वर्षानुवर्षांच्या दुर्लक्षाला अखेर अंत;आमदार फंडातून विद्यानगरच्या उपनगरामध्ये सीसी रोड | ಶಾಸಕ ವಿಠ್ಠಲರಾವ್ ಹಲಗೇಕರ್ ಹಸ್ತಕ್ಷೇಪದಿಂದ ವಿದ್ಯಾನಗರ ಉಪನಗರ ರಸ್ತೆ ಸಮಸ್ಯೆಗೆ ಪರಿಹಾರ
खानापूर: खानापूर शहरातील जुन्या कुस्ती मैदानासमोर वसलेल्या विद्यानगरच्या उपनगर परिसरातील रस्ते व गटारींच्या समस्यांकडे गेल्या 25 वर्षांपासून दुर्लक्ष झाले होते. या कालावधीत येथील कोणत्याही आमदार, नगरसेवकाने या प्रश्नाकडे गांभीर्याने लक्ष दिले नव्हते. मात्र विद्यमान आमदार श्री. विठ्ठलराव हलगेकर यांनी येथील नागरिकांच्या अडचणी जाणून घेत या रस्त्याचा प्रश्न अखेर मार्गी लावला आहे.

विद्यानगर-उपनगर परिसरातील रस्ते व गटारींची दयनीय अवस्था लक्षात घेऊन आमदार विठ्ठलराव हलगेकर यांनी आमदार निधीतून सीसी रोडसाठी मंजुरी दिली. त्यानुसार संबंधित रस्त्याच्या कामाला आता प्रत्यक्ष सुरुवात झाली असून, त्यामुळे परिसरातील नागरिकांमध्ये समाधान आणि आनंदाचे वातावरण निर्माण झाले आहे.

25 वर्षांच्या कालावधीनंतर विद्यानगरातील रस्त्याची समस्या सोडविण्यासाठी पुढाकार घेणारे आणि स्वतः परिसरात येऊन नागरिकांच्या अडचणी आपुलकीने ऐकून घेणारे पहिले आमदार विठ्ठलराव हलगेकरच आहेत, अशी प्रतिक्रिया स्थानिक नागरिकांनी व्यक्त केली आहे. यानिमित्ताने विद्यानगर परिसरातील रहिवाशांनी आमदारांची भेट घेऊन आपल्या भावना व्यक्त करत त्यांचे आभार मानले.
ಖಾನಾಪುರ :
ಖಾನಾಪುರ ನಗರದ ಹಳೆಯ ಕುಸ್ತಿ ಮೈದಾನದ ಎದುರು ಇರುವ ವಿದ್ಯಾನಗರ ಉಪನಗರ ಪ್ರದೇಶದಲ್ಲಿ ಕಳೆದ ೨೫ ವರ್ಷಗಳಿಂದ ರಸ್ತೆ ಹಾಗೂ ಚರಂಡಿ ಸಮಸ್ಯೆಗಳು ಗಂಭೀರವಾಗಿದ್ದರೂ ಇದಕ್ಕೆ ಯಾವುದೇ ಶಾಸಕರು, ನಗರಸಭಾ ಸದಸ್ಯರು ಅಥವಾ ನಗರ ಪಂಚಾಯಿತಿ ಸಮರ್ಪಕವಾಗಿ ಸ್ಪಂದಿಸಿರಲಿಲ್ಲ. ಆದರೆ ಪ್ರಸ್ತುತ ಶಾಸಕರಾದ ಶ್ರೀ ವಿಠ್ಠಲರಾವ್ ಹಲಗೇಕರ್ ಅವರು ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಅರಿತುಕೊಂಡು ಈ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದ್ದಾರೆ.
ವಿದ್ಯಾನಗರ ಪ್ರದೇಶದ ರಸ್ತೆ ಹಾಗೂ ಚರಂಡಿಗಳ ದಯನೀಯ ಸ್ಥಿತಿಯನ್ನು ಗಮನಿಸಿದ ಶಾಸಕರಾದ ವಿಠ್ಠಲರಾವ್ ಹಲಗೇಕರ್ ಅವರು ಶಾಸಕರ ನಿಧಿಯಿಂದ ಸಿಸಿ ರಸ್ತೆಗೆ ಅನುಮೋದನೆ ನೀಡಿದ್ದು, ಅದರಂತೆ ಈಗ ರಸ್ತೆ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ದೊರೆತಿದೆ. ಕಾಮಗಾರಿ ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರದೇಶದ ನಾಗರಿಕರಲ್ಲಿ ಸಂತೋಷ ಹಾಗೂ ತೃಪ್ತಿಯ ವಾತಾವರಣ ನಿರ್ಮಾಣವಾಗಿದೆ.
೨೫ ವರ್ಷಗಳ ಬಳಿಕ ವಿದ್ಯಾನಗರದ ರಸ್ತೆ ಸಮಸ್ಯೆ ಬಗೆಹರಿಸಲು ಮುಂದಾಗಿ, ಸ್ವತಃ ಸ್ಥಳಕ್ಕೆ ಭೇಟಿ ನೀಡಿ ನಾಗರಿಕರ ಅಹವಾಲುಗಳನ್ನು ಆತ್ಮೀಯವಾಗಿ ಆಲಿಸಿದ ಮೊದಲ ಶಾಸಕರು ವಿಠ್ಠಲರಾವ್ ಹಲಗೇಕರ್ ಅವರೇ, ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲೇ ವಿದ್ಯಾನಗರ ನಿವಾಸಿಗಳು ಶಾಸಕರನ್ನು ಭೇಟಿಯಾಗಿ ತಮ್ಮ ಸಂತೋಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

