खानापूरात ‘ओअॅसिस जननी यात्रा’ मोबाईल फर्टिलिटी क्लिनिकचे उद्घाटन; वंधत्व उपचारांबाबत जनजागृतीवर भर | ಖಾನಾಪುರದಲ್ಲಿ ‘ಒಯಾಸಿಸ್ ಜನನಿ ಯಾತ್ರೆ’ ಮೊಬೈಲ್ ಫರ್ಟಿಲಿಟಿ ಕ್ಲಿನಿಕ್‌ಗೆ ಚಾಲನೆ; ಸಂತಾನಹೀನತೆ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ
खानापूर, दि. 7 : वंधत्व उपचारांबाबत जनजागृती करणे आणि अत्याधुनिक फर्टिलिटी उपचारांची माहिती ग्रामीण भागातील नागरिकांपर्यंत पोहोचविण्याच्या उद्देशाने ‘ओअॅसिस जननी यात्रा’ मोबाईल फर्टिलिटी क्लिनिकचे उद्घाटन शुक्रवारी खानापूर येथे उत्साहात पार पडले.

या उपक्रमाचे उद्घाटन लैला शुगर्सचे व्यवस्थापकीय संचालक श्री. पाटील यांच्या हस्ते करण्यात आले. कार्यक्रमाला प्रमुख अतिथी म्हणून भाजपचे नेते राजेंद्र रायका, खानापूर तालुका डॉक्टर संघटनेचे अध्यक्ष डॉ. ज्ञानेश्वर नाडगौडा, उपाध्यक्ष डॉ. मदन कुंभार, ज्येष्ठ वैद्यकीय तज्ज्ञ डॉ. सुदर्शन सुळकर, भाजपचे सचिव गुंडू तोपिनकट्टी, सदानंद मासेकर यांच्यासह अनेक मान्यवर उपस्थित होते.

यावेळी मार्गदर्शन करताना डॉ. ज्ञानेश्वर नाडगौडा यांनी वंधत्व ही लाज वाटण्याची किंवा लपवून ठेवण्याची बाब नसून, पुरुष आणि स्त्री या दोघांनीही वैज्ञानिक दृष्टिकोन स्वीकारून आधुनिक वैद्यकीय उपचारांचा लाभ घ्यावा, असे आवाहन केले. आययूआय (IUI), आयव्हीएफ (IVF) तसेच इतर अत्याधुनिक फर्टिलिटी उपचारांमुळे अनेक दाम्पत्यांच्या आयुष्यात आशेचा किरण निर्माण झाला असून, गरजू दाम्पत्यांनी अशा तज्ज्ञ सेवांचा लाभ घ्यावा, असे त्यांनी सांगितले.
यानंतर डॉ. श्वेता सोनवलकर यांनी वंधत्वाची कारणे, आवश्यक वैद्यकीय तपासण्या, आययूआय, आयव्हीएफ तसेच आधुनिक फर्टिलिटी उपचारपद्धतींबाबत सविस्तर माहिती दिली. योग्य वेळी निदान व उपचार केल्यास यशाचे प्रमाण अधिक वाढते, असे त्यांनी स्पष्ट केले. यावेळी उपस्थितांच्या विविध शंकांचेही त्यांनी समाधान केले.
कार्यक्रमाच्या प्रारंभी श्री. इनामदार यांनी मान्यवरांचा परिचय करून दिला. त्यानंतर सर्व पाहुण्यांचा शाल, मैसुरी हार आणि पुष्पगुच्छ देऊन सत्कार करण्यात आला.
या उपक्रमामुळे खानापूर व परिसरातील नागरिकांमध्ये वंधत्व उपचारांविषयी जनजागृती होण्यास मदत होणार असून, तज्ज्ञ डॉक्टरांचे मार्गदर्शन नागरिकांपर्यंत थेट पोहोचणार असल्याची भावना उपस्थितांनी व्यक्त केली. कार्यक्रमास तालुक्यातील नागरिकांची मोठ्या संख्येने उपस्थिती होती.
ಖಾನಾಪುರದಲ್ಲಿ ‘ಒಯಾಸಿಸ್ ಜನನಿ ಯಾತ್ರೆ’ ಮೊಬೈಲ್ ಫರ್ಟಿಲಿಟಿ ಕ್ಲಿನಿಕ್‌ಗೆ ಚಾಲನೆ; ಸಂತಾನಹೀನತೆ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ
ಖಾನಾಪುರ, ಆ. ೭: ಸಂತಾನಹೀನತೆ (ವಂಧ್ಯತ್ವ) ಚಿಕಿತ್ಸೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಆಧುನಿಕ ಫರ್ಟಿಲಿಟಿ ಚಿಕಿತ್ಸೆಗಳ ಮಾಹಿತಿಯನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಉದ್ದೇಶದಿಂದ ‘ಒಯಾಸಿಸ್ ಜನನಿ ಯಾತ್ರೆ’ ಮೊಬೈಲ್ ಫರ್ಟಿಲಿಟಿ ಕ್ಲಿನಿಕ್‌ಗೆ ಶುಕ್ರವಾರ ಖಾನಾಪುರದಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ಲೈಲಾ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪಾಟೀಲ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಜೇಂದ್ರ ರೈಕಾ, ಖಾನಾಪುರ ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ. ಜ್ಞಾನೇಶ್ವರ ನಾಡಗೌಡ, ಉಪಾಧ್ಯಕ್ಷ ಡಾ. ಮದನ ಕುಂಭಾರ, ಹಿರಿಯ ವೈದ್ಯಕೀಯ ತಜ್ಞ ಡಾ. ಸುದರ್ಶನ ಸುಳ್ಕರ್, ಬಿಜೆಪಿ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ಸದಾನಂದ ಮಾಸೇಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಜ್ಞಾನೇಶ್ವರ ನಾಡಗೌಡ, ಸಂತಾನಹೀನತೆ ಎಂಬುದು ಮುಚ್ಚಿಡಬೇಕಾದ ಅಥವಾ ನಾಚಿಕೆಪಡುವ ವಿಷಯವಲ್ಲ. ಪುರುಷ ಮತ್ತು ಮಹಿಳೆ ಇಬ್ಬರೂ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡು ಆಧುನಿಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕು ಎಂದು ಕರೆ ನೀಡಿದರು. ಇಂದು IUI, IVF ಸೇರಿದಂತೆ ಹಲವು ಅತ್ಯಾಧುನಿಕ ಫರ್ಟಿಲಿಟಿ ಚಿಕಿತ್ಸೆಗಳು ಲಭ್ಯವಿದ್ದು, ಇವುಗಳಿಂದ ಅನೇಕ ದಂಪತಿಗಳ ಜೀವನದಲ್ಲಿ ಹೊಸ ಭರವಸೆ ಮೂಡಿದೆ ಎಂದು ಹೇಳಿದರು.
ನಂತರ ಡಾ. ಶ್ವೇತಾ ಸೋನವಲ್ಕರ್ ಅವರು ಸಂತಾನಹೀನತೆಗೆ ಕಾರಣಗಳು, ಅಗತ್ಯ ವೈದ್ಯಕೀಯ ಪರೀಕ್ಷೆಗಳು, IUI, IVF ಹಾಗೂ ಇತರ ಆಧುನಿಕ ಫರ್ಟಿಲಿಟಿ ಚಿಕಿತ್ಸೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸರಿಯಾದ ಸಮಯದಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದರೆ ಯಶಸ್ಸಿನ ಪ್ರಮಾಣ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು. ಇದೇ ವೇಳೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ಅವರ ಅನುಮಾನಗಳನ್ನು ನಿವಾರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಇನಾಮದಾರ್ ಅವರು ಗಣ್ಯರನ್ನು ಪರಿಚಯಿಸಿದರು. ಬಳಿಕ ಎಲ್ಲ ಅತಿಥಿಗಳನ್ನು ಶಾಲು, ಮೈಸೂರು ಹಾರ ಹಾಗೂ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.
ಈ ಉಪಕ್ರಮದಿಂದ ಖಾನಾಪುರ ಹಾಗೂ ಸುತ್ತಮುತ್ತಲಿನ ಜನರಲ್ಲಿ ಸಂತಾನಹೀನತೆ ಚಿಕಿತ್ಸೆಯ ಬಗ್ಗೆ ಜಾಗೃತಿ ಹೆಚ್ಚುವುದರ ಜೊತೆಗೆ, ತಜ್ಞ ವೈದ್ಯರ ಮಾರ್ಗದರ್ಶನ ಜನರ ಮನೆಬಾಗಿಲಿಗೆ ತಲುಪಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

