खानापूर: निडगल येथील सरकारी मराठी शाळेत शिक्षकांचा सत्कार सोहळा संपन्न | ನಿಡಗಲ್ ಸರ್ಕಾರಿ ಮರಾಠಿ ಶಾಲೆಯಲ್ಲಿ ಶಿಕ್ಷಕರ ಸನ್ಮಾನ ಸಮಾರಂಭ
खानापूर: खानापूर तालुक्यातील निडगल येथील सरकारी उच्च प्राथमिक मराठी शाळेत शनिवारी (२७ जून) सेवानिवृत्त आणि पदोन्नती मिळालेल्या शिक्षकांचा सत्कार सोहळा उत्साहात पार पडला. सेवानिवृत्त शिक्षक एम. पी. कदम यांच्या अध्यक्षतेखाली झालेल्या या कार्यक्रमात, सेवानिवृत्त कन्नड शिक्षक एस. एल. कंबळीमठ, पदोन्नती मिळालेले मुख्याध्यापक ओ. एन. मादार आणि नवीन पदोन्नती मिळालेले मुख्याध्यापक पी. डी. कुंभार यांचा शाळा व शाळा समितीच्या वतीने शाल आणि पुष्पहार अर्पण करून गौरव करण्यात आला.
यावेळी सीआरपी मुल्ला, एस.डी.एम.सी. अध्यक्ष विनायक कदम आणि उपाध्यक्ष रेणुका लोहार प्रमुख पाहुणे म्हणून उपस्थित होते. तसेच, खानापूर तालुका शिक्षक संघाचे संचालक पिराजी पाखरे, सतीश हळदणकर, शिक्षक सोसायटीचे अध्यक्ष एम. व्ही. कुंभार, उपाध्यक्ष डी. एस. सोनारवाडकर, माजी अध्यक्ष बबन पाटील, संचालक जे. पी. पाटील, तोपिनकट्टी मराठी शाळेचे मुख्याध्यापक एस. डी. पाटील यांच्यासह बरगाव केंद्रातील सर्व मुख्याध्यापक, शिक्षकवृंद आणि विद्यार्थी मोठ्या संख्येने उपस्थित होते.
कार्यक्रमाच्या सुरुवातीला ज्येष्ठ शिक्षक एस. आर. पाटील यांनी प्रास्ताविक केले. रूपाली चिट्टी यांनी सूत्रसंचालन केले, तर जंगली यांनी आभार मानले.
ಖಾನಾಪುರ: ನಿಡಗಲ್ ಸರ್ಕಾರಿ ಮರಾಠಿ ಶಾಲೆಯಲ್ಲಿ ಶಿಕ್ಷಕರ ಸನ್ಮಾನ ಸಮಾರಂಭ
ಖಾನಾಪುರ: ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಶನಿವಾರ (ಜೂನ್ 27) ನಿವೃತ್ತ ಹಾಗೂ ಬಡ್ತಿ ಹೊಂದಿದ ಶಿಕ್ಷಕರ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಶಿಕ್ಷಕ ಎಂ. ಪಿ. ಕದಂ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ನಿವೃತ್ತ ಕನ್ನಡ ಶಿಕ್ಷಕ ಎಸ್. ಎಲ್. ಕಂಬಳಿಮಠ, ಬಡ್ತಿ ಹೊಂದಿದ ಮುಖ್ಯೋಪಾಧ್ಯಾಯ ಓ. ಎನ್. ಮಾದಾರ್ ಹಾಗೂ ನೂತನ ಬಡ್ತಿ ಮುಖ್ಯೋಪಾಧ್ಯಾಯ ಪಿ. ಡಿ. ಕುಂಬಾರ್ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸಮಿತಿಯ ವತಿಯಿಂದ ಶಾಲು ಹೊದಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿಆರ್ಪಿ ಮುಲ್ಲಾ, ಎಸ್ಡಿಎಂಸಿ ಅಧ್ಯಕ್ಷ ವಿನಾಯಕ ಕದಂ ಹಾಗೂ ಉಪಾಧ್ಯಕ್ಷೆ ರೇಣುಕಾ ಲೋಹಾರ್ ಅವರು ಪ್ರಮುಖ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಖಾನಾಪುರ ತಾಲೂಕು ಶಿಕ್ಷಕ ಸಂಘದ ನಿರ್ದೇಶಕ ಪೀರಾಜಿ ಪಾಖರೆ, ಸತೀಶ್ ಹಳದಣಕರ್, ಶಿಕ್ಷಕರ ಸೊಸೈಟಿ ಅಧ್ಯಕ್ಷ ಎಂ. ವಿ. ಕುಂಬಾರ್, ಉಪಾಧ್ಯಕ್ಷ ಡಿ. ಎಸ್. ಸೋನಾರವಾಡ್ಕರ್, ಮಾಜಿ ಅಧ್ಯಕ್ಷ ಬಬನ್ ಪಾಟೀಲ್, ನಿರ್ದೇಶಕ ಜೆ. ಪಿ. ಪಾಟೀಲ್, ತೋಪಿನಕಟ್ಟಿ ಮರಾಠಿ ಶಾಲೆಯ ಮುಖ್ಯೋಪಾಧ್ಯಾಯ ಎಸ್. ಡಿ. ಪಾಟೀಲ್ ಸೇರಿದಂತೆ ಬರಗಾಂವ್ ಕೇಂದ್ರದ ಎಲ್ಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕ ಎಸ್. ಆರ್. ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಪಾಲಿ ಚಿಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಜಂಗಲಿ ಅವರು ವಂದನಾರ್ಪಣೆ ಸಲ್ಲಿಸಿದರು.
