तिवोलीवाडा क्रॉस– रेल्वे ब्रीज प्रश्न आमदार विठ्ठलराव हलगेकर यांच्या हस्तक्षेपामुळे मार्गी; काम पुन्हा सुरू | ತಿವೋಲಿ ವಾಡಾ ಕ್ರಾಸ್– ರೇಲ್ವೆ ಬ್ರಿಡ್ಜ್ ರಸ್ತೆ ಸಮಸ್ಯೆ ಶಾಸಕರಾದ ವಿಠ್ಠಲರಾವ್ ಹಲಗೇಕರ್ ಅವರ ಹಸ್ತಕ್ಷೇಪದಿಂದ ಪರಿಹಾರ; ಕಾಮಗಾರಿ ಪುನರಾರಂಭ
खानापूर: तालुक्यातील तिवोलीवाडा (ख्रिश्चन वाडा) कत्री ते रेल्वे ब्रीज या महत्त्वाच्या रस्त्याच्या कामास काही कारणास्तव अडथळा निर्माण झाला होता. रस्ता रुंदीकरण व बांधकामादरम्यान शेतकऱ्यांची शेतजमीन बाधित होत असल्याच्या तक्रारीमुळे संबंधित शेतकऱ्यांनी आक्षेप नोंदविला होता. त्यामुळे सदर रस्त्याचे काम तात्पुरते बंद ठेवण्यात आले होते.

या पार्श्वभूमीवर आमदार श्री. विठ्ठलराव हलगेकर यांनी प्रत्यक्ष घटनास्थळी भेट देऊन संबंधित शेतकऱ्यांशी सविस्तर चर्चा केली. आपसी समन्वय साधून व योग्य तोडगा काढत रस्त्याशी संबंधित प्रश्न मार्गी लावण्यात आला. आमदार हलगेकर यांच्या हस्तक्षेपामुळे निर्माण झालेला अडथळा दूर होऊन रस्त्याचे काम पुन्हा सुरू करण्यात आले आहे.हा रस्ता तिवोलीवाडा कत्री – रेल्वे ब्रीज पर्यंत होत असून, हे काम लवकरच पूर्ण करण्यात येणार आहे. या रस्त्यामुळे परिसरातील नागरिकांना दळणवळणाच्या दृष्टीने मोठा दिलासा मिळणार आहे. रस्त्याचे काम पुन्हा सुरू झाल्याने ग्रामस्थांनी आमदार हलगेकर यांचे आभार मानले.

यावेळी ग्रामस्थांनी रेल्वे ब्रिज ते तिवोली गावं या दुसऱ्या रस्त्यालाही तातडीने मंजुरी देऊन पूर्ण करावी, अशी मागणी केली. या मागणीस सकारात्मक प्रतिसाद देत आमदार विठ्ठलराव हलगेकर यांनी सदर रस्त्याचे कामही लवकरात लवकर मंजूर करून पूर्ण करण्यात येईल, असे आश्वासन दिले. त्यामुळे नागरिकांमध्ये समाधान व्यक्त करण्यात येत आहे.
या प्रसंगी तिवोली येथील कृषक समाजाचे उपाध्यक्ष श्री. रमेश पाटील, ग्रामपंचायत सदस्य श्री. सुभाष पाटील, माजी ग्रामपंचायत सदस्य श्री. सहदेव हेब्बाळकर, श्री. रुक्माण्णा लोकोळकर, श्री. प्रभाकर हेब्बाळकर, श्री. भरमाणी पाटील, तसेच तिवोलीवाडा येथील फ्रान्सिस मिंगेल पिरेरा (सावकार), दियेक फ्रान्सिस पिरेरा, आंतोन मतेस पिरेरा उपस्थित होते.
याशिवाय गावकरी मतेस फ्रान्सिस दमेलो, बस्त्याव फ्रान्सिस मिनोज, जुवाव फ्रान्सिस सोज, दियेक फ्रान्सिस पिरेरा, जुजे फ्रान्सिस मिनोज, मतेस शानू मिनोज, फ्रान्सिस पेद्रू फर्नांडीस, फ्रान्सिस लुईस सोज, प्रकाश हेब्बाळकर, अशोक पाटील यांचीही उपस्थिती होती.

ತಿವೋಲಿ ವಾಡಾ ಕ್ರಾಸ್–ತಿವೋಲಿ ಬ್ರಿಡ್ಜ್ ರಸ್ತೆ ಸಮಸ್ಯೆ ಶಾಸಕರಾದ ವಿಠ್ಠಲರಾವ್ ಹಲಗೇಕರ್ ಅವರ ಹಸ್ತಕ್ಷೇಪದಿಂದ ಪರಿಹಾರ; ಕಾಮಗಾರಿ ಪುನರಾರಂಭ
ಖಾನಾಪುರ :
ಖಾನಾಪುರ ತಾಲ್ಲೂಕಿನ ತಿವೋಲಿವಾಡಾ (ಕ್ರಿಶ್ಚಿಯನ್ ವಾಡಾ) ಕತ್ರಿ ನೈಕಾಲ್ ಕ್ರಾಸ್‌ನಿಂದ ರೇಲ್ವೆ ಬ್ರಿಡ್ಜ್‌ವರೆಗೆ ನಡೆಯುತ್ತಿದ್ದ ಮಹತ್ವದ ರಸ್ತೆ ಕಾಮಗಾರಿಗೆ ಕಳೆದ ಕೆಲವು ದಿನಗಳಿಂದ ಅಡಚಣೆ ಉಂಟಾಗಿತ್ತು. ರಸ್ತೆ ಅಗಲೀಕರಣ ಮತ್ತು ನಿರ್ಮಾಣದ ವೇಳೆ ಕೆಲವು ರೈತರ ಕೃಷಿ ಭೂಮಿಗೆ ಹಾನಿಯಾಗುತ್ತಿರುವ ಕುರಿತು ದೂರು ಸಲ್ಲಿಸಲಾದ ಕಾರಣ, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಈ ಹಿನ್ನೆಲೆಗಳಲ್ಲಿ ಶಾಸಕರಾದ ಶ್ರೀ. ವಿಠ್ಠಲರಾವ್ ಹಲಗೇಕರ್ ಅವರು ಸ್ಥಳಕ್ಕೆ ನೇರವಾಗಿ ಭೇಟಿ ನೀಡಿ, ಸಂಬಂಧಿಸಿದ ರೈತರೊಂದಿಗೆ ವಿವರವಾದ ಚರ್ಚೆ ನಡೆಸಿದರು. ಪರಸ್ಪರ ಸಮನ್ವಯ ಸಾಧಿಸಿ, ಸೂಕ್ತ ಪರಿಹಾರ ಕಂಡುಹಿಡಿದು ರಸ್ತೆ ಸಂಬಂಧಿತ ಸಮಸ್ಯೆಯನ್ನು ಬಗೆಹರಿಸಲಾಯಿತು. ಶಾಸಕರ ಹಸ್ತಕ್ಷೇಪದಿಂದ ಉಂಟಾಗಿದ್ದ ಅಡಚಣೆ ನಿವಾರಣೆಯಾಗಿದ್ದು, ರಸ್ತೆ ಕಾಮಗಾರಿ ಪುನರಾರಂಭಗೊಂಡಿದೆ.
ಈ ರಸ್ತೆ ತಿವೋಳಿವಾಡಾ ಕ್ರಾಸ್ – ರೇಲ್ವೆ ಬ್ರಿಜ್ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ರಸ್ತೆಯಿಂದ ಸ್ಥಳೀಯ ನಾಗರಿಕರಿಗೆ ಸಂಚಾರದ ದೃಷ್ಟಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಕಾಮಗಾರಿ ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಗ್ರಾಮಸ್ಥರು ರೇಲ್ವೆ ಬ್ರಿಡ್ಜ್‌ನಿಂದ ತಿವೋಳಿ ಗ್ರಾಮವರೆಗೆ ಇರುವ ಮತ್ತೊಂದು ರಸ್ತೆಯನ್ನೂ ತುರ್ತಾಗಿ ಮಂಜೂರು ಮಾಡಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರಾದ ವಿಠ್ಠಲರಾವ್ ಹಲಗೇಕರ್ ಅವರು, ಸಂಬಂಧಿತ ರಸ್ತೆ ಕಾಮಗಾರಿಯನ್ನೂ ಶೀಘ್ರದಲ್ಲೇ ಮಂಜೂರು ಮಾಡಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ನಾಗರಿಕರಲ್ಲಿ ತೃಪ್ತಿ ವ್ಯಕ್ತವಾಗಿದೆ.
ಈ ವೇಳೆ ತಿವೋಳಿ ಗ್ರಾಮದ ಕೃಷಕ ಸಮಾಜದ ಉಪಾಧ್ಯಕ್ಷ ಶ್ರೀ ರಮೇಶ್ ಪಾಟೀಲ, ಗ್ರಾಮ ಪಂಚಾಯತ್ ಸದಸ್ಯ ಶ್ರೀ ಸುಭಾಷ್ ಪಾಟೀಲ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಸಹದೇವ ಹೆಬ್ಬಾಳ್ಕರ್, ಶ್ರೀ ರುಕ್ಮಣ್ಣ ಲೋಕೊಳ್ಳಕರ, ಶ್ರೀ ಪ್ರಭಾಕರ್ ಹೆಬ್ಬಾಳ್ಕರ್, ಶ್ರೀ ಭರಮಾಣಿ ಪಾಟೀಲ, ಹಾಗೂ ತಿವೋಳಿವಾಡಾದ ಫ್ರಾನ್ಸಿಸ್ ಮಿಂಗಲ್ ಪಿರೇರಾ (ಸಾವಕಾರ), ದಿಯೇಕ್ ಫ್ರಾನ್ಸಿಸ್ ಪಿರೇರಾ, ಆಂಟನ್ ಮಾತೆಸ್ ಪಿರೇರಾ ಉಪಸ್ಥಿತರಿದ್ದರು.
ಇದಲ್ಲದೆ ಗ್ರಾಮಸ್ಥರಾದ ಮಾತೆಸ್ ಫ್ರಾನ್ಸಿಸ್ ಡಮೆಲೋ, ಬಸ್ತ್ಯಾವ್ ಫ್ರಾನ್ಸಿಸ್ ಮಿನೋಜ್, ಜುವಾವ್ ಫ್ರಾನ್ಸಿಸ್ ಸೊಜ್, ದಿಯೇಕ್ ಫ್ರಾನ್ಸಿಸ್ ಪಿರೇರಾ, ಜುಜೆ ಫ್ರಾನ್ಸಿಸ್ ಮಿನೋಜ್, ಮಾತೆಸ್ ಶಾನು ಮಿನೋಜ್, ಫ್ರಾನ್ಸಿಸ್ ಪೆದ್ರು ಫರ್ನಾಂಡಿಸ್, ಫ್ರಾನ್ಸಿಸ್ ಲೂಯಿಸ್ ಸೊಜ್ ಉಪಸ್ಥಿತರಿದ್ದರು.
