मणतुर्गा ते मणतुर्गा वाडा रस्त्याचा प्रश्न रखडला; रस्त्यासाठी ग्रामस्थ आक्रमक | ಮಣತುರ್ಗಾದಿಂದ ಮಣತುರ್ಗಾ ವಾಡಾ ರಸ್ತೆ ಪ್ರಶ್ನೆ ಮತ್ತೆ ಗಂಭೀರ; ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಕ್ರೋಶ
खानापूर: तालुक्यातील मणतुर्गा गावातून मणतुर्गा वाड्याकडे जाणाऱ्या रस्त्याच्या प्रश्नावर ग्रामस्थांनी पुन्हा एकदा नाराजी व्यक्त केली आहे. विद्यार्थ्यांच्या शाळेच्या दृष्टीने तसेच ग्रामस्थांच्या दैनंदिन ये-जा करण्यासाठी महत्त्वाचा असलेला हा रस्ता अद्याप पूर्ण न झाल्याने नागरिकांनी प्रशासनाला जाब विचारला आहे.

मणतुर्गा गावात प्राथमिक शाळा सातवीपर्यंत असून मणतुर्गा वाड्यात माध्यमिक शाळा आहे. त्यामुळे अनेक विद्यार्थ्यांना दररोज या मार्गाने प्रवास करावा लागतो.
ग्रामस्थांच्या म्हणण्यानुसार, हा रस्ता पूर्वीपासून वापरात असून त्यासाठी ग्रामसभेत ठराव करण्यात आला होता. तसेच हा रस्ता स्वतः तशीलदार आणि महसूल विभागाने पाहणी करून रस्ता नकाशामध्ये नोंद असल्याचे स्पष्ट केले होते. रस्त्याचा काही भाग मनरेगा (MGNREGA) योजनेत समाविष्ट करण्यात आला असून तहसीलदारांनीही हा रस्ता विद्यार्थ्यांसाठी अत्यावश्यक असल्याचे सांगत PDO यांना काम तातडीने सुरू करण्याचे निर्देश दिले होते. मात्र, आदेशानंतरही अद्याप रस्त्याचे काम सुरू झाले नसल्याने ग्रामस्थांमध्ये नाराजी व्यक्त होत आहे.

“तहसीलदारांनी स्पष्ट निर्देश दिल्यानंतरही रस्ता का होत नाही? कामाला इतका विलंब का होत आहे?” असा सवाल ग्रामस्थांनी प्रशासनाला केला आहे. तसेच PDO यांनी तातडीने लक्ष घालून मणतुर्गा वाडा रस्त्याचे काम लवकर पूर्ण करावे, अशी मागणीही ग्रामस्थांनी केली आहे.
ಮಣತುರ್ಗಾ ವಾಡಾ ರಸ್ತೆ ಕಾಮಗಾರಿ ವಿಳಂಬ; ತಹಶೀಲ್ದಾರರ ಸೂಚನೆಯಾದರೂ ಇನ್ನೂ ಕಾರ್ಯಾರಂಭವಾಗಿಲ್ಲ
ಖಾನಾಪುರ ಪ್ರತಿನಿಧಿ :
ಖಾನಾಪುರ ತಾಲ್ಲೂಕಿನ ಮಣತುರ್ಗಾ ಗ್ರಾಮದಿಂದ ಮಣತುರ್ಗಾ ವಾಡಾಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ಗ್ರಾಮಸ್ಥರು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಸಂಚಾರಕ್ಕೆ ಅತ್ಯಂತ ಅಗತ್ಯವಾಗಿರುವ ಈ ರಸ್ತೆ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮಸ್ಥರ ಮಾಹಿತಿಯಂತೆ, ಮಣತುರ್ಗಾ ಗ್ರಾಮದಲ್ಲಿ 7ನೇ ತರಗತಿವರೆಗೆ ಪ್ರಾಥಮಿಕ ಶಾಲೆ ಇದ್ದು, ಮಣತುರ್ಗಾ ವಾಡಾದಲ್ಲಿ ಪ್ರೌಢಶಾಲೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಪ್ರತಿದಿನ ಇದೇ ದಾರಿಯಲ್ಲಿ ಶಾಲೆಗೆ ತೆರಳಬೇಕಾಗುತ್ತದೆ. ಅಲ್ಲದೆ ಗ್ರಾಮಸ್ಥರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೂ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ.
ಈ ರಸ್ತೆ ಹಳೆಯ ಕಾಲದಿಂದಲೂ ಬಳಕೆಯಲ್ಲಿದ್ದು, ಇದನ್ನು ಅಧಿಕೃತ ರಸ್ತೆಯಾಗಿ ಅಭಿವೃದ್ಧಿಪಡಿಸಲು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ महसೂಲ್ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ರಸ್ತೆ ನಕ್ಷೆಯಲ್ಲಿ ದಾಖಲಾಗಿರುವುದಾಗಿ ತಿಳಿಸಿದ್ದರು. ಸುಮಾರು 9.2 ಅಡಿ ಅಗಲದ ರಸ್ತೆ ಸಮೀಕ್ಷೆಯೂ ನಡೆದಿದ್ದು, ರಸ್ತೆ ಕಾಮಗಾರಿಯ ಒಂದು ಭಾಗವನ್ನು ಮನರೇಗಾ (MGNREGA) ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರ ಆರೋಪದಂತೆ, ಕೆಲವು ವ್ಯಕ್ತಿಗಳ ವಿರೋಧದಿಂದ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಈ ರಸ್ತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ ಎಂದು ತಹಶೀಲ್ದಾರರು PDO ಅವರಿಗೆ ಕೂಡ ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದರು. ಆದರೂ ಇದುವರೆಗೆ ರಸ್ತೆ ಕಾಮಗಾರಿ ಪ್ರಾರಂಭವಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
“ತಹಶೀಲ್ದಾರರು ಸೂಚನೆ ನೀಡಿದ ಮೇಲೂ ರಸ್ತೆ ಕಾಮಗಾರಿ ಯಾಕೆ ಆರಂಭವಾಗಿಲ್ಲ? ಇನ್ನಷ್ಟು ಎಷ್ಟು ಕಾಲ ಕಾಯಬೇಕು?” ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. PDO ಅವರು ತಕ್ಷಣ ಕ್ರಮ ಕೈಗೊಂಡು ಮಣತುರ್ಗಾ ವಾಡಾ ರಸ್ತೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
