🚨 रामनगरजवळ भीषण अपघात! पर्यटनासाठी निघालेल्या कुटुंबाचा अपघात | ಟೂರ್ ಅಂಡ್ ಟ್ರಾವೆಲ್ಸ್ ವಾಹನ ಪಲ್ಟಿಯಾಗಿ ಭೀಕರ ಅಪಘಾತ – ಒಬ್ಬ ಗಂಭೀರ ಗಾಯಗೊಂಡ
रामनगर – अनमोड राष्ट्रीय महामार्गावर जळकटीजवळ आज (शुक्रवार) सकाळी साडेआठच्या सुमारास टूर अँड ट्रॅव्हल्स वाहन उलटून भीषण अपघात झाला. या अपघातात एकजण गंभीर जखमी झाला आहे.
मिळालेल्या माहितीनुसार, बेंगळुरूहून गोव्याला पर्यटनासाठी निघालेल्या एका कुटुंबाचा हा प्रवास दुर्दैवी ठरला. वाहनात एकाच कुटुंबातील सात सदस्य प्रवास करत होते. अपघातात चालक प्रज्वल (वय २४, रा. बेंगळुरू) गंभीर जखमी झाला असून, त्याला तात्काळ रुग्णवाहिकेतून रामनगर प्राथमिक आरोग्य केंद्रात दाखल करण्यात आले. तेथे प्राथमिक उपचार केल्यानंतर पुढील उपचारासाठी त्याला बेळगाव येथे हलवण्यात आले आहे.
दरम्यान, अपघाताची माहिती मिळताच रामनगर पोलिसांनी तात्काळ घटनास्थळी धाव घेऊन पंचनामा करून पुढील तपास सुरू केला आहे.
ರಾಮನಗರ: ಟೂರ್ ಅಂಡ್ ಟ್ರಾವೆಲ್ಸ್ ವಾಹನ ಪಲ್ಟಿಯಾಗಿ ಭೀಕರ ಅಪಘಾತ – ಒಬ್ಬ ಗಂಭೀರ ಗಾಯಗೊಂಡ
ರಾಮನಗರ–ಗೋವಾ ರಾಷ್ಟ್ರೀಯ ಹೆದ್ದಾರಿಯ ಜಳಕಟ್ಟಿ ಸಮೀಪ ಇಂದು (ಶುಕ್ರವಾರ) ಬೆಳಗ್ಗೆ ಸುಮಾರು ಎಂಟೂವರೆ ಗಂಟೆ ವೇಳೆಗೆ ಟೂರ್ ಅಂಡ್ ಟ್ರಾವೆಲ್ಸ್ ವಾಹನ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಗೋವಾಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ಒಂದು ಕುಟುಂಬದ ಈ ಪ್ರಯಾಣ ದುರಂತವಾಗಿ ಅಂತ್ಯಗೊಂಡಿದೆ. ವಾಹನದಲ್ಲಿ ಆ ಕುಟುಂಬದ ಏಳು ಸದಸ್ಯರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಚಾಲಕ ಪ್ರಶ್ವಲ್ (ವಯಸ್ಸು 24, ನಿವಾಸಿ ಬೆಂಗಳೂರು) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಮುಂದಿನ ಚಿಕಿತ್ಸೆಗೆ ಅವರನ್ನು ಬೆಳಗಾವಿಗೆ ಸ್ಥಳಾಂತರಿಸಲಾಯಿತು.
ಈ ನಡುವೆ, ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ರಾಮನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.