಅಂತಿಮವಾಗಿ ಜಾರಕಿಹೋಳಿ ಪ್ಯಾನೆಲ್ ಎರಡೂ ಸ್ಥಾನಗಳನ್ನು ಗೆದ್ದು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
