खानापूर

नंदगड सरकारी रुग्णालयाला विठ्ठलराव हलगेकर यांची भेट; आरोग्य सुविधांबाबत तक्रारींची गंभीर दखल | ನಂದಗಡ ಸರ್ಕಾರಿ ಆಸ್ಪತ್ರೆಗೆ ವಿಠ್ಠಲರಾವ್ ಹಳಗೇಕರ್ ಭೇಟಿ; ಆರೋಗ್ಯ ಸೌಲಭ್ಯಗಳ ಕುರಿತು ದೂರುಗಳಿಗೆ ಗಂಭೀರ ಸ್ಪಂದನೆ

नंदगड : नंदगड येथील सरकारी रुग्णालयाच्या कारभाराबाबत तसेच आवश्यक सोयी-सुविधांच्या अभावामुळे स्थानिक नागरिकांकडून सातत्याने तक्रारी प्राप्त होत होत्या. या तक्रारींची गंभीर दखल घेत आमदार विठ्ठलराव हलगेकर यांनी आज नंदगड सरकारी रुग्णालयाला प्रत्यक्ष भेट देऊन पाहणी केली.

यावेळी रुग्णालयातील आरोग्य सुविधा, औषधांचा साठा, स्वच्छता व्यवस्था तसेच रुग्णांना उपलब्ध करून दिल्या जाणाऱ्या उपचारांचा सविस्तर आढावा घेण्यात आला. तसेच वैद्यकीय अधिकारी व कर्मचाऱ्यांशी चर्चा करून रुग्णांना कोणत्याही प्रकारचा त्रास होणार नाही, याची दक्षता घेण्याच्या कडक सूचना आमदार विठ्ठलराव हलगेकर यांनी दिल्या.

स्थानिक नागरिकांना दर्जेदार व वेळेवर आरोग्य सेवा मिळणे ही प्राथमिक जबाबदारी आहे. रुग्णालयातील अडचणी तातडीने दूर करून आरोग्य यंत्रणा अधिक सक्षम करण्यासाठी आपण कटिबद्ध असल्याचे विठ्ठलराव हलगेकर यांनी यावेळी सांगितले.


ನಂದಗಡ ಸರ್ಕಾರಿ ಆಸ್ಪತ್ರೆಗೆ ವಿಠ್ಠಲರಾವ್ ಹಳಗೇಕರ್ ಭೇಟಿ; ಆರೋಗ್ಯ ಸೌಲಭ್ಯಗಳ ಕುರಿತು ದೂರುಗಳಿಗೆ ಗಂಭೀರ ಸ್ಪಂದನೆ

ನಂದಗಡ : ನಂದಗಡದ ಸರ್ಕಾರಿ ಆಸ್ಪತ್ರೆಯ ಆಡಳಿತ ಹಾಗೂ ಅಗತ್ಯ ಸೌಲಭ್ಯಗಳ ಕೊರತೆಯ ಕುರಿತು ಸ್ಥಳೀಯ ನಾಗರಿಕರಿಂದ ನಿರಂತರ ದೂರುಗಳು ಕೇಳಿಬರುತ್ತಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಜನಪ್ರಿಯ ಶಾಸಕ ವಿಠ್ಠಲರಾವ್ ಹಳಗೇಕರ್ ಅವರು ಇಂದು ನಂದಗಡ ಸರ್ಕಾರಿ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಆರೋಗ್ಯ ಸೌಲಭ್ಯಗಳು, ಔಷಧಗಳ ದಾಸ್ತಾನು, ಸ್ವಚ್ಛತಾ ವ್ಯವಸ್ಥೆ ಹಾಗೂ ರೋಗಿಗಳಿಗೆ ಒದಗಿಸಲಾಗುತ್ತಿರುವ ಚಿಕಿತ್ಸೆಗಳ ಕುರಿತು ವಿವರವಾದ ಪರಿಶೀಲನೆ ನಡೆಸಲಾಯಿತು. ಅಲ್ಲದೆ ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿ, ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಶಾಸಕ ವಿಠ್ಠಲರಾವ್ ಹಳಗೇಕರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಥಳೀಯ ನಾಗರಿಕರಿಗೆ ಗುಣಮಟ್ಟದ ಹಾಗೂ ಸಮಯೋಚಿತ ಆರೋಗ್ಯ ಸೇವೆ ಒದಗಿಸುವುದು ನಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ. ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿ, ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸಕ್ಷಮಗೊಳಿಸಲು ಬದ್ಧರಾಗಿರುವುದಾಗಿ ವಿಠ್ಠಲರಾವ್ ಹಳಗೇಕರ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या