खानापूर

उद्या वासकरवाडी येथे वै. तात्यासाहेब बाबासाहेब वासकर महाराज यांचा 28 वा पुण्यस्मरण सोहळा | ವಾಸಕರವಾಡಿಯಲ್ಲಿ ತಾತ್ಯಾಸಾಹೇಬ ಬಾಬಾಸಾಹೇಬ ವಾಸಕರ ಮಹಾರಾಜರ ೨೮ನೇ ಪುಣ್ಯಸ್ಮರಣೆ

खानापूर: तालुक्यातील मौजे वासकरवाडी (ता. खानापूर, जि. बेळगाव) येथे वेदांत चक्रवर्ती, जगद्गुरू चैतन्य संत शिरोमणी श्री तुकाराम महाराज यांचे आठवे विद्यावंशज, श्रीमंत ब्रम्हचैतन्य सद्गुरू वै. तात्यासाहेब बाबासाहेब वासकर महाराज (पंढरपूर) यांचा 28 वा पुण्यस्मरण सोहळा रविवार दिनांक 22 फेब्रुवारी 2026 (फाल्गुन शुद्ध 6) रोजी भक्तिभावाने साजरा करण्यात येणार आहे.

या पुण्यस्मरण सोहळ्यानिमित्त विविध धार्मिक कार्यक्रमांचे आयोजन करण्यात आले आहे. रविवारी सकाळी 7 वाजता पोथी स्थापना, विणा पूजन व इतर धार्मिक विधी होणार आहेत. सकाळी 10 ते 12 या वेळेत पुष्पवृष्टी कार्यक्रम होईल. दुपारी 12 ते 3 भोजन व विश्रांती ठेवण्यात आली आहे. दुपारी 3 ते 5 या वेळेत श्री तुकोबारायांच्या मंचरी गाथेवरील भजन सादर केले जाईल.

सायंकाळी 6 ते 7 या वेळेत ह.भ.प. कृष्णमुर्ती बोंगाळे हलकर्णी यांचे प्रवचन होईल. त्यानंतर 7 ते 7.30 या वेळेत रामकृष्णहरी नामजप करण्यात येईल. रात्री 8 ते 10 या वेळेत ह.भ.प. देवदास निवृत्ती सुतार (ईश्वरपूर बसी) यांचे कीर्तन होणार आहे.

खानापूर तालुका वारकरी सांप्रदायिक शिक्षण संस्था, होनकल यांच्या सहकार्याने हा सोहळा आयोजित करण्यात आला आहे. समस्त वासकर वारकरी संप्रदाय, खानापूर तालुका यांच्या वतीने सर्व वारकरी व भाविकांनी मोठ्या संख्येने उपस्थित राहून श्री गुरूंच्या सेवेचा लाभ घ्यावा, असे आवाहन करण्यात आले आहे.

श्री गुरूचरण सेवक ह. भ. प. गंगाराम मल्हारी हेब्बाळकर (वासकरवाडी) यांनी भाविकांना उपस्थित राहण्याचे नम्र आवाहन केले आहे.

ವಾಸಕರವಾಡಿಯಲ್ಲಿ ತಾತ್ಯಾಸಾಹೇಬ ಬಾಬಾಸಾಹೇಬ ವಾಸಕರ ಮಹಾರಾಜರ ೨೮ನೇ ಪುಣ್ಯಸ್ಮರಣೆ ಉತ್ಸವ ಫೆಬ್ರವರಿ ೨೨ರಂದು

ಖಾನಾಪುರ ತಾಲ್ಲೂಕಿನ ಮೌಜೆ ವಾಸಕರವಾಡಿ (ತಾ. ಖಾನಾಪುರ, ಜಿ. ಬೆಳಗಾವಿ)ಯಲ್ಲಿ ವೇದಾಂತ ಚಕ್ರವರ್ತಿ, ಜಗದ್ಗುರು ಚೈತನ್ಯ ಸಂತ ಶಿರೋಮಣಿ ಶ್ರೀ ತುಕಾರಾಮ ಮಹಾರಾಜರ ಎಂಟನೇ ವಿದ್ಯಾವಂಶಜರಾದ ಶ್ರೀಮಂತ ಬ್ರಹ್ಮಚೈತನ್ಯ ಸದ್ಗುರು ವೈ. ತಾತ್ಯಾಸಾಹೇಬ ಬಾಬಾಸಾಹೇಬ ವಾಸಕರ ಮಹಾರಾಜ (ಪಂಡರಪುರ) ಅವರ ೨೮ನೇ ಪುಣ್ಯಸ್ಮರಣೆ ಉತ್ಸವವನ್ನು ಭಕ್ತಿಭಾವದಿಂದ ಭಾನುವಾರ ದಿನಾಂಕ ೨೨ ಫೆಬ್ರವರಿ ೨೦೨೬ (ಫಾಲ್ಗುಣ ಶುಧ್ಧ ೬) ರಂದು ಆಚರಿಸಲು ನಿರ್ಧರಿಸಲಾಗಿದೆ.

ಈ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾನುವಾರ ಬೆಳಿಗ್ಗೆ ೭ ಗಂಟೆಗೆ ಪೋಥಿ ಸ್ಥಾಪನೆ, ವೀಣಾ ಪೂಜೆ ಹಾಗೂ ಇತರ ಧಾರ್ಮಿಕ ವಿಧಿಗಳು ನಡೆಯಲಿವೆ. ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧೨ರವರೆಗೆ ಪುಷ್ಪವೃಷ್ಠಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨ರಿಂದ ೩ರವರೆಗೆ ಮಹಾಪ್ರಸಾದ ಮತ್ತು ವಿಶ್ರಾಂತಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ೩ರಿಂದ ೫ರವರೆಗೆ ಶ್ರೀ ತುಕಾರಾಮರ ಮಂಚರಿ ಗಾಥೆಯ ಮೇಲಿನ ಭಜನೆ ನಡೆಯಲಿದೆ.

ಸಂಜೆ ೬ರಿಂದ ೭ರವರೆಗೆ ಹ.ಭ.ಪ. ಕೃಷ್ಣಮೂರ್ತಿ ಬೋಂಗಾಳೆ ಹಲಕರ್ಣಿ ಅವರ ಪ್ರವಚನ ನಡೆಯಲಿದೆ. ಬಳಿಕ ೭ರಿಂದ ೭.೩೦ರವರೆಗೆ ರಾಮಕೃಷ್ಣಹರಿ ನಾಮಜಪ ನಡೆಯಲಿದೆ. ರಾತ್ರಿ ೮ರಿಂದ ೧೦ರವರೆಗೆ ಹ.ಭ.ಪ. ದೇವದಾಸ್ ನಿವೃತ್ತಿ ಸುತಾರ (ಈಶ್ವರಪುರ ಬಸಿ) ಅವರ ಕೀರ್ತನೆ ಕಾರ್ಯಕ್ರಮ ಜರುಗಲಿದೆ.

ಖಾನಾಪುರ ತಾಲ್ಲೂಕು ವಾರಕಾರಿ ಸಂಪ್ರದಾಯಿಕ ಶಿಕ್ಷಣ ಸಂಸ್ಥೆ, ಹೊನಕಲ್ ಇವರ ಸಹಕಾರದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಸಮಸ್ತ ವಾಸಕರ ವಾರಕಾರಿ ಸಂಪ್ರದಾಯ, ಖಾನಾಪುರ ತಾಲ್ಲೂಕು ವತಿಯಿಂದ ಎಲ್ಲಾ ವಾರಕಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗುರುವಿನ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

ಶ್ರೀ ಗುರುಚರಣ ಸೇವಕ ಹ.ಭ.ಪ. ಗಂಗಾರಾಮ ಮಲ್ಹಾರಿ ಹೆಬ್ಬಾಳಕರ (ವಾಸಕರವಾಡಿ) ಅವರು ಸಹ ಭಕ್ತರನ್ನು ಈ ಪುಣ್ಯಸ್ಮರಣೆ ಉತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या