बेळगाव-गोवा महामार्गावर बस चिखलात रुतली, प्रवाशांचे हाल! | ಬೆಳಗಾವಿ-ಗೋವಾ ಹೆದ್ದಾರಿಯ ರಾಮನಗರ-ವರಕಡ ಭಾಗದಲ್ಲಿ ಬಸ್ ಕೆಸರಿನಲ್ಲಿ ಸಿಲುಕಿದ ದೃಶ್ಯ
खानापूर: बेळगाव-गोवा महामार्गाची अवस्था सध्या अत्यंत बिकट झाली असून, हा रस्ता आहे की चिखलाचे शेत, असा प्रश्न प्रवाशांना पडला आहे. रामनगर-वरकड मार्गावर चिखलाचे साम्राज्य पसरले असून, नुकत्याच घडलेल्या एका घटनेत चिखलात बस रुतल्याने प्रवाशांचे हाल झाले आहेत.
नेमकी घटना काय?
बेळगाव-गोवा महामार्गावरील रामनगर-वरकड पट्ट्यात रस्त्याची दुरवस्था झाली आहे. पावसामुळे हा रस्ता चिखलमय झाला असून, वाहनचालकांसाठी हा मार्ग जीवघेणा ठरत आहे. याच मार्गावरून जाणारी कर्नाटक राज्य परिवहन मंडळाची (KSRTC) एक बस चिखलात अडकली. यामुळे प्रवाशांना नाहक मनस्ताप सहन करावा लागला. केवळ वाहनेच नव्हे, तर पादचाऱ्यांनाही या मार्गावरून चालणे कठीण झाले आहे.
लोकप्रतिनिधींच्या दुर्लक्षामुळे संताप
या रस्त्याच्या दुरवस्थेबाबत स्थानिक नागरिक आणि वाहनचालकांनी संबंधित लोकप्रतिनिधी व अधिकाऱ्यांकडे अनेकदा तक्रारी केल्या आहेत. मात्र, अद्याप कोणतीही ठोस कारवाई झालेली नाही. प्रशासनाच्या या बेजबाबदारपणामुळे नागरिकांमध्ये तीव्र संताप व्यक्त होत आहे. “आमचे दुःख कोणालाच दिसत नाही का?” असा सवाल नागरिक उपस्थित करत आहेत.
तीव्र आंदोलनाचा इशारा
रस्त्याची तात्काळ दुरुस्ती न केल्यास प्रशासनाविरोधात तीव्र आंदोलन करण्याचा इशारा स्थानिक नागरिकांनी दिला आहे. जीवघेण्या ठरत असलेल्या या रस्त्याकडे प्रशासन कधी लक्ष देणार, याकडे आता सर्वांचे लक्ष लागले आहे.
ಬೆಳಗಾವಿ-ಗೋವಾ ಹೆದ್ದಾರಿಯ ರಾಮನಗರ-ವರಕಡ ಭಾಗದಲ್ಲಿ ಬಸ್ ಕೆಸರಿನಲ್ಲಿ ಸಿಲುಕಿದ ದೃಶ್ಯ
ಖಾನಾಪುರ: ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ರಾಮನಗರ-ವರಕಡ ಮಾರ್ಗವು ಇದೀಗ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ‘ಇದು ರಸ್ತೆಯೋ ಅಥವಾ ಕಂಬಳದ ಗದ್ದೆಯೋ?’ ಎಂಬ ಪ್ರಶ್ನೆ ವಾಹನ ಸವಾರರ ಪಾಲಿಗೆ ಕಾಡುವಂತಾಗಿದೆ.
ಪ್ರಯಾಣಿಕರ ಪರದಾಟ:
ಇತ್ತೀಚೆಗಷ್ಟೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ದಪ್ಪನೆಯ ಕೆಸರಿನಲ್ಲಿ ಸಿಲುಕಿ ಹಾಕಿಕೊಂಡಿತು. ಇದರಿಂದಾಗಿ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಅದೆಷ್ಟೋ ಬಾರಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಪಾದಚಾರಿಗಳಂತೂ ಈ ಮಾರ್ಗದಲ್ಲಿ ನಡೆದಾಡಲು ಸಾಧ್ಯವಿಲ್ಲದಷ್ಟು ನರಕಸದೃಶ ವಾತಾವರಣ ಉಂಟಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ:
ಈ ರಸ್ತೆಯ ಅವ್ಯವಸ್ಥೆಯ ಕುರಿತು ಸ್ಥಳೀಯರು ಮತ್ತು ವಾಹನ ಸವಾರರು ಹಲವು ಬಾರಿ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ, ಇದುವರೆಗೆ ಯಾವುದೇ ಸೂಕ್ತ ದುರಸ್ತಿ ಕಾರ್ಯ ಅಥವಾ ಶಾಶ್ವತ ಪರಿಹಾರ ಕೈಗೊಂಡಿಲ್ಲ. ಅಧಿಕಾರದಲ್ಲಿರುವವರ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, “ನಮ್ಮ ಗೋಳು ಕೇಳುವವರು ಯಾರೂ ಇಲ್ಲವೇ?” ಎಂದು ಹತಾಶೆಯಿಂದ ಪ್ರಶ್ನಿಸುತ್ತಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ:
ಕೂಡಲೇ ರಸ್ತೆಯನ್ನು ದುರಸ್ತಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಕಚೇರಿಗಳಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಮತ್ತು ಸಂಘಟನೆಗಳು ಎಚ್ಚರಿಕೆ ನೀಡಿವೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳುತ್ತಾರೆಯೇ ಅಥವಾ ಸ್ಥಳೀಯರ ಹೋರಾಟಕ್ಕೆ ದಾರಿ ಮಾಡಿಕೊಡುತ್ತಾರೆಯೇ ಕಾದು ನೋಡಬೇಕಿದೆ.
