डॉ. अंजलीताई निंबाळकर यांच्या प्रयत्नांना यश; भव्य पुतळा व संग्रहालयाचे उद्घाटन 19 जानेवारीला
नंदगड (खानापूर): येथे उभारण्यात आलेल्या क्रांतिवीर संगोळी रायण्णा यांच्या भव्य पुतळ्याचे आणि आकर्षक संग्रहालयाचे उद्घाटन येत्या १९ जानेवारी रोजी राज्याचे मुख्यमंत्री सिद्धरामय्या यांच्या हस्ते होणार आहे. या ऐतिहासिक सोहळ्यास मंत्रिमंडळातील सुमारे अनेक दिग्गज मंत्री उपस्थित राहणार आहेत.
सिद्धरामय्या सरकारने या वीरभूमीच्या विकासासाठी आतापर्यंत शेकडो कोटी रुपयांचा निधी खर्च केला असून, नुकताच आणखी २८ कोटी रुपयांचा नवीन निधी मंजूर करण्यात आला आहे. या महत्त्वाकांक्षी प्रकल्पाच्या उभारणीसाठी माजी आमदार तथा एआयसीसी सचिव डॉ. अंजलीताई हेमंत निंबाळकर यांनी आपल्या आमदारकीच्या कार्यकाळात सातत्याने पाठपुरावा केला. काम दर्जेदार व नियोजनबद्ध पद्धतीने पूर्ण व्हावे यासाठी त्यांनी वेळोवेळी पाहणी करून आवश्यक सूचना दिल्या होत्या.
क्रांतिवीर संगोळी रायण्णा – स्वातंत्र्यलढ्यातील धगधगता योद्धा
क्रांतिवीर संगोळी रायण्णा हे कर्नाटक–महाराष्ट्र सीमाभागात जन्मलेले आणि ब्रिटिश सत्तेविरुद्ध धैर्याने लढणारे महान स्वातंत्र्ययोद्धे होते. त्यांचा जन्म इ.स. १७९८ साली कर्नाटकातील संगोळी गावात झाला. त्यांचे पूर्ण नाव रायण्णा सिद्धप्पा असे होते. बालपणापासूनच अन्यायाविरुद्ध आवाज उठवणारा शूर आणि निर्भीड स्वभाव त्यांच्यात दिसून येत होता.
रायण्णा हे कित्तूरच्या शूर राणी चन्नम्मा यांचे विश्वासू सेनानी होते. ब्रिटिशांनी ‘डॉक्ट्रिन ऑफ लॅप्स’ या अन्यायकारक धोरणाच्या आधारे कित्तूर संस्थान बळकावण्याचा प्रयत्न केला, तेव्हा राणी चन्नम्मा यांनी त्याला तीव्र विरोध केला. या संघर्षात रायण्णांनी महत्त्वपूर्ण भूमिका बजावली. त्यांनी सैन्य संघटित केले, गनिमी काव्याचा वापर करून ब्रिटिश सैन्यावर हल्ले चढवले आणि जनतेत स्वातंत्र्याची ज्योत प्रज्वलित केली.
कित्तूरचा लढा पराभूत झाल्यानंतरही रायण्णा डगमगले नाहीत. जंगलात राहून त्यांनी ब्रिटिशांविरुद्ध सशस्त्र संघर्ष सुरूच ठेवला. ब्रिटिश खजिन्यातून मिळवलेली संपत्ती गरिबांमध्ये वाटल्यामुळे ते “जनतेचा नायक” म्हणून ओळखले जाऊ लागले. त्यामुळे ब्रिटिश सत्तेला ते मोठा धोका वाटू लागले.
अखेर ब्रिटिशांनी फसवणुकीने त्यांना पकडले. त्यांच्यावर खटला चालवून १८३१ साली नंदगड (खानापूर) येथे फाशीची शिक्षा देण्यात आली. मृत्यूपूर्वीही त्यांनी ब्रिटिश सत्तेपुढे माफी मागण्यास ठाम नकार दिला. त्यांच्या शेवटच्या क्षणापर्यंत स्वातंत्र्य आणि स्वाभिमान यांवरची निष्ठा अढळ होती.
संगोळी रायण्णांचे बलिदान १८५७ च्या स्वातंत्र्यसमरापूर्वीचे असले तरी, त्यांचा लढा भारतीय स्वातंत्र्यलढ्याचा महत्त्वाचा पाया ठरला. त्यांनी दाखवलेले धैर्य, त्याग आणि देशप्रेम आजही प्रेरणादायी आहे. कर्नाटक आणि महाराष्ट्रात त्यांच्या नावाने अनेक स्मारके, पुतळे आणि संस्था उभारण्यात आल्या आहेत.
१९ जानेवारी रोजी नंदगड येथे होणाऱ्या या भव्य उद्घाटन सोहळ्याच्या पार्श्वभूमीवर, डॉ. अंजलीताई हेमंत निंबाळकर यांच्या सूचनेनुसार काल रात्री खानापूर ब्लॉक काँग्रेसच्या पदाधिकारी व कार्यकर्त्यांनी तयारीचा सविस्तर आढावा घेतला. या बैठकीस महादेव कोळी, सुरेश भाऊ, ईश्वर घाडी बाबू हत्तरवाड, सूर्यकांत कुलकर्णी,अल्ताफ बसरीकट्टी, तोहीद चांदखन्नवर, शफी काझी, अर्जुन सनदी लकेबैल यांच्यासह पत्रकार चौगुले अन्य पदाधिकारी व कार्यकर्ते उपस्थित होते. सर्वांनी समन्वयाने काम करण्याचा निर्धार व्यक्त करत उद्घाटन सोहळा यशस्वी करण्याचा संकल्प केला.
ಕ್ರಾಂತಿವೀರ ಸಂಗೋಳಿ ರಾಯಣ್ಣ ಅವರ ಭವ್ಯ ಪ್ರತಿಮೆ ಹಾಗೂ ಸಂಗ್ರಹಾಲಯಕ್ಕೆ ಜನವರಿ 19ರಂದು ಉದ್ಘಾಟನೆ
ನಂದಗಡ (ಖಾನಾಪುರ):
ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ನಿರ್ಮಾಣಗೊಂಡಿರುವ ಕ್ರಾಂತಿವೀರ ಸಂಗೋಳಿ ರಾಯಣ್ಣ ಅವರ ಭವ್ಯ ಪ್ರತಿಮೆ ಹಾಗೂ ಆಕರ್ಷಕ ಸಂಗ್ರಹಾಲಯಕ್ಕೆ ಜನವರಿ 19ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರಿಂದ ಉದ್ಘಾಟನೆ ನಡೆಯಲಿದೆ. ಈ ಐತಿಹಾಸಿಕ ಸಮಾರಂಭಕ್ಕೆ ರಾಜ್ಯ ಸಚಿವ ಸಂಪುಟದ ಸುಮಾರು ಡಜನ್‌ಗೂ ಹೆಚ್ಚು ಸಚಿವರು ಪಾಲ್ಗೊಳ್ಳಲಿದ್ದು, ಸಂಪೂರ್ಣ ಗಡಿಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಈ ವೀರಭೂಮಿಯ ಅಭಿವೃದ್ಧಿಗಾಗಿ ಇದುವರೆಗೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಇತ್ತೀಚೆಗೆ ಮತ್ತಷ್ಟು 28 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳಲು ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ತಾಯಿ ಹೇಮಂತ ನಿಂಬಾಳ್ಕರ್ ಅವರು ತಮ್ಮ ಶಾಸಕರ ಅವಧಿಯಲ್ಲಿ ನಿರಂತರವಾಗಿ ಪ್ರಯತ್ನ ನಡೆಸಿದ್ದರು. ಕಾಮಗಾರಿ ಗುಣಮಟ್ಟದಿಂದ ಹಾಗೂ ಯೋಜಿತವಾಗಿ ಪೂರ್ಣಗೊಳ್ಳುವಂತೆ ಅವರು ಸಮಯೋಚಿತವಾಗಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದರು.
ಕ್ರಾಂತಿವೀರ ಸಂಗೋಳಿ ರಾಯಣ್ಣ – ಸ್ವಾತಂತ್ರ್ಯ ಹೋರಾಟದ ಧಗಧಗಿಸುವ ಯೋಧ
ಕ್ರಾಂತಿವೀರ ಸಂಗೋಳಿ ರಾಯಣ್ಣರು ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದಲ್ಲಿ ಜನಿಸಿ ಬ್ರಿಟಿಷ್ ಆಡಳಿತದ ವಿರುದ್ಧ ಧೈರ್ಯದಿಂದ ಹೋರಾಡಿದ ಮಹಾನ್ ಸ್ವಾತಂತ್ರ್ಯ ಯೋಧರಾಗಿದ್ದರು. ಅವರು ಕ್ರಿ.ಶ. 1798ರಲ್ಲಿ ಕರ್ನಾಟಕದ ಸಂಗೋಳಿ ಗ್ರಾಮದಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ರಾಯಣ್ಣ ಸಿದ್ದಪ್ಪ ಆಗಿದ್ದು, ಬಾಲ್ಯದಿಂದಲೇ ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲುವ ಸ್ವಭಾವ ಹೊಂದಿದ್ದರು.
ರಾಯಣ್ಣರು ಕಿತ್ತೂರು ರಾಣಿ ಚನ್ನಮ್ಮ ಅವರ ನಂಬಿಗಸ್ತ ಸೇನಾನಿಯಾಗಿದ್ದರು. ಬ್ರಿಟಿಷರು ‘ಡಾಕ್ಟ್ರಿನ್ ಆಫ್ ಲ್ಯಾಪ್ಸ್’ ಎಂಬ ಅನ್ಯಾಯ ನೀತಿಯ ಮೂಲಕ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ, ರಾಣಿ ಚನ್ನಮ್ಮರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ರಾಯಣ್ಣರು ಮಹತ್ವದ ಪಾತ್ರ ವಹಿಸಿ, ಸೇನೆಯನ್ನು ಸಂಘಟಿಸಿ, ಗುೆರಿಲ್ಲಾ ಯುದ್ಧ ತಂತ್ರವನ್ನು ಬಳಸಿ ಬ್ರಿಟಿಷ್ ಪಡೆಗಳಿಗೆ ಭಾರಿ ಸವಾಲು ಎಸೆದರು. ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಜ್ವಾಲೆಯನ್ನು ಹಚ್ಚಿದರು.
ಕಿತ್ತೂರು ಯುದ್ಧದಲ್ಲಿ ಸೋಲು ಕಂಡ ನಂತರವೂ ರಾಯಣ್ಣರು ಹೋರಾಟ ನಿಲ್ಲಿಸಲಿಲ್ಲ. ಕಾಡಿನಲ್ಲಿ ನೆಲೆಸಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಮುಂದುವರಿಸಿದರು. ಬ್ರಿಟಿಷ್ ಖಜಾನೆಯಿಂದ ಪಡೆದ ಸಂಪತ್ತನ್ನು ಬಡವರಿಗೆ ಹಂಚಿದ ಕಾರಣ ಅವರು “ಜನರ ನಾಯಕ” ಎಂಬ ಹೆಸರಿನಿಂದ ಪ್ರಸಿದ್ಧರಾದರು. ಇದರಿಂದ ಬ್ರಿಟಿಷ್ ಆಡಳಿತಕ್ಕೆ ಅವರು ದೊಡ್ಡ ಭೀತಿಯಾಗಿ ಪರಿಣಮಿಸಿದರು.
ಅಂತಿಮವಾಗಿ ಬ್ರಿಟಿಷರು ಕುತಂತ್ರದಿಂದ ಅವರನ್ನು ಬಂಧಿಸಿ, ವಿಚಾರಣೆ ನಡೆಸಿ 1831ರಲ್ಲಿ ನಂದಗಡ (ಖಾನಾಪುರ)ದಲ್ಲಿ ಫಾಸಿ ಶಿಕ್ಷೆ ವಿಧಿಸಿದರು. ಮರಣದ ಕ್ಷಣದಲ್ಲಿಯೂ ಬ್ರಿಟಿಷರ ಮುಂದೆ ಕ್ಷಮೆ ಕೇಳಲು ಅವರು ನಿರಾಕರಿಸಿದರು. ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಅವರ ನಿಷ್ಠೆ ಅಂತಿಮ ಕ್ಷಣದವರೆಗೂ ಅಚಲವಾಗಿತ್ತು.
1857ರ ಪ್ರಥಮ ಸ್ವಾತಂತ್ರ್ಯ ಸಮರಕ್ಕಿಂತ ಮುಂಚೆಯೇ ಸಂಗೋಳಿ ರಾಯಣ್ಣರು ಬಲಿದಾನ ನೀಡಿದರೂ, ಅವರ ಹೋರಾಟವು ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಬಲವಾದ ಅಡಿಪಾಯವಾಯಿತು. ಅವರ ಧೈರ್ಯ, ತ್ಯಾಗ ಮತ್ತು ದೇಶಪ್ರೇಮ ಇಂದಿಗೂ ಯುವಪೀಳಿಗೆಗೆ ಪ್ರೇರಣೆಯಾಗಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅವರ ಹೆಸರಿನಲ್ಲಿ ಅನೇಕ ಸ್ಮಾರಕಗಳು, ಪ್ರತಿಮೆಗಳು ಹಾಗೂ ಸಂಸ್ಥೆಗಳು ಸ್ಥಾಪನೆಯಾಗಿವೆ.
ಜನವರಿ 19ರಂದು ನಂದಗಡದಲ್ಲಿ ನಡೆಯಲಿರುವ ಭವ್ಯ ಉದ್ಘಾಟನಾ ಸಮಾರಂಭದ ಹಿನ್ನೆಲೆ, ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ತಾಯಿ ಹೇಮಂತ ನಿಂಬಾಳ್ಕರ್ ಅವರ ಸೂಚನೆಯಂತೆ ನಿನ್ನೆ ರಾತ್ರಿ ಖಾನಾಪುರ ಬ್ಲಾಕ್ ಕಾಂಗ್ರೆಸ್‌ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಿದ್ಧತೆಗಳ ಕುರಿತು ಸವಿಸ್ತಾರ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಮಹಾದೇವ ಕೋಳಿ, ಸುರೇಶ್ ಭಾವು, ಈಶ್ವರ ಘಾಡಿ, ಬಾಬು ಹತ್ತರವಾದ, ಸೂರ್ಯಕಾಂತ ಕುಲಕರ್ಣಿ, ಅಲ್ತಾಫ್ ಬಸ್ರಿಕಟ್ಟಿ, ತೋಹೀದ್ ಚಾಂದಖನ್ನವರ, ಶಫಿ ಕಾಜಿ, ಅರ್ಜುನ ಸನದಿ ಲಕೇಬೈಲ್ ಸೇರಿದಂತೆ ಪತ್ರಕರ್ತ ಚೌಗುಲೆ ಹಾಗೂ ಇತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಸಮಾರಂಭವನ್ನು ಯಶಸ್ವಿಗೊಳಿಸಲು ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
– ಖಾನಾಪುರ ವರದಿಗಾರ
