खानापूर-बेळगांव रोडवर दुचाकी अपघात; खानापूरचा युवक ठार, मित्र गंभीर जखमी | ವಾಹನ ಅಪಘಾತ; ಖಾನಾಪುರದ ಯುವಕ ಮೃತ, ಸ್ನೇಹಿತ ಗಂಭೀರ ಗಾಯ
खानापूर: खानापूर- बेळगांव रोडवर प्रभुनगर येथे झालेल्या भीषण दुचाकी अपघातात खानापूर येथील युवकाचा मृत्यू झाला असून त्याचा मित्र गंभीर जखमी झाला आहे. नववर्षाच्या पहिल्याच दिवशी घडलेल्या या घटनेमुळे परिसरात शोककळा पसरली आहे.

31 डिसेंबर रोजी जेवण आटोपून दुचाकीवरून खानापूरकडे परतत असताना वाहनावरील नियंत्रण सुटल्याने दुचाकी पुलाच्या संरक्षक कठड्याला धडकली. या धडकेत दोघेही युवक पुलाखालील सर्व्हिस रस्त्यावर कोसळले.
या अपघातात निंगापूर गल्ली येथील सुरज संजय कुंडेकर (२२) याच्या डोक्याला गंभीर दुखापत होऊन रक्तस्राव झाला. त्याला बेळगाव जिल्हा रुग्णालयात दाखल करण्यात आले; मात्र उपचारादरम्यान त्याचा मृत्यू झाला.
दरम्यान, दुर्गानगर येथील गणेश बुचडी (२३) याच्यावर बेळगाव येथील केएलई रुग्णालयात उपचार सुरू असून त्याची प्रकृती चिंताजनक मात्र स्थिर असल्याचे सांगण्यात आले.
ಪ್ರಭುನಗರ ಸಮೀಪ ದ್ವಿಚಕ್ರ ವಾಹನ ಅಪಘಾತ; ಖಾನಾಪುರದ ಯುವಕ ಮೃತ, ಸ್ನೇಹಿತ ಗಂಭೀರ ಗಾಯ
ಖಾನಾಪುರ | ಪ್ರತಿನಿಧಿ
ಪ್ರಭುನಗರ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ ಸಂಭವಿಸಿದ ಭೀಕರ ದ್ವಿಚಕ್ರ ವಾಹನ ಅಪಘಾತದಲ್ಲಿ ಖಾನಾಪುರದ ಯುವಕನೊಬ್ಬ ಮೃತಪಟ್ಟಿದ್ದು, ಅವನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೊಸ ವರ್ಷದ ಮೊದಲ ದಿನವೇ ನಡೆದ ಈ ದುರ್ಘಟನೆಯಿಂದ ಖಾನಾಪುರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಡಿಸೆಂಬರ್ 31ರಂದು ಭೋಜನ ಮುಗಿಸಿ ದ್ವಿಚಕ್ರ ವಾಹನದಲ್ಲಿ ಖಾನಾಪುರದತ್ತ ತೆರಳುತ್ತಿದ್ದ ವೇಳೆ ವಾಹನದ ನಿಯಂತ್ರಣ ತಪ್ಪಿ ಮೇಲ್ಸೇತುವೆಯ ರಕ್ಷಣಾ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಇಬ್ಬರೂ ಯುವಕರು ಸೇತುವೆಯ ಕೆಳಗಿನ ಸರ್ವಿಸ್ ರಸ್ತೆಗೆ ಎಸೆಯಲ್ಪಟ್ಟರು.
ಈ ಅಪಘಾತದಲ್ಲಿ ನಿಂಗಾಪುರ ಗಲ್ಲಿ ನಿವಾಸಿ ಸೂರಜ್ ಸಂಜಯ ಕುಂಡೇಕರ್ (22) ಅವರಿಗೆ ತಲೆಗೆ ಗಂಭೀರ ಗಾಯವಾಗಿ ಅಧಿಕ ರಕ್ತಸ್ರಾವ ಉಂಟಾಯಿತು. ಅವರನ್ನು ತಕ್ಷಣ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ದುರ್ಗಾನಗರ ನಿವಾಸಿ ಗಣೇಶ್ ಬುಚಡಿ (23) ಅವರನ್ನು ಮುಂದಿನ ಚಿಕಿತ್ಸೆಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕ ಆದರೆ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

