ऊस तोडणीदरम्यान अपघात; दोन महिला मजुरांचा जागीच मृत्यू | ಕಬ್ಬು ಕಟಾವು ಯಂತ್ರದ ಅಪಘಾತ: ಇಬ್ಬರು ಮಹಿಳೆಯರ ದುರ್ಮರಣ
अथणी तालुक्यातील सत्ती गावाच्या शिवारात ऊस तोडणीदरम्यान झालेल्या भीषण अपघातात दोन महिला मजुरांचा जागीच मृत्यू झाला. ही हृदयद्रावक घटना आज दुपारी घडली.
सत्ती गावाच्या हद्दीतील काडगौडा पाटील यांच्या शेतात दुपारी सुमारे २ वाजताच्या सुमारास आधुनिक मशीनद्वारे ऊस कापणी सुरू होती. कापलेला ऊस मशीनच्या मागील भागात गोळा करण्याचे काम बौराव्वा लक्ष्मण कोबडी (वय ६०) आणि लक्ष्मीबाई मल्लप्पा रुद्रगौडर (वय ६५) या दोन्ही महिला मजूर करत होत्या. यावेळी मशीनचा अंदाज न आल्याने किंवा तांत्रिक बिघाडामुळे त्या मशीनच्या मागील भागात अडकल्या. या अपघातात दोघींचाही जागीच मृत्यू झाला.
घटनेची माहिती मिळताच अथणी पोलीस ठाण्याचे अधिकारी तातडीने घटनास्थळी दाखल झाले. त्यांनी पंचनामा करून मृतदेह ताब्यात घेतले. या दुर्घटनेनंतर मृत महिलांच्या कुटुंबीयांनी आक्रोश केला असून सत्ती गावासह परिसरात शोककळा पसरली आहे. या प्रकरणी अथणी पोलीस ठाण्यात नोंद करण्यात आली असून पुढील तपास सुरू आहे.
ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದ ವ್ಯಾಪ್ತಿಯಲ್ಲಿ ಕಬ್ಬು ಕಟಾವು ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಸತ್ತಿ ಗ್ರಾಮದ ವ್ಯಾಪ್ತಿಯ ಕಡಗೌಡ ಪಾಟೀಲ ಅವರ ಹೊಲದಲ್ಲಿ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಆಧುನಿಕ ಯಂತ್ರದ ಮೂಲಕ ಕಬ್ಬು ಕಟಾವು ನಡೆಯುತ್ತಿತ್ತು. ಕಟಾವು ಮಾಡಿದ ಕಬ್ಬನ್ನು ಯಂತ್ರದ ಹಿಂಭಾಗದಲ್ಲಿ ಸಂಗ್ರಹಿಸುವ ಕೆಲಸವನ್ನು ಬೌರಮ್ಮ ಲಕ್ಷ್ಮಣ ಕೋಬಡಿ (ವಯಸ್ಸು 60) ಹಾಗೂ ಲಕ್ಷ್ಮೀಬಾಯಿ ಮಲ್ಲಪ್ಪ ರುದ್ರಗೌಡರ (ವಯಸ್ಸು 65) ಎಂಬ ಇಬ್ಬರು ಮಹಿಳಾ ಕಾರ್ಮಿಕರು ಮಾಡುತ್ತಿದ್ದರು. ಈ ವೇಳೆ ಯಂತ್ರದ ಕಾರ್ಯವಿಧಾನದ ಅಂದಾಜು ತಪ್ಪಿದ ಕಾರಣ ಅಥವಾ ತಾಂತ್ರಿಕ ದೋಷದಿಂದಾಗಿ ಇಬ್ಬರೂ ಯಂತ್ರದ ಹಿಂಭಾಗದಲ್ಲಿ ಸಿಲುಕಿಕೊಂಡರು. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಥಣಿ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಕೈಗೊಂಡಿದ್ದಾರೆ. ಈ ದುರ್ಘಟನೆಯಿಂದ ಮೃತರ ಕುಟುಂಬಸ್ಥರು ಆಕ್ರಂದನಕ್ಕೆ ಒಳಗಾಗಿದ್ದು, ಸತ್ತಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶೋಕದ ವಾತಾವರಣ ಆವರಿಸಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
