20 वर्षांची सेवा, पण सुरक्षा शून्य! खानापूरच्या कर्मचाऱ्यांचा संताप | 20 ವರ್ಷಗಳ ಸೇವೆ, ಆದರೆ ಭದ್ರತೆ ಶೂನ್ಯ! ಖಾನಾಪುರ ನೌಕರರ ಆಕ್ರೋಶ
खानापूर:आपल्या विविध न्याय्य मागण्या पूर्ण कराव्यात या मागणीसाठी खानापूर तालुक्यातील वसतिगृह आणि निवासी शाळांमधील कंत्राटी कर्मचाऱ्यांनी आज आक्रमक पवित्रा घेत तहसीलदारांमार्फत सरकारला निवेदन सादर केले. सेवा सुरक्षा आणि थकीत वेतनावरून कर्मचाऱ्यांनी तीव्र संताप व्यक्त केला आहे.
प्रमुख मागण्या आणि ठळक मुद्दे:
- सेवा सुरक्षा: गेल्या २० वर्षांपासून स्वयंपाकी, स्वच्छता कर्मचारी आणि सुरक्षा रक्षक म्हणून काम करणाऱ्या कर्मचाऱ्यांना अद्याप सेवा शाश्वती मिळालेली नाही.
- किमान वेतन: वाढत्या महागाईच्या काळात कंत्राटी कर्मचाऱ्यांना किमान वेतन मिळावे, अशी आग्रही मागणी करण्यात आली आहे.
- सुट्टीच्या काळातील वेतन: सुट्टीच्या कालावधीतही कर्मचाऱ्यांचे वेतन कपात करू नये, अशी मागणी निवेदनात करण्यात आली आहे.
- आंदोलनाचा इशारा: जर सरकारने या मागण्यांकडे तातडीने लक्ष दिले नाही, तर आगामी काळात आंदोलन अधिक तीव्र करण्याचा इशारा कर्मचाऱ्यांनी दिला आहे.
याप्रसंगी कर्नाटक राज्य शासकीय वसतिगृह आणि निवासी शाळा कंत्राटी कर्मचारी संघटनेचे जिल्हाध्यक्ष प्रदीप दळवाई, जिल्हा सरचिटणीस लक्कप्पा कांबळे, श्रीकांत सणक्की, मल्लाप्पा बातमारे, मुबारक नदाफ आणि इतर अनेक कर्मचारी उपस्थित होते.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ; ಹೋರಾಟದ ಹಾದಿ ಹಿಡಿದ ಹೊರಗುತ್ತಿಗೆ ನೌಕರರು!
ಖಾನಾಪುರ: ತಮ್ಮ ದೀರ್ಘಕಾಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾನಾಪುರ ತಾಲೂಕಿನ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರು ಇಂದು ಪ್ರತಿಭಟನೆ ನಡೆಸಿದರು. ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಿದರು.
ಸುದ್ದಿಯ ಮುಖ್ಯಾಂಶಗಳು:
- ಸೇವಾ ಭದ್ರತೆಗೆ ಪಟ್ಟು: ಕಳೆದ ಎರಡು ದಶಕಗಳಿಂದ ಅಡುಗೆಯವರು, ಸ್ವಚ್ಛತಾಗಾರರು ಮತ್ತು ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿದ್ದರೂ ತಮಗೆ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಸಿಕ್ಕಿಲ್ಲ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
- ವೇತನ ವಿಳಂಬಕ್ಕೆ ಆಕ್ರೋಶ: ನಿಯಮಿತವಾಗಿ ವೇತನ ಪಾವತಿಯಾಗದಿರುವುದು ಮತ್ತು ರಜಾ ಅವಧಿಯಲ್ಲಿ ವೇತನ ಕಡಿತಗೊಳಿಸುತ್ತಿರುವುದರ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
- ಪ್ರಮುಖ ಬೇಡಿಕೆಗಳು: ಯಾವುದೇ ಕಾರಣಕ್ಕೂ ನೌಕರರನ್ನು ಕೆಲಸದಿಂದ ವಜಾ ಮಾಡಬಾರದು ಮತ್ತು ರಜಾ ಅವಧಿಯಲ್ಲೂ ಪೂರ್ಣ ವೇತನ ನೀಡಬೇಕು ಎಂಬುದು ಸಂಘದ ಪ್ರಮುಖ ಆಗ್ರಹವಾಗಿದೆ.
- ತೀವ್ರ ಹೋರಾಟದ ಎಚ್ಚರಿಕೆ: ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಘದ ಮುಖಂಡರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ದಳವಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾಂಬಳೆ, ಮುಖಂಡರಾದ ಶ್ರೀಕಾಂತ ಸಣ್ಣಕ್ಕಿ, ಮಲ್ಲಪ್ಪಾ ಬಾತಮಾರೆ, ಮುಬಾರಕ ನದಾಫ ಸೇರಿದಂತೆ ನೂರಾರು ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.

