खानापूर: दोन मुलांसह महिला बेपत्ता; पत्नी व मुलांना शोधून काढा पतीची विनंती | ಖಾನಾಪುರ: ಎರಡು ಮಕ್ಕಳೊಂದಿಗೆ ಮಹಿಳೆ ನಾಪತ್ತೆ; ನನ್ನ ಪತ್ನಿ ಮತ್ತು ಮಕ್ಕಳನ್ನು ಹುಡುಕಿ ಕೊಡಿ – ಪತಿಯ ಮನವಿ
खानापूर: ऑनलाईन गेमच्या व्यसनात अडकलेल्या एका गृहिणीने मोठ्या प्रमाणावर कर्ज केल्यानंतर दोन लहान मुलांसह बेपत्ता झाल्याची घटना खानापूर तालुक्यातील माडीगुंजी गावातून समोर आली आहे. या घटनेला जवळपास महिना उलटून गेला असला तरी अद्याप महिला व मुलांचा शोध लागलेला नाही.
बेपत्ता झालेल्या महिलेचे नाव जेन्निफर सायमन मस्करेन (वय 32) असे असून तिच्यासोबत तिची मुलगी कियोना (7) आणि मुलगा आंड्रिल (4) हे दोघेही बेपत्ता आहेत.
मिळालेल्या माहितीनुसार, दिनांक 10 डिसेंबर रोजी माडीगुंजी येथून मुलाच्या तपासणीसाठी केएलई रुग्णालयात जाण्यासाठी निघालेले हे तिघे बेळगावला आल्यानंतर बेपत्ता झाले. सध्या त्यांचे मोबाईल फोन बंद असल्याने कुटुंबीयांमध्ये तीव्र चिंता पसरली आहे.
पत्नी व मुले बेपत्ता झाल्याने मानसिक तणावात असलेले पती सायमन मस्करेन (रा. माडीगुंजी) यांनी प्रशासनाकडे आपल्या पत्नी व मुलांचा शोध लावण्याची आर्त विनंती केली आहे.
सायमन मस्करेन यांनी दिलेल्या माहितीनुसार, गेल्या सुमारे एक वर्षापासून जेन्निफर ऑनलाईन गेमच्या व्यसनात अडकली होती. ती सतत मोबाईलवर वेळ घालवत असे. विचारणा केली असता ‘वर्क फ्रॉम होम’ करत असून स्वतःच्या खर्चासाठी थोडीफार कमाई करत असल्याचे ती सांगत होती. मात्र, ऑनलाईन गेमच्या नादात तिने स्व-सहायता गटाकडून कर्ज घेतल्याचे पुढे उघड झाले आहे.
दरम्यान, बेळगाव येथील एका खासगी रुग्णालयात मुलगा आंड्रिल याच्यावर शस्त्रक्रिया करण्यात आली होती. दिनांक 6 डिसेंबर रोजी ते रुग्णालयातून घरी परतले होते. त्यानंतर 10 डिसेंबर रोजी खानापूर येथील घरातून पुन्हा मुलाच्या तपासणीसाठी केएलई रुग्णालयात गेली असता, कोणतीही पूर्वसूचना न देता जेन्निफर दोन मुलांसह बेपत्ता झाल्याचे सायमन मस्करे यांनी सांगितले.
पत्नी व मुले बेपत्ता झाल्यानंतर दुसऱ्याच दिवशी आपण खानापूर पोलीस ठाण्यात तक्रार दिली होती. मात्र, ‘अधिवेशनामुळे आम्ही व्यस्त आहोत, पत्नी व मुले परत येतील, चिंता करू नका,’ असे सांगून पोलिसांनी आश्वासन दिले. पण आजतागायत कोणतीही ठोस माहिती मिळालेली नाही.
“कृपया माझी पत्नी व मुलांना शोधून काढा,” अशी भावनिक विनंती सायमन मस्करेन (माडीगुंजी) यांनी प्रशासन व पोलिसांकडे केली आहे.
ಎರಡು ಮಕ್ಕಳೊಂದಿಗೆ ಮಹಿಳೆ ನಾಪತ್ತೆ
ಬೆಳಗಾವಿ: ಆನ್‌ಲೈನ್ ಗೇಮ್ ವ್ಯಸನಕ್ಕೆ ಒಳಗಾಗಿದ್ದ ಗೃಹಿಣಿಯೊಬ್ಬರು ಭಾರಿ ಸಾಲ ಮಾಡಿಕೊಂಡು ತಮ್ಮ ಎರಡು ಸಣ್ಣ ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಖಾನಾಪುರ ತಾಲ್ಲೂಕಿನ ಮಾಡಿಗುಂಜಿ ಗ್ರಾಮದಿಂದ ವರದಿಯಾಗಿದೆ. ಈ ಘಟನೆಗೆ ತಿಂಗಳ ಸಮೀಪವಾದರೂ ಮಹಿಳೆ ಹಾಗೂ ಮಕ್ಕಳ ಪತ್ತೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ನಾಪತ್ತೆಯಾಗಿರುವ ಮಹಿಳೆಯನ್ನು ಜೆನ್ನಿಫರ್ ಸಾಯಮನ್ ಮಸ್ಕರೆ (32) ಎಂದು ಗುರುತಿಸಲಾಗಿದ್ದು, ಇವರೊಂದಿಗೆ ಪುತ್ರಿ ಕಿಯೋನಾ (7) ಹಾಗೂ ಪುತ್ರ ಆಂಡ್ರಿಲ್ (4) ಕೂಡ ಕಾಣೆಯಾಗಿದ್ದಾರೆ.
ದಿನಾಂಕ ಡಿಸೆಂಬರ್ 10ರಂದು ಮಾಡಿಗುಂಜಿಯಿಂದ ಮಗನ ವೈದ್ಯಕೀಯ ತಪಾಸಣೆಗೆಂದು ಕೆಎಲ್‌ಇ ಆಸ್ಪತ್ರೆಗೆ ಹೊರಟಿದ್ದ ಈ ಮೂವರು ಬೆಳಗಾವಿಗೆ ಬಂದ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿರುವುದರಿಂದ ಕುಟುಂಬಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ.
ಪತ್ನಿ ಹಾಗೂ ಮಕ್ಕಳು ಕಾಣೆಯಾಗಿರುವುದರಿಂದ ಮಾನಸಿಕವಾಗಿ ಕುಸಿದಿರುವ ಪತಿ ಸಾಯಮನ್ ಮಸ್ಕರೆ (ಮಾಡಿಗುಂಜಿ) ಅವರು, ತಮ್ಮ ಪತ್ನಿ ಮತ್ತು ಮಕ್ಕಳನ್ನು ಪತ್ತೆಹಚ್ಚುವಂತೆ ಪೊಲೀಸರನ್ನು ಹಾಗೂ ಆಡಳಿತವನ್ನು ಕಣ್ಣೀರಿನಿಂದ ಮನವಿ ಮಾಡಿಕೊಂಡಿದ್ದಾರೆ.
ಸಾಯಮನ್ ಮಸ್ಕರೆ ನೀಡಿದ ಮಾಹಿತಿಯಂತೆ, ಕಳೆದ ಒಂದು ವರ್ಷದಿಂದ ಜೆನ್ನಿಫರ್ ಆನ್‌ಲೈನ್ ಗೇಮ್ ವ್ಯಸನಕ್ಕೆ ಒಳಗಾಗಿದ್ದರು. ಸದಾ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ ಅವರು, “ವರ್ಕ್ ಫ್ರಂ ಹೋಮ್ ಮಾಡುತ್ತಿದ್ದೇನೆ, ಸ್ವಂತ ಖರ್ಚಿಗೆ ಸ್ವಲ್ಪ ಸಂಪಾದನೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಪತಿಗೆ ಹೇಳುತ್ತಿದ್ದರು. ಆದರೆ ಆನ್‌ಲೈನ್ ಆಟದ ಚಟದಿಂದಾಗಿ ಅವರು ಸ್ವಸಹಾಯ ಸಂಘದಿಂದ ಸಾಲ ಮಾಡಿಕೊಂಡಿರುವುದು ನಂತರ ಬೆಳಕಿಗೆ ಬಂದಿದೆ.
ಇದೇ ಸಂದರ್ಭದಲ್ಲಿ, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಪುತ್ರ ಆಂಡ್ರಿಲ್‌ಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಡಿಸೆಂಬರ್ 6ರಂದು ಕುಟುಂಬ ಮನೆಗೆ ಮರಳಿತ್ತು. ನಂತರ ಡಿಸೆಂಬರ್ 10ರಂದು ಮತ್ತೆ ಮಗನ ತಪಾಸಣೆಗೆಂದು ಕೆಎಲ್‌ಇ ಆಸ್ಪತ್ರೆಗೆ ತೆರಳಿದ ಜೆನ್ನಿಫರ್, ಯಾವುದೇ ಸುಳಿವು ನೀಡದೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಸಾಯಮನ್ ಮಸ್ಕರೆ ತಿಳಿಸಿದ್ದಾರೆ.
ಪತ್ನಿ ಮತ್ತು ಮಕ್ಕಳು ಕಾಣೆಯಾದ ಮರುದಿನವೇ ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಆದರೆ “ಅಧಿವೇಶನದ ಕಾರಣದಿಂದ ನಾವು ತುಂಬಾ ಬ್ಯುಸಿಯಾಗಿದ್ದೇವೆ, ಆತಂಕಪಡಬೇಡಿ, ಅವರು ಮರಳಿ ಬರುತ್ತಾರೆ” ಎಂದು ಪೊಲೀಸರು ಹೇಳಿ ಕಳುಹಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಮಾಹಿತಿ ದೊರಕಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
“ದಯವಿಟ್ಟು ನನ್ನ ಪತ್ನಿ ಮತ್ತು ಮಕ್ಕಳನ್ನು ಹುಡುಕಿ ಕೊಡಿ” ಎಂದು ಸಾಯಮನ್ ಮಸ್ಕರೆ (ಮಾಡಿಗುಂಜಿ) ಅವರು ಆಡಳಿತ ಹಾಗೂ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
