भीषण आग; 25 एकरातील ऊस जळून खाक, शेतकऱ्यांचे लाखो रुपयांचे नुकसान | ಹಳಸಿವಾಡಿಯಲ್ಲಿ ಭೀಕರ ಅಗ್ನಿ ಅವಘಡ: 25 ಎಕರೆ ಕಬ್ಬು ಭಸ್ಮ, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ
खानापूर: खानापूर तालुक्यातील हलशीवाडी येथे शनिवारी दुपारी दोनच्या सुमारास उसाच्या शेताला अचानक भीषण आग लागली. या आगीत सुमारे २५ एकरांतील ऊस जळून खाक झाला असून, उसासोबतच शेतात ठेवलेले पीव्हीसी पाईप, स्प्रिंकलर संच आणि पंपसेटच्या केबल पूर्णपणे जळून गेल्या आहेत. या घटनेमुळे स्थानिक शेतकऱ्यांचे लाखो रुपयांचे आर्थिक नुकसान झाले असून परिसरात हळहळ व्यक्त होत आहे.
गेल्या काही दिवसांपासून परिसरात ऊस तोडणीची कामे सुरू आहेत. शनिवारी दुपारी दीडच्या सुमारास हलशीवाडी येथील ‘वरचे शेत’ म्हणून ओळखल्या जाणाऱ्या भागातून अचानक धूर निघताना दिसला. उन्हाची तीव्रता, कोरडी हवा आणि वाऱ्याचा वेग जास्त असल्याने काही क्षणातच आगीने रौद्ररूप धारण केले. शेतकऱ्यांनी तातडीने घटनास्थळी धाव घेऊन आग आटोक्यात आणण्याचा प्रयत्न केला, मात्र वाऱ्यामुळे आग वेगाने लगतच्या शेतांमध्ये पसरत गेली.
या आगीचा फटका मोताप्पा देसाई, कृष्णाजी देसाई, सुरेश देसाई, सुभाष देसाई, केशव देसाई, लव देसाई, नरसिंग देसाई, अशोक देसाई आणि महादेव देसाई यांच्या शिवाराला बसला. या सर्व शेतकऱ्यांच्या हाता तोंडाशी आलेला ऊस डोळ्यांदेखत जळून खाक झाला. आगीचे नेमके कारण अद्याप स्पष्ट झाले नसले तरी, हलशीचे तलाठी गणेश रोष्टी यांनी तातडीने घटनास्थळी धाव घेऊन नुकसानीचा पंचनामा केला आहे.
कष्टाने जोपासलेले पीक आणि सिंचनाचे साहित्य जळाल्याने शेतकरी हवालदिल झाले आहेत. नुकसानग्रस्त शेतकऱ्यांना शासनाकडून तातडीने आर्थिक मदत मिळावी, अशी मागणी आता हलशीवाडी ग्रामस्थांतून जोर धरत आहे.
ಹಳಸಿವಾಡಿಯಲ್ಲಿ ಭೀಕರ ಅಗ್ನಿ ಅವಘಡ: 25 ಎಕರೆ ಕಬ್ಬು ಭಸ್ಮ, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ
ಖಾನಾಪುರ:
ತಾಲೂಕಿನ ಹಳಸಿವಾಡಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿದೆ. ಕಬ್ಬಿನೊಂದಿಗೆ ಹೊಲದಲ್ಲಿದ್ದ ಪೈಪ್‌ಗಳು, ಸ್ಪ್ರಿಂಕ್ಲರ್ ಸೆಟ್ ಹಾಗೂ ಪಂಪ್‌ಸೆಟ್ ಕೇಬಲ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಬ್ಬು ಕಟಾವು ಕಾರ್ಯ ನಡೆಯುತ್ತಿದೆ. ಹಳಸಿವಾಡಿಯ ‘ವರಚೆ ಶೇತ್’ ಎಂದು ಕರೆಯಲ್ಪಡುವ ಹೊಲದಲ್ಲಿ ಶನಿವಾರ ಮಧ್ಯಾಹ್ನ 1:30 ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬಿಸಿಲಿನ ತಾಪ ಹಾಗೂ ಗಾಳಿಯ ವೇಗ ಹೆಚ್ಚಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಪಕ್ಕದ ಹೊಲಗಳಿಗೂ ವ್ಯಾಪಿಸಿ ರೌದ್ರರೂಪ ತಾಳಿತು. ರೈತರು ತಕ್ಷಣ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಗಾಳಿಯ ಅಬ್ಬರಕ್ಕೆ ಬೆಂಕಿ ನಿಯಂತ್ರಿಸುವುದು ಕಷ್ಟವಾಯಿತು.
ಈ ಅಗ್ನಿ ಅವಘಡದಲ್ಲಿ ರೈತರಾದ ಮೊತಾಪ್ಪ ದೇಸಾಯಿ, ಕೃಷ್ಣಾಜಿ ದೇಸಾಯಿ, ಸುರೇಶ್ ದೇಸಾಯಿ, ಸುಭಾಷ್ ದೇಸಾಯಿ, ಕೇಶವ ದೇಸಾಯಿ, ಲವ ದೇಸಾಯಿ, ನರಸಿಂಗ್ ದೇಸಾಯಿ, ಅಶೋಕ್ ದೇಸಾಯಿ ಮತ್ತು ಮಹಾದೇವ ದೇಸಾಯಿ ಅವರ ಹೊಲದಲ್ಲಿದ್ದ ಕಬ್ಬು ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಬೆಂಕಿ ತಗುಲಲು ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಹಳಸಿ ಗ್ರಾಮದ ತಲಾಟಿ ಗಣೇಶ್ ರೋಷ್ಠಿ ಅವರು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಬೆಂಕಿ ಅವಘಡದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ತಕ್ಷಣವೇ ಸೂಕ್ತ ಆರ್ಥಿಕ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ
