म्हादई-मलप्रभा पाणी प्रश्नावर धारवाडमध्ये मंथन; खानापूरच्या शेतकऱ्यांनी मांडल्या समस्या! | ಮಹದಾಯಿ–ಮಲಪ್ರಭಾ ನೀರಿನ ವಿಚಾರವಾಗಿ ಧಾರವಾಡದಲ್ಲಿ ಚರ್ಚೆ; ಖಾನಾಪುರ ರೈತರಿಂದ ಸಮಸ್ಯೆಗಳ ಪ್ರಸ್ತಾಪ!
धारवाड येथे दोन दिवसीय आंतरराज्यीय बैठक; पाणीटंचाई, वन्यप्राण्यांचा उपद्रव आणि भांडुरा नाला प्रकल्पावर चिंता; नदी संवर्धनासाठी एकत्रित लढ्याचा निर्धार
धारवाड : म्हादई आणि मलप्रभा नदी खोऱ्यातील पाणीवाटप, शेतकऱ्यांच्या समस्या, पर्यावरण संवर्धन आणि प्रस्तावित नदी वळविण्याच्या प्रकल्पांवर चर्चा करण्यासाठी कर्नाटक, गोवा आणि महाराष्ट्रातील विविध क्षेत्रांतील प्रतिनिधींची महत्त्वपूर्ण बैठक २४ व २५ ऑक्टोबर रोजी धारवाड येथील सेवालय येथे पार पडली. या बैठकीत खानापूर तालुक्यातील शेतकऱ्यांनीही आपल्या भागातील पाणीटंचाई, वन्यप्राण्यांमुळे शेतीचे होणारे नुकसान आणि भांडुरा नाला वळविण्याच्या प्रस्तावित प्रकल्पाबाबत गंभीर चिंता व्यक्त केली.

डॉ. संजीव कुलकर्णी आणि शरदा गोपाळ यांच्या मार्गदर्शनाखाली पार पडलेल्या या बैठकीला शेतकरी, शेतकरी संघटनांचे प्रतिनिधी, जलतज्ज्ञ, पर्यावरण अभ्यासक, संशोधक, डॉक्टर, अभियंते, कायदेतज्ज्ञ तसेच सामाजिक कार्यकर्त्यांची उपस्थिती होती.
खानापूरच्या शेतकऱ्यांनी मांडले पाणीटंचाईचे वास्तव
बैठकीत खानापूर परिसरातील शेतकऱ्यांनी आपल्या भागातील परिस्थिती मांडताना वन्यप्राण्यांमुळे शेतीचे मोठ्या प्रमाणावर नुकसान होत असल्याचे सांगितले. हत्ती, गवे, रानडुक्कर, माकडे आणि मोर यांसारख्या वन्यप्राण्यांकडून पिकांची नासधूस होत असल्याने शेतकऱ्यांना आर्थिक फटका सहन करावा लागत आहे.
याशिवाय भांडुरा नाला वळविण्याचा प्रस्तावित प्रकल्प राबविल्यास खानापूर परिसरातील शेती आणि उत्पादक जमिनीवर विपरीत परिणाम होण्याची भीतीही शेतकऱ्यांनी व्यक्त केली.
तिवोली, तीर्थकुंडे, उचवडे आदी मलप्रभा नदीकाठच्या गावांमध्ये जानेवारीनंतर पाण्याची कमतरता जाणवू लागते. त्यामुळे आधीच पाणीटंचाईचा सामना करणाऱ्या शेतकऱ्यांवर वन्यप्राण्यांच्या उपद्रवामुळे दुहेरी संकट ओढवत असल्याचे बैठकीत स्पष्ट करण्यात आले.
मलप्रभा कालव्याच्या शेवटच्या टोकापर्यंत पाणी पोहोचत नसल्याची तक्रार
नरगुंद, बदामी, गदग, रामदुर्ग, खानापूर आणि हुबळी-धारवाड परिसरातील शेतकरी प्रतिनिधींनी नविलुतीर्थ धरणाच्या लाभक्षेत्रातील पाणीवाटपाचा प्रश्न उपस्थित केला. विशेषतः कालव्याच्या शेवटच्या टोकावरील शेतकऱ्यांना अनेक दशकांपासून पुरेसे पाणी मिळत नसल्याची व्यथा त्यांनी मांडली.
मलप्रभा नदीतील पाणी पिण्यासाठी, गाव तलाव भरण्यासाठी तसेच औद्योगिक वापरासाठी वळविले जात असल्याने शेतीसाठी आवश्यक पाणी उपलब्ध होत नसल्याचे शेतकरी प्रतिनिधींनी सांगितले. महादायी नदीतून मंजूर झालेल्या पाण्याच्या वाटपाबाबतही बैठकीत तांत्रिक चर्चा झाली. शंकर अंबळी यांनी मलप्रभा खोऱ्यातील शेतकऱ्यांच्या वतीने चर्चेत सहभाग घेतला.
बदामी परिसरातील पूरस्थिती आणि गाळ साचण्याचा प्रश्न
रेणुकासागर जलाशयाच्या खालच्या भागातील बदामी परिसरातील शेतकऱ्यांनी वारंवार उद्भवणाऱ्या पूरस्थितीचा प्रश्न उपस्थित केला. जलाशयात मोठ्या प्रमाणावर गाळ साचल्यामुळे त्याची सुमारे १२ टीएमसी पाणी साठवण क्षमता कमी झाल्याचा दावा करण्यात आला.
महादायीचे अतिरिक्त पाणी मलप्रभा नदीत आणण्यापूर्वी नदी खोऱ्याचा सर्वांगीण विकास, पूरनियंत्रण उपाययोजना आणि शेतपिकांच्या संरक्षणासाठी ठोस योजना राबविण्याची मागणी करण्यात आली.
गोव्यातील प्रतिनिधींनीही व्यक्त केली चिंता
गोव्यातील प्रतिनिधींनी मलप्रभा खोऱ्यातील पाणीटंचाईग्रस्त शेतकऱ्यांच्या समस्यांबाबत सहानुभूती व्यक्त केली. त्याचवेळी म्हादयी नदीचे पाणी, जंगल, शेती, मासेमारी, पर्यटन आणि स्थानिक संस्कृतीचे संरक्षण करण्याची गरज अधोरेखित केली.
गोव्यातील सुमारे ४० टक्के लोकसंख्या पिण्याच्या पाण्यासाठी म्हादयी-मांडवी नदीवर अवलंबून असल्याचे प्रतिनिधींनी सांगितले. नदीच्या पाण्याचा प्रवाह आणि समुद्रातील खाऱ्या पाण्याचा समतोल यावर तेथील खाजन शेती, मत्स्यव्यवसाय आणि नदीमुखातील जैवविविधता अवलंबून असल्याचेही स्पष्ट करण्यात आले.
साखर कारखान्यांच्या पाणी वापरावर प्रश्नचिन्ह
बैठकीत मलप्रभा खोऱ्यातील साखर कारखान्यांकडून होणाऱ्या पाण्याच्या वापराबाबतही चर्चा झाली. कॅप्टन नितीन धोंड यांनी साखर कारखान्यांच्या पाणी वापराचे प्रमाण आणि शेतकऱ्यांच्या पाण्याच्या मागणीतील तफावत अधोरेखित केली. त्यांच्या मते, विद्यमान कारखान्यांकडून सुमारे १४० टीएमसी पाण्याचा वापर होत असल्याचा मुद्दा मांडण्यात आला, तर शेतकऱ्यांची ४ टीएमसी पाण्याची मागणी योग्य नियोजनाद्वारे पूर्ण करता येऊ शकते.
पाण्याचा काटकसरीने वापर, आधुनिक सिंचन पद्धती, पाणी बचत तंत्रज्ञान आणि जलस्रोतांचे पुनरुज्जीवन यावर भर देण्याचे आवाहन करण्यात आले. कृषी पंडित सुरेश देसाई यांनी कमी पाण्यात ऊस शेती करण्याच्या शाश्वत पद्धतींचे मार्गदर्शन केले.
पश्चिम घाट आणि वन्यजीव अभयारण्यांचे महत्त्व अधोरेखित
पर्यावरण अभ्यासकांनी भीमगड आणि म्हादयी वन्यजीव अभयारण्यांचे महत्त्व स्पष्ट केले. पश्चिम घाटातील जंगलांना दोन्ही नदी खोऱ्यांचे जलस्रोत आणि पावसाचे नियमन करणारे नैसर्गिक आधारस्तंभ म्हणून जपणे आवश्यक असल्याचे मत व्यक्त करण्यात आले.
सुरेश हेब्लिकर यांनी पश्चिम घाटाचे पर्यावरणीय संतुलन कायम ठेवत पाण्याच्या गरजा पूर्ण करण्यासाठी योग्य पर्याय शोधण्याची गरज व्यक्त केली. बैठकीत नदी वळविण्याच्या प्रकल्पांचे कायदेशीर पैलू, पर्यावरणीय परिणाम आणि पाणी व्यवस्थापन यावरही तज्ज्ञांनी मते मांडली.
बैठकीत महत्त्वाचे ठराव
दोन दिवसांच्या चर्चेनंतर सहभागी प्रतिनिधींनी काही महत्त्वपूर्ण मागण्या आणि ठराव मांडले.
- पाणीटंचाईचा सामना करणाऱ्या शेतकऱ्यांना तातडीने व्यवहार्य उपाय उपलब्ध करून द्यावेत.
- उद्योग आणि मोठ्या प्रमाणावर पाणी वापरणाऱ्या घटकांवर कठोर नियंत्रण ठेवावे.
- कर्नाटक, गोवा आणि महाराष्ट्रातील नदी खोऱ्यांतील स्थानिक समुदायांनी एकत्र येऊन जलस्रोतांचे संरक्षण करावे.
- पाण्याच्या वापराबाबत तिन्ही राज्य सरकारे आणि केंद्र सरकारने श्वेतपत्रिका प्रसिद्ध करावी.
- वन विभागाने वनसंवर्धन, व्यवस्थापन आणि वृक्षलागवड धोरणाबाबत पारदर्शक माहिती द्यावी.
- म्हादयी आणि मलप्रभा नदीसंबंधित प्रश्न कायदेशीर चौकटीत आणि पारदर्शक प्रक्रियेद्वारे सोडवावेत.
- भीमगड आणि म्हादयी वन्यजीव अभयारण्यांना दोन्ही नदी खोऱ्यांचे महत्त्वाचे जलस्रोत म्हणून मान्यता द्यावी.
- सर्व संबंधित घटकांमध्ये जलसाक्षरता वाढविण्यासाठी व्यापक जनजागृती करावी.
नदी संवर्धनासाठी राज्यांच्या सीमा ओलांडून एकत्र येण्याचे आवाहन
म्हादयी आणि मलप्रभा या नद्या कोणत्याही एका प्रदेशाच्या किंवा समाजघटकाच्या मालकीच्या नसून त्यांचे संवर्धन ही सर्वांची सामूहिक जबाबदारी आहे, असा एकमताचा सूर बैठकीत उमटला. शेतकऱ्यांचे हित, पिण्याच्या पाण्याची गरज आणि पर्यावरणीय संतुलन यांचा समन्वय साधूनच या प्रश्नावर तोडगा काढावा, असे मत व्यक्त करण्यात आले.
या बैठकीचे आयोजन नॅशनल अलायन्स ऑफ पीपल्स मूव्हमेंट्स (NAPM), SAPACC, इको वॉच, सर्वोदय समाज, जागृत महिला ओक्कुटा, गांधी पीस फाउंडेशन, हुबळी-धारवाड परिसर नागरिक समिती, पीपल फर्स्ट फाउंडेशन आणि वचन टीव्ही यांच्या संयुक्त विद्यमाने करण्यात आले.
बैठकीत सहभागी झालेल्या प्रतिनिधींनी राज्यांच्या सीमा, राजकीय मतभेद आणि सामाजिक भेद बाजूला ठेवून संवाद सुरू ठेवण्याचा तसेच नदी, जंगल, शेती आणि स्थानिक जनजीवनाच्या संरक्षणासाठी एकत्रित प्रयत्न करण्याचा निर्धार व्यक्त केला.
ಮಹದಾಯಿ–ಮಲಪ್ರಭಾ ನೀರಿನ ವಿಚಾರವಾಗಿ ಧಾರವಾಡದಲ್ಲಿ ಮಹತ್ವದ ಚರ್ಚೆ; ಖಾನಾಪುರ ರೈತರಿಂದಲೂ ಸಮಸ್ಯೆಗಳ ಪ್ರಸ್ತಾಪ!
ಎರಡು ದಿನಗಳ ಅಂತಾರಾಜ್ಯ ಸಭೆಯಲ್ಲಿ ನೀರಿನ ಅಭಾವ, ವನ್ಯಜೀವಿಗಳ ಹಾವಳಿ ಮತ್ತು ಭಂಡೂರಾ ನಾಲಾ ಯೋಜನೆ ಕುರಿತು ಆತಂಕ; ನದಿ ಸಂರಕ್ಷಣೆಗೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಪ್ರತಿನಿಧಿಗಳ ಒಗ್ಗಟ್ಟಿನ ನಿರ್ಧಾರ
ಧಾರವಾಡ: ಮಹದಾಯಿ ಮತ್ತು ಮಲಪ್ರಭಾ ನದಿ ಜಲಾನಯನ ಪ್ರದೇಶಗಳಲ್ಲಿನ ನೀರಿನ ಹಂಚಿಕೆ, ರೈತರ ಸಮಸ್ಯೆಗಳು, ಪರಿಸರ ಸಂರಕ್ಷಣೆ ಹಾಗೂ ಪ್ರಸ್ತಾವಿತ ನದಿ ತಿರುವು ಯೋಜನೆಗಳ ಕುರಿತು ಚರ್ಚಿಸಲು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ಎರಡು ದಿನಗಳ ಮಹತ್ವದ ಸಭೆ ಅಕ್ಟೋಬರ್ 24 ಮತ್ತು 25ರಂದು ಧಾರವಾಡದ ಸೇವಾಲಯದಲ್ಲಿ ನಡೆಯಿತು.
ಈ ಸಭೆಯಲ್ಲಿ ಖಾನಾಪುರ ಭಾಗದ ರೈತರು ಕೂಡ ತಮ್ಮ ಪ್ರದೇಶದಲ್ಲಿನ ನೀರಿನ ಅಭಾವ, ವನ್ಯಜೀವಿಗಳಿಂದ ಬೆಳೆಗಳಿಗೆ ಆಗುತ್ತಿರುವ ಹಾನಿ ಹಾಗೂ ಭಂಡೂರಾ ನಾಲಾ ತಿರುವು ಯೋಜನೆಯಿಂದ ಕೃಷಿ ಭೂಮಿಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದರು.
ಡಾ. ಸಂಜೀವ್ ಕುಲಕರ್ಣಿ ಮತ್ತು ಶಾರದಾ ಗೋಪಾಲ್ ಅವರು ಸಭೆಯ ನಿರ್ವಹಣೆ ಮತ್ತು ಸಮನ್ವಯದ ಜವಾಬ್ದಾರಿ ವಹಿಸಿದ್ದರು. ರೈತರು, ರೈತ ಮುಖಂಡರು, ಸಂಶೋಧಕರು, ಪ್ರಾಧ್ಯಾಪಕರು, ವೈದ್ಯರು, ಎಂಜಿನಿಯರ್ಗಳು, ಜಲತಜ್ಞರು, ಪರಿಸರವಾದಿಗಳು, ಕಾನೂನು ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯ ಆರಂಭದಲ್ಲಿ ಮೂರು ರಾಜ್ಯಗಳ ಪ್ರತಿನಿಧಿಗಳು ಒಟ್ಟಾಗಿ ಸಸಿಗಳಿಗೆ ನೀರುಣಿಸಿದರು. ಬಳಿಕ ಬಾಲಾ ಬಾಲಗ ಶಾಲೆಯ ಮಕ್ಕಳು ಮಹಾತ್ಮ ಗಾಂಧೀಜಿಯವರ ಮೆಚ್ಚಿನ ಭಜನೆ ‘ವೈಷ್ಣವ ಜನತೋ’ವನ್ನು ಕನ್ನಡದಲ್ಲಿ ಹಾಡಿದರು.
ಖಾನಾಪುರ ರೈತರಿಂದ ಸಮಸ್ಯೆಗಳ ಪ್ರಸ್ತಾಪ
ಸಭೆಯಲ್ಲಿ ಖಾನಾಪುರ ಭಾಗದ ರೈತರು ತಮ್ಮ ಪ್ರದೇಶದ ಕೃಷಿ ಸಮಸ್ಯೆಗಳನ್ನು ವಿವರಿಸಿದರು. ಆನೆ, ಕಾಡೆಮ್ಮೆ, ಕಾಡುಹಂದಿ, ಕೋತಿ ಮತ್ತು ನವಿಲು ಸೇರಿದಂತೆ ವಿವಿಧ ವನ್ಯಜೀವಿಗಳಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಇದರ ಜೊತೆಗೆ ಭಂಡೂರಾ ನಾಲಾ ತಿರುವು ಯೋಜನೆ ಜಾರಿಯಾದರೆ ಖಾನಾಪುರ ಭಾಗದ ಕೃಷಿ ಹಾಗೂ ಫಲವತ್ತಾದ ಭೂಮಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.
ಖಾನಾಪುರ ತಾಲ್ಲೂಕಿನ ಮಲಪ್ರಭಾ ನದಿ ತೀರದ ಹಲವು ಗ್ರಾಮಗಳಲ್ಲಿ ಜನವರಿ ತಿಂಗಳ ನಂತರ ನೀರಿನ ಕೊರತೆ ಎದುರಾಗುತ್ತದೆ. ಈಗಾಗಲೇ ನೀರಿನ ಸಮಸ್ಯೆ ಅನುಭವಿಸುತ್ತಿರುವ ರೈತರಿಗೆ ವನ್ಯಜೀವಿಗಳ ಹಾವಳಿಯಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಮಲಪ್ರಭಾ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರಿಲ್ಲ ಎಂಬ ಅಳಲು
ನರಗುಂದ, ಬಾದಾಮಿ, ಗದಗ, ರಾಮದುರ್ಗ, ಖಾನಾಪುರ ಹಾಗೂ ಹುಬ್ಬಳ್ಳಿ-ಧಾರವಾಡ ಭಾಗದ ರೈತ ಮುಖಂಡರು ನವಿಲುತೀರ್ಥ ಜಲಾಶಯದ ನೀರಾವರಿ ಪ್ರದೇಶದಲ್ಲಿನ ನೀರಿನ ಹಂಚಿಕೆ ಸಮಸ್ಯೆಯನ್ನು ಪ್ರಸ್ತಾಪಿಸಿದರು.
ವಿಶೇಷವಾಗಿ ಕಾಲುವೆಗಳ ಕೊನೆಯ ಹಂತದಲ್ಲಿರುವ ರೈತರಿಗೆ ದಶಕಗಳಿಂದ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲಪ್ರಭಾ ನದಿಯ ನೀರನ್ನು ಕುಡಿಯುವ ನೀರು, ಗ್ರಾಮಗಳ ಕೆರೆಗಳನ್ನು ತುಂಬಿಸುವುದು ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಬಳಸುತ್ತಿರುವುದರಿಂದ ಕೃಷಿಗೆ ಅಗತ್ಯವಾದ ನೀರು ದೊರೆಯುತ್ತಿಲ್ಲ ಎಂದು ರೈತರು ತಿಳಿಸಿದರು.
ಶಿವಣ್ಣ ಹುಬ್ಬಳ್ಳಿ, ಬಸವರಾಯ ಸಾವಳೆ, ಶಿವಣ್ಣ ಮೇತಿ, ಮುತ್ತಣ್ಣ ಯರಗೊಪ್ಪ ಮತ್ತು ಗುರುರಾಜ್ ಹುಣಸೇಮರ ಅವರು ರೈತರ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಮಲಪ್ರಭಾ ಜಲಾನಯನ ಪ್ರದೇಶದ ರೈತರ ಪರವಾಗಿ ಶಂಕರ ಅಂಬಳಿ ಚರ್ಚೆಯಲ್ಲಿ ಭಾಗವಹಿಸಿದರು.
ಬಾದಾಮಿ ಭಾಗದಲ್ಲಿ ಪ್ರವಾಹ ಸಮಸ್ಯೆ
ರೇಣುಕಾಸಾಗರ ಜಲಾಶಯದ ಕೆಳಭಾಗದಲ್ಲಿರುವ ಬಾದಾಮಿ ಪ್ರದೇಶದ ರೈತರು ಪ್ರವಾಹ ಸಮಸ್ಯೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿರುವುದರಿಂದ ಸುಮಾರು 12 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಕುಸಿದಿದೆ ಎಂದು ಅವರು ಆರೋಪಿಸಿದರು.
ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತರುವ ಮೊದಲು ನದಿ ಪಾತ್ರದ ಸಮಗ್ರ ಅಭಿವೃದ್ಧಿ, ಪ್ರವಾಹ ನಿಯಂತ್ರಣ ಕ್ರಮಗಳು ಮತ್ತು ಬೆಳೆಗಳ ರಕ್ಷಣೆಗೆ ಅಗತ್ಯವಾದ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋವಾ ಮತ್ತು ಮಹಾರಾಷ್ಟ್ರದ ಪ್ರತಿನಿಧಿಗಳಿಂದ ಪರಿಸರ ಸಂರಕ್ಷಣೆಗೆ ಒತ್ತು
ಗೋವಾದ ಪ್ರತಿನಿಧಿಗಳು ಮಲಪ್ರಭಾ ಜಲಾನಯನ ಪ್ರದೇಶದ ನೀರಿನ ಸಮಸ್ಯೆ ಎದುರಿಸುತ್ತಿರುವ ರೈತರ ಸಂಕಷ್ಟಕ್ಕೆ ಸಹಾನುಭೂತಿ ವ್ಯಕ್ತಪಡಿಸಿದರು. ಮಹದಾಯಿ ನದಿ, ಅರಣ್ಯ, ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಸ್ಥಳೀಯ ಸಂಸ್ಕೃತಿಯ ರಕ್ಷಣೆಯ ಅಗತ್ಯವನ್ನು ವಿವರಿಸಿದರು.
ಅಭಿಜಿತ್ ಪ್ರಭುದೇಸಾಯಿ ಅವರು ಕೇಂದ್ರ ಸರ್ಕಾರ ಹಾಗೂ ಗೋವಾ ಮತ್ತು ಕರ್ನಾಟಕ ಸರ್ಕಾರಗಳ ಕೈಗಾರಿಕಾ ವಿಸ್ತರಣೆಯ ಪ್ರಸ್ತಾವನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಉತ್ತರ ಕರ್ನಾಟಕದ ಗದಗ, ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಹಾವೇರಿ ಮತ್ತು ರಾಯಚೂರು ಭಾಗಗಳಲ್ಲಿ ಬೃಹತ್ ಉಕ್ಕು ಉತ್ಪಾದನೆ ಹಾಗೂ ಜಲವಿದ್ಯುತ್ ಯೋಜನೆಗಳ ಪ್ರಸ್ತಾವನೆಗಳ ಕುರಿತು ವಿವರಿಸಿದರು.
ಎರಿಕ್ ಪಿಂಟೋ ಅವರು ಭೌಗೋಳಿಕ ನಕ್ಷೆಗಳ ಮೂಲಕ ಮಲಪ್ರಭಾ ಮತ್ತು ಮಹದಾಯಿ ನದಿ ಜಲಾನಯನ ಪ್ರದೇಶಗಳ ಪರಸ್ಪರ ಸಂಬಂಧವನ್ನು ವಿವರಿಸಿದರು. ದಶರಥ ಮೊರಾಸ್ಕರ್, ಶ್ರೀಕಾಂತ್ ನಾರ್ವೇಕರ್, ಅಲ್ವಿಟೋ ಡಿ ಸಿಲ್ವಾ ಮತ್ತು ಮೈಕೆಲ್ ಡಯಾಸ್ ಅವರು ಗೋವಾದ ಖಾಜನ್ ಭತ್ತದ ಕೃಷಿ, ಮೀನುಗಾರಿಕೆ ಮತ್ತು ನದಿ ಪರಿಸರ ವ್ಯವಸ್ಥೆಯ ಮಹತ್ವವನ್ನು ವಿವರಿಸಿದರು.
ಮಹದಾಯಿ ಬಚಾವ್ ಅಭಿಯಾನದ ನಾಯಕಿ ನಿರ್ಮಲಾ ಸಾವಂತ್ ಅವರು ಅರಣ್ಯ ಮತ್ತು ವನ್ಯಜೀವಿ ಅಭಯಾರಣ್ಯಗಳ ಸಂರಕ್ಷಣೆಯಿಂದ ಮಳೆ ಹಾಗೂ ನದಿಗಳ ನೀರಿನ ಹರಿವನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದ ಪ್ರಸಾದ್ ಗಾವ್ಡೆ ಅವರು ಕೊಂಕಣ ಪ್ರದೇಶದ ಜನರ ಅರಣ್ಯ ಮತ್ತು ನದಿಗಳೊಂದಿಗಿನ ಸಾಂಪ್ರದಾಯಿಕ ಸಂಬಂಧದ ಬಗ್ಗೆ ಮಾತನಾಡಿದರು. ನದಿಗಳ ಉಗಮಸ್ಥಾನಗಳನ್ನು ಪೂಜಿಸುವುದು, ದೇವಾಲಯಗಳನ್ನು ನಿರ್ಮಿಸುವುದು ಮತ್ತು ಪವಿತ್ರ ಕಾಡುಗಳನ್ನು ಸಂರಕ್ಷಿಸುವ ಪರಂಪರೆಯನ್ನು ವಿವರಿಸಿದರು. ಮಲಪ್ರಭಾ ನದಿಯ ಉಗಮಸ್ಥಾನದಿಂದ ಮಹದಾಯಿ ನದಿಯ ಹರಿವಿನವರೆಗೆ ನಡೆಸಿದ ಪಾದಯಾತ್ರೆಯ ಅನುಭವವನ್ನೂ ಹಂಚಿಕೊಂಡರು.
ಸಕ್ಕರೆ ಕಾರ್ಖಾನೆಗಳ ನೀರಿನ ಬಳಕೆಯ ಕುರಿತು ಚರ್ಚೆ
ಮಲಪ್ರಭಾ ಜಲಾನಯನ ಪ್ರದೇಶದಲ್ಲಿನ ಸಕ್ಕರೆ ಕಾರ್ಖಾನೆಗಳ ನೀರಿನ ಬಳಕೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಕ್ಯಾಪ್ಟನ್ ನಿತಿನ್ ಧೋಂಡ್ ಅವರು ಕಾರ್ಖಾನೆಗಳ ನೀರಿನ ಬಳಕೆ ಮತ್ತು ರೈತರ ನೀರಿನ ಬೇಡಿಕೆಯ ನಡುವಿನ ವ್ಯತ್ಯಾಸವನ್ನು ಪ್ರಸ್ತಾಪಿಸಿದರು. ಅವರ ಪ್ರಕಾರ, ಈಗಿರುವ ಸಕ್ಕರೆ ಕಾರ್ಖಾನೆಗಳು ಸುಮಾರು 140 ಟಿಎಂಸಿ ನೀರನ್ನು ಬಳಸುತ್ತಿವೆ ಎಂಬ ಅಂಶವನ್ನು ಸಭೆಯಲ್ಲಿ ಮುಂದಿಟ್ಟರು. ರೈತರ 4 ಟಿಎಂಸಿ ನೀರಿನ ಬೇಡಿಕೆಯನ್ನು ಸಮರ್ಪಕ ನಿರ್ವಹಣೆ ಮತ್ತು ನೀರಿನ ಮಿತವ್ಯಯದ ಮೂಲಕ ಪೂರೈಸಬಹುದು ಎಂದು ಅಭಿಪ್ರಾಯಪಟ್ಟರು.
ಕೃಷಿ ಪಂಡಿತ ಸುರೇಶ್ ದೇಸಾಯಿ ಅವರು ಕಡಿಮೆ ನೀರಿನಲ್ಲಿ ಕಬ್ಬು ಬೆಳೆಯುವ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಭೀಮಗಡ ಮತ್ತು ಮಹದಾಯಿ ಅಭಯಾರಣ್ಯಗಳ ಸಂರಕ್ಷಣೆಗೆ ಒತ್ತು
ಪರಿಸರ ತಜ್ಞರು ಭೀಮಗಡ ಮತ್ತು ಮಹದಾಯಿ ವನ್ಯಜೀವಿ ಅಭಯಾರಣ್ಯಗಳ ಮಹತ್ವವನ್ನು ವಿವರಿಸಿದರು. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳು ಎರಡೂ ನದಿ ಜಲಾನಯನ ಪ್ರದೇಶಗಳಿಗೆ ಪ್ರಮುಖ ಜಲಮೂಲಗಳಾಗಿದ್ದು, ಮಳೆ ಮತ್ತು ನೀರಿನ ಹರಿವಿನ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಸುರೇಶ್ ಹೆಬ್ಳೀಕರ್ ಅವರು ಪಶ್ಚಿಮ ಘಟ್ಟದ ಪರಿಸರ ಸಮತೋಲನಕ್ಕೆ ಧಕ್ಕೆಯಾಗದಂತೆ ಜನರ ನೀರಿನ ಅಗತ್ಯಗಳನ್ನು ಪೂರೈಸಲು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕೆಂದು ಹೇಳಿದರು.
ಮಹದಾಯಿ ನದಿ ವಿವಾದದ ಕಾನೂನು ಸ್ಥಿತಿಗತಿ ಕುರಿತು ಅಡ್ವೊಕೇಟ್ ಸಂಕೇತ್ ಅಂಬಳಿ, ಅಡ್ವೊಕೇಟ್ ನಿತಿನ್ ಬೋಲಬಂಡಿ ಮತ್ತು ನಿರ್ಮಲಾ ಗೌಡ ಅವರು ಮಾಹಿತಿ ನೀಡಿದರು. ಸಾಗರ್ ಧಾರಾ ಮತ್ತು ನಿರ್ಮಲಾ ಗೌಡ ಅವರು ನದಿ ತಿರುವು ಯೋಜನೆಗಳಿಂದ ಉಂಟಾಗುವ ಸಂಘರ್ಷಗಳು, ಪರಿಸರದ ಮೇಲಿನ ಪರಿಣಾಮಗಳು ಹಾಗೂ ರೈತರ ಆದಾಯ ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು
ಎರಡು ದಿನಗಳ ಚರ್ಚೆಯ ಬಳಿಕ ಸಭೆಯಲ್ಲಿ ಭಾಗವಹಿಸಿದ್ದವರು ಹಲವು ಪ್ರಮುಖ ನಿರ್ಧಾರಗಳನ್ನು ಮುಂದಿಟ್ಟರು.
- ನೀರಿನ ಅಭಾವ ಎದುರಿಸುತ್ತಿರುವ ರೈತರ ಸಮಸ್ಯೆಗಳಿಗೆ ತಕ್ಷಣ ಕಾರ್ಯಸಾಧ್ಯವಾದ ಪರಿಹಾರ ಕಂಡುಕೊಳ್ಳಬೇಕು.
- ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸುವ ಕೈಗಾರಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು.
- ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಸ್ಥಳೀಯ ಸಮುದಾಯಗಳು ಒಗ್ಗಟ್ಟಿನಿಂದ ಜಲಮೂಲಗಳ ಸಂರಕ್ಷಣೆಗೆ ಮುಂದಾಗಬೇಕು.
- ನೀರಿನ ಬಳಕೆಯ ಕುರಿತು ಮೂರು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು.
- ಅರಣ್ಯ ಸಂರಕ್ಷಣೆ, ನಿರ್ವಹಣೆ ಮತ್ತು ಅರಣ್ಯೀಕರಣ ನೀತಿಯ ಕುರಿತು ಅರಣ್ಯ ಇಲಾಖೆ ಪಾರದರ್ಶಕ ಮಾಹಿತಿ ನೀಡಬೇಕು.
- ಮಹದಾಯಿ ಮತ್ತು ಮಲಪ್ರಭಾ ನದಿಗಳ ಸಮಸ್ಯೆಗಳನ್ನು ಕಾನೂನು ಚೌಕಟ್ಟಿನೊಳಗೆ ಪಾರದರ್ಶಕವಾಗಿ ಪರಿಹರಿಸಬೇಕು.
- ಭೀಮಗಡ ಮತ್ತು ಮಹದಾಯಿ ವನ್ಯಜೀವಿ ಅಭಯಾರಣ್ಯಗಳನ್ನು ಎರಡೂ ನದಿ ಜಲಾನಯನ ಪ್ರದೇಶಗಳ ಪ್ರಮುಖ ಜಲಮೂಲಗಳೆಂದು ಗುರುತಿಸಬೇಕು.
- ರೈತ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಮ್ಮತದ ಪರಿಹಾರ ಕಂಡುಕೊಳ್ಳಬೇಕು.
- ನದಿ, ಅರಣ್ಯ, ಕೃಷಿ ಮತ್ತು ಪರಿಸರ ಸಂರಕ್ಷಣೆಗೆ ವ್ಯಾಪಕ ಜಾಗೃತಿ ಮೂಡಿಸಬೇಕು.
- ಎಲ್ಲ ಪಾಲುದಾರರಲ್ಲಿ ಜಲಸಾಕ್ಷರತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.
ಸಭೆಯಲ್ಲಿ ಭಾಗವಹಿಸಿದ ಪ್ರಮುಖ ಗಣ್ಯರು
ಸಭೆಯಲ್ಲಿ ಮಹಿಮಾ ಜೆ. ಎಚ್. ಪಟೇಲ್, ಡಾ. ಪ್ರಕಾಶ್ ಭಟ್, ಶಂಕರ ಕುಂಬಿ, ಡಾ. ಗೋಪಾಲ್ ಧಬಾಡೆ, ತಿಮ್ಮಾಪುರ, ವಿಕಾಸ್ ಸೊಪ್ಪಿನ್, ಬಸವಲಿಂಗಪ್ಪ, ಪ್ರತಿಭಾ ಕುಲಕರ್ಣಿ, ಪ್ರೊ. ಸಿದ್ದು ಯಲಾಪರವಿ, ಕಿರಣ್ ಕಟ್ಟಿಮನಿ, ಡಾ. ತುಷಾರ್ ವೈದ್ಯ, ಡಾ. ರಾಧಿಕಾ ದೇಸಾಯಿ, ಪ್ರೊ. ರಾಹುಲ್ ತ್ರಿಪಾಠಿ, ಪ್ರೊ. ಶಫಕತ್ ಅಲಿ ಬದಿಗೇರ್, ಮಿರಿಯಂ ಕೋಶಿ, ದೇವಾನಂದ ಗಾವ್ಡೆ, ಮುತ್ತಣ್ಣ ಯರಗೊಪ್ಪ, ಡಾ. ಶಂಕರಣ್ಣ ಲಂಗಟಿ, ಡಾ. ಶಿವಾಜಿ ಕಾಗಣಿಕರ್, ದಿಲೀಪ್ ಕಾಮತ್, ಕ್ಯಾಪ್ಟನ್ ನಿತಿನ್ ಧೋಂಡ್, ಅಮೃತ್ ಚರಂತಿಮಠ, ಲಿಂಗರಾಜ್ ಜಗಜಂಪಿ, ಅಡ್ವೊಕೇಟ್ ನೀತಾ ಪೊತ್ದಾರ್, ಗೀತಾ ಸಾಹು, ಮಹೇಶ್ ಪಾಟೀಲ್, ನಿರ್ಮಲಾ ಹಿರೇಗೌಡ ಮತ್ತು ಕವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಜಂಟಿ ಆಯೋಜನೆ
ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ಸ್ (NAPM), ಸೌತ್ ಏಷಿಯನ್ಸ್ ಪೀಪಲ್ಸ್ ಆಕ್ಷನ್ ಆನ್ ಕ್ಲೈಮೇಟ್ ಕ್ರೈಸಿಸ್ (SAPACC), ಇಕೋ ವಾಚ್, ಸರ್ವೋದಯ ಸಮಾಜ, ಜಾಗೃತ ಮಹಿಳಾ ಒಕ್ಕೂಟ, ಗಾಂಧಿ ಪೀಸ್ ಫೌಂಡೇಶನ್, ಹುಬ್ಬಳ್ಳಿ-ಧಾರವಾಡ ಪರಿಸರ ನಾಗರಿಕ ಸಮಿತಿ, ಪೀಪಲ್ ಫಸ್ಟ್ ಫೌಂಡೇಶನ್ ಮತ್ತು ವಚನ ಟಿವಿ ಸಂಸ್ಥೆಗಳು ಜಂಟಿಯಾಗಿ ಈ ಸಭೆಯನ್ನು ಆಯೋಜಿಸಿದ್ದವು.
ಸಭೆಯ ಜಂಟಿ ಪತ್ರಿಕಾ ಪ್ರಕಟಣೆಗೆ ನಿರ್ಮಲಾ ಗೌಡ (SAPACC), ಅಡ್ವೊಕೇಟ್ ಆಲ್ಬರ್ಟಿನಾ ಅಲ್ಮೇಡಾ (NAPM), ಶಾರದಾ ಗೋಪಾಲ್ (ಜಾಗೃತ ಮಹಿಳಾ ಒಕ್ಕೂಟ), ಡಾ. ಸಂಜೀವ್ ಕುಲಕರ್ಣಿ (ಗಾಂಧಿ ಪೀಸ್ ಫೌಂಡೇಶನ್) ಮತ್ತು ಸುರೇಶ್ ಹೆಬ್ಳೀಕರ್ (ಇಕೋ ವಾಚ್) ಸಹಿ ಹಾಕಿದ್ದಾರೆ.
ಮಹದಾಯಿ ಮತ್ತು ಮಲಪ್ರಭಾ ನದಿಗಳು ಯಾವುದೇ ಒಂದು ಪ್ರದೇಶ ಅಥವಾ ಸಮುದಾಯಕ್ಕೆ ಮಾತ್ರ ಸೇರಿದ್ದಲ್ಲ. ಅವುಗಳ ಸಂರಕ್ಷಣೆ ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ರಾಜ್ಯಗಳ ಗಡಿ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ರೈತರ ಹಿತಾಸಕ್ತಿ, ಕುಡಿಯುವ ನೀರು ಹಾಗೂ ಪರಿಸರ ಸಮತೋಲನಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಪ್ರತಿನಿಧಿಗಳು ವ್ಯಕ್ತಪಡಿಸಿದರು.
