खानापूरमध्ये उद्या श्री विश्वकर्मा मंदिरात धार्मिक कार्यक्रम, महाप्रसाद व देणगी कुपनचे उद्घाटन | ಖಾನಾಪುರದಲ್ಲಿ ನಾಳೆ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ
खानापूर : प्रतिनिधी
श्री विश्वकर्मा समाज विकास मंदिर ट्रस्ट, खानापूर यांच्या वतीने उद्या, शुक्रवार दिनांक 19 डिसेंबर रोजी अमावास्येनिमित्त श्री विश्वकर्मा मंदिरात धार्मिक कार्यक्रमांचे आयोजन करण्यात आले आहे. या कार्यक्रमाच्या निमित्ताने श्री प्रभू विश्वकर्मा जन्मोत्सवानिमित्त देणगी कूपनचे उद्घाटन करण्यात येणार आहे. यावेळी सकाळी पूजा व अभिषेक, त्यानंतर महाप्रसाद, तसेच भजन कार्यक्रम होणार आहे. या भजन कार्यक्रमात महिला भजन मंडळ, मजगाव सहभागी होणार आहे.
या महाप्रसादाचे आयोजन देवस्थान ट्रस्टचे अध्यक्ष मा. श्री अशोक क. सुतार यांच्या सौजन्याने करण्यात आले आहे. समाजहितासाठी सातत्याने कार्य करणारे, दानशूर व प्रेमळ व्यक्तिमत्त्व म्हणून परिचित असलेल्या श्री. सुतार यांनी एक स्तुत्य संकल्प जाहीर केला असून, दरवर्षी डिसेंबर महिन्यात येणाऱ्या अमावास्येचा महाप्रसाद त्यांच्या वतीनेच आयोजित केला जाईल, असे त्यांनी सांगितले आहे. त्यांच्या या योगदानाबद्दल श्री विश्वकर्मा समाज विकास मंदिर ट्रस्टच्या वतीने कृतज्ञता व्यक्त करण्यात आली आहे.

दरम्यान, श्री प्रभू विश्वकर्मा जन्मोत्सवाच्या निमित्ताने आयोजित करण्यात येणाऱ्या देणगी कूपनाची माहिती देण्यात आली आहे. या देणगी कूपनाची किंमत फक्त रु. 200 इतकी ठेवण्यात आली असून, या कूपनाच्या माध्यमातून मिळणारा निधी मंदिर व समाजाच्या विकासात्मक कार्यासाठी वापरण्यात येणार आहे. या देणगी कूपन सोडतीचा कार्यक्रम रविवार, दिनांक 15 फेब्रुवारी 2026 रोजी श्री विश्वकर्मा मंदिर, गोवा क्रॉस, करंबळ, खानापूर, जिल्हा बेळगाव येथे होणार आहे. या सोडतीमध्ये पहिले बक्षीस ते अकरावे बक्षीस अशी विविध आकर्षक बक्षिसे ठेवण्यात आली आहेत.
समाजातील सर्व भाविक, बांधव व नागरिकांनी उद्याच्या कार्यक्रमाचा लाभ घ्यावा तसेच देणगी कूपनाच्या माध्यमातून श्री प्रभू विश्वकर्मा जन्मोत्सव व मंदिराच्या उपक्रमात सक्रिय सहभाग नोंदवावा, असे आवाहन श्री विश्वकर्मा समाज विकास मंदिर ट्रस्ट, खानापूर यांच्या वतीने करण्यात आले आहे.
ಖಾನಾಪುರದಲ್ಲಿ ನಾಳೆ ಅಮಾವಾಸ್ಯೆ ನಿಮಿತ್ತ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ
॥ ಶ್ರೀ ವಿಶ್ವಕರ್ಮ ಪ್ರಸನ್ನ ॥
ಖಾನಾಪುರ : ಪ್ರತಿನಿಧಿ
ಶ್ರೀ ವಿಶ್ವಕರ್ಮ ಸಮಾಜ ವಿಕಾಸ ದೇವಸ್ಥಾನ ಟ್ರಸ್ಟ್, ಖಾನಾಪುರ ಇವರ ವತಿಯಿಂದ ನಾಳೆ, ಗುರುವಾರ ದಿನಾಂಕ 19 ಡಿಸೆಂಬರ್ ರಂದು ಅಮಾವಾಸ್ಯೆ ನಿಮಿತ್ತ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀ ಪ್ರಭು ವಿಶ್ವಕರ್ಮ ಜನ್ಮೋತ್ಸವದ ನಿಮಿತ್ತ ದೇಣಿಗೆ ಕೂಪನ್ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಡಿ ಬೆಳಿಗ್ಗೆ ಪೂಜೆ ಮತ್ತು ಅಭಿಷೇಕ, ನಂತರ ಮಹಾಪ್ರಸಾದ, ಹಾಗು ಮಹಾಪ್ರಸಾದದ ನಂತರ ಮಧ್ಯಾಹ್ನ 10 ರಿಂದ 12 ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಈ ಭಜನಾ ಕಾರ್ಯಕ್ರಮದಲ್ಲಿ ಮಹಿಳಾ ಭಜನಾ ಮಂಡಳಿ, ಮಜಗಾವ್ ಭಾಗವಹಿಸಲಿದ್ದಾರೆ.
ಈ ಮಹಾಪ್ರಸಾದವನ್ನು ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಮಾನ್ಯ ಶ್ರೀ ಅಶೋಕ ಕೆ. ಸುತಾರ ಅವರ ಸೌಜನ್ಯದಿಂದ ಆಯೋಜಿಸಲಾಗಿದೆ. ಸಮಾಜ ಹಿತಕ್ಕಾಗಿ ಸದಾ ಕಾರ್ಯನಿರ್ವಹಿಸುವ ದಾನಶೀಲ ಹಾಗೂ ಪ್ರೀತಿಪಾತ್ರ ವ್ಯಕ್ತಿತ್ವವಾಗಿರುವ ಶ್ರೀ ಸುತಾರ ಅವರು, ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಬರುವ ಅಮಾವಾಸ್ಯೆಯ ಮಹಾಪ್ರಸಾದವನ್ನು ತಮ್ಮ ವತಿಯಲ್ಲೇ ಆಯೋಜಿಸುವೆನು ಎಂಬ ಶ್ಲಾಘನೀಯ ಸಂಕಲ್ಪವನ್ನು ಪ್ರಕಟಿಸಿದ್ದಾರೆ. ಅವರ ಈ ಕೊಡುಗೆಗೆ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ದೇವಸ್ಥಾನ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
ಇದಕ್ಕೂ ಜೊತೆಗೆ ಶ್ರೀ ಪ್ರಭು ವಿಶ್ವಕರ್ಮ ಜನ್ಮೋತ್ಸವದ ಅಂಗವಾಗಿ ದೇಣಿಗೆ ಕೂಪನ್ ಕುರಿತು ಮಾಹಿತಿಯನ್ನು ನೀಡಲಾಗಿದೆ. ಈ ದೇಣಿಗೆ ಕೂಪನ್‌ನ ದರವನ್ನು ಕೇವಲ ರೂ. 200 ಎಂದು ನಿಗದಿಪಡಿಸಲಾಗಿದೆ. ದೇಣಿಗೆ ಕೂಪನ್ ಸೋಡತಿ ಕಾರ್ಯಕ್ರಮವು ಭಾನುವಾರ, ದಿನಾಂಕ 15 ಫೆಬ್ರವರಿ 2026 ರಂದು ಶ್ರೀ ವಿಶ್ವಕರ್ಮ ದೇವಸ್ಥಾನ, ಗೋವಾ ಕ್ರಾಸ್, ಕರಂಬಳ, ಖಾನಾಪುರ, ಬೆಳಗಾವಿ ಜಿಲ್ಲೆ ಇಲ್ಲಿ ನಡೆಯಲಿದೆ. ಈ ಸೋಡತಿಯಲ್ಲಿ ಮೊದಲ ಬಹುಮಾನದಿಂದ ಹನ್ನೊಂದನೇ ಬಹುಮಾನವರೆಗೆ ವಿವಿಧ ಆಕರ್ಷಕ ಬಹುಮಾನಗಳನ್ನು ನಿಗದಿಪಡಿಸಲಾಗಿದೆ.
ಭಕ್ತರು, ಸಮಾಜದ ಬಾಂಧವರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಳೆಯ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ದೇಣಿಗೆ ಕೂಪನ್ ಮೂಲಕ ಶ್ರೀ ಪ್ರಭು ವಿಶ್ವಕರ್ಮ ಜನ್ಮೋತ್ಸವ ಮತ್ತು ದೇವಸ್ಥಾನದ ಕಾರ್ಯಗಳಲ್ಲಿ ಸಹಕರಿಸಬೇಕೆಂದು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ದೇವಸ್ಥಾನ ಟ್ರಸ್ಟ್, ಖಾನಾಪುರ ಇವರ ವತಿಯಿಂದ ವಿನಂತಿಸಲಾಗಿದೆ.
