वडेबैल येथे श्री महालक्ष्मी मंदिर बांधकामासाठी निधी मागणीचे निवेदन आमदार हलगेकर यांना सादर | ವಡೆಬೈಲ್ ಶ್ರೀ ಮಹಾಲಕ್ಷ್ಮಿ ದೇವಾಲಯ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ
खानापूर : वडेबैल येथील श्री महालक्ष्मी मंदिर कमिटी व ग्रामस्थांच्या वतीने आज खानापूरचे आमदार माननीय श्री विठ्ठलराव सोमनाथ हलगेकर यांना मंदिराच्या बांधकामासाठी भरीव निधी देण्याबाबत निवेदन सादर करण्यात आले.
या निवेदनाचे सादरीकरण कमिटीचे अध्यक्ष श्री के. पी. पाटील, उपाध्यक्ष श्री के. एम. पाटील, सेक्रेटरी श्री पी. आर. पाटील, मीडिया प्रमुख श्री भगवंत बी. पाटील तसेच इतर सदस्यांच्या उपस्थितीत करण्यात आले. यावेळी श्री व्ही. बी. पाटील सर, श्री प्रमोद पाटील, श्री प्रशांत पाटील, श्री व्यंकट पाटील, श्री बाबाजी पाटील आणि श्री मारुती पाटील पैलवान हे सदस्यही उपस्थित होते.
निवेदनाद्वारे आमदारांना श्री महालक्ष्मी मंदिराच्या बांधकामाची सविस्तर माहिती, इस्टिमेशन तपशील तसेच पुढील रूपरेषा सादर करण्यात आली. आमदार हलगेकर यांनी ती माहिती भक्तीभावाने ऐकून घेत निवेदन आदरपूर्वक स्वीकारले.
या प्रसंगी त्यांनी सांगितले की, “श्री महालक्ष्मी मंदिर, वडेबैल हे श्रद्धा आणि आस्थेचे केंद्र असून मंदिराच्या बांधकामासाठी आवश्यक निधी कोणत्याही परिस्थितीत मंजूर केला जाईल,” असे आश्वासन दिले.
श्री महालक्ष्मी मंदिर कमिटी व ग्रामस्थांच्या वतीने आमदार हलगेकर यांचे मनःपूर्वक आभार मानण्यात आले. तसेच सर्व भक्तगणांना मंदिर बांधकामासाठी सहकार्याचे आवाहन करण्यात आले.
ವಡೆಬೈಲ್ ಶ್ರೀ ಮಹಾಲಕ್ಷ್ಮಿ ದೇವಾಲಯ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ
ಖಾನಾಪುರ : ವಡೆಬೈಲ್ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಇಂದು ಖಾನಾಪುರ ಕ್ಷೇತ್ರದ ಶಾಸಕ ಮಾನ್ಯ ಶ್ರೀ ವಿತ್ತಲರಾವ ಸೋಮನಾಥ ಹಳಗೆಕರ ಅವರಿಗೆ ದೇವಾಲಯ ನಿರ್ಮಾಣಕ್ಕಾಗಿ ಭಾರೀ ಅನುದಾನ ನೀಡುವ ಕುರಿತು ಮನವಿಪತ್ರ ಸಲ್ಲಿಸಲಾಯಿತು.
ಈ ಮನವಿಯನ್ನು ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ಪಾಟೀಲ, ಉಪಾಧ್ಯಕ್ಷ ಶ್ರೀ ಕೆ.ಎಂ. ಪಾಟೀಲ, ಕಾರ್ಯದರ್ಶಿ ಶ್ರೀ ಪಿ.ಆರ್. ಪಾಟೀಲ, ಮಾಧ್ಯಮ ಪ್ರಮುಖ ಶ್ರೀ ಭಗವಂತ ಬಿ. ಪಾಟೀಲ ಹಾಗೂ ಇತರ ಸದಸ್ಯರ ಸಾನ್ನಿಧ್ಯದಲ್ಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವಿ.ಬಿ. ಪಾಟೀಲ ಸರ್, ಶ್ರೀ ಪ್ರಮೋದ ಪಾಟೀಲ, ಶ್ರೀ ಪ್ರಶಾಂತ ಪಾಟೀಲ, ಶ್ರೀ ವ್ಯಂಕಟ ಪಾಟೀಲ, ಶ್ರೀ ಬಾಬಾಜಿ ಪಾಟೀಲ ಮತ್ತು ಶ್ರೀ ಮಾರೂತಿ ಪಾಟೀಲ ಪೈಲ್ವಾನ ಹಾಜರಿದ್ದರು.
ಮನವಿಯಲ್ಲಿ ಶ್ರೀ ಮಹಾಲಕ್ಷ್ಮಿ ದೇವಾಲಯ ನಿರ್ಮಾಣದ ಸಂಪೂರ್ಣ ವಿವರ, ಅಂದಾಜು ಮೊತ್ತ ಹಾಗೂ ಮುಂದಿನ ಯೋಜನೆಯ ರೂಪರೇಷೆ ಶಾಸಕರಿಗೆ ವಿವರಿಸಲಾಯಿತು. ಶಾಸಕರಾದ ಹಳಗೆಕರ ಅವರು ಮನವಿಯನ್ನು ಭಕ್ತಿಭಾವದಿಂದ ಆಲಿಸಿ ಗೌರವಪೂರ್ವಕವಾಗಿ ಸ್ವೀಕರಿಸಿದರು.
ಈ ವೇಳೆ ಅವರು ಹೇಳಿದರು, “ಶ್ರೀ ಮಹಾಲಕ್ಷ್ಮಿ ದೇವಾಲಯ ವಡೆಬೈಲ್ ಪ್ರದೇಶದ ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದೆ. ದೇವಾಲಯ ನಿರ್ಮಾಣಕ್ಕಾಗಿ ಅಗತ್ಯ ಅನುದಾನವನ್ನು ಯಾವ ಪರಿಸ್ಥಿತಿಯಲ್ಲಾದರೂ ಒದಗಿಸಲಾಗುತ್ತದೆ,” ಎಂದು ಭರವಸೆ ನೀಡಿದರು.
ಶ್ರೀ ಮಹಾಲಕ್ಷ್ಮಿ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಶಾಸಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು. ಜೊತೆಗೆ ಎಲ್ಲಾ ಭಕ್ತರಿಗೆ ದೇವಾಲಯ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.
