खानापूरात जिल्हास्तरीय रोलर स्केटिंग स्पर्धा उत्साहात संपन्न; स्पर्धेत साई अकादमीचे वर्चस्व | ಖಾನಾಪುರದಲ್ಲಿ ಜಿಲ್ಲಾ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆ ಯಶಸ್ವಿ; ಸಾಯಿ ಸ್ಪೋರ್ಟ್ಸ್ ಅಕಾಡೆಮಿಗೆ ಪದಕಗಳ ಮಳೆ
खानापूर : बेळगाव जिल्हा रोलर स्केटिंग असोसिएशन तर्फे मराठा मंडळ, खानापूर येथे आयोजित करण्यात आलेली जिल्हास्तरीय रोलर स्केटिंग स्पर्धा अत्यंत उत्साहपूर्ण वातावरणात पार पडली. या स्पर्धेत बेळगाव जिल्ह्यातील सुमारे 60 उदयोन्मुख स्केटर्सनी सहभाग नोंदवत आपली उत्कृष्ट कौशल्ये सादर केली.
स्पर्धेच्या उद्घाटन व बक्षीस वितरण समारंभाला प्रसाद जाधव, राजलक्ष्मी जाधव, सूर्यकांत हिंडलगेकर योगेश कुलकर्णी आणि ऋषिकेश पसारे यांसह अनेक मान्यवरांची उपस्थिती लाभली होती. आयोजकांनी स्पर्धेच्या यशस्वी आयोजनासाठी विशेष परिश्रम घेतले. त्यामुळे खेळाडूंना आपले टॅलेंट सादर करण्यासाठी एक उत्कृष्ट व्यासपीठ उपलब्ध झाले.
साई स्पोर्ट्स अकादमीची दैदीप्यमान कामगिरी
साई स्पोर्ट्स अकादमीच्या मार्गदर्शनाखाली प्रशिक्षण घेतलेल्या अनेक खेळाडूंनी या स्पर्धेत पदकांची लयलूट करत आपले वर्चस्व सिद्ध केले.
सुवर्णपदक विजेते : आशिष अंगडीकर, आरोही काटगाळकर, सई आनंदाचे, नक्ष हिरेमठ, कार्तिक चौधरी, विक्रांत चौधरी, सुजित साळोखे, शिवांगी मोदगेकर, श्रेयस बजंत्री, आदिया सय्यद, अमिना ताशिलदार, अल्मास ताशिलदार आणि अक्किराक्ष यांनी प्रत्येकी दोन सुवर्णपदके पटकावली.
रौप्यपदक विजेते : सोहम वाघमारे, स्वराज पाटील आणि मायशा जैन यांनी प्रत्येकी दोन रौप्यपदके जिंकली.
कांस्यपदक विजेता : सार्थक मार्दोळकर याने दोन कांस्यपदके मिळवून अकादमीच्या शिरपेचात मानाचा तुरा रोवला.
सर्व विजेत्या खेळाडूंना मान्यवरांच्या हस्ते पदक व प्रमाणपत्र देऊन गौरविण्यात आले. स्पर्धेच्या यशामुळे खानापूर परिसरात क्रीडा क्षेत्राला नवचैतन्य लाभल्याचे चित्र पाहायला मिळाले.
ಖಾನಾಪುರದಲ್ಲಿ ಜಿಲ್ಲಾ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆ ಯಶಸ್ವಿ; ಸಾಯಿ ಸ್ಪೋರ್ಟ್ಸ್ ಅಕಾಡೆಮಿಗೆ ಪದಕಗಳ ಮಳೆ
ಖಾನಾಪುರ : ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಖಾನಾಪುರದ ಮರಾಠಾ ಮಂಡಳದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಸುಮಾರು 60 ಪ್ರತಿಭಾವಂತ ಸ್ಕೇಟರ್‌ಗಳು ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ಸ್ಪರ್ಧೆಯ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಪ್ರಸಾದ್ ಜಾಧವ್, ರಾಜಲಕ್ಷ್ಮಿ ಜಾಧವ್, ಸೂರ್ಯಕಾಂತ್ ಹಿಂದಳಗೇಕರ್, ಯೋಗೇಶ್ ಕುಲಕರ್ಣಿ ಮತ್ತು ಋಷಿಕೇಶ್ ಪಸಾರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸ್ಪರ್ಧೆಯ ಯಶಸ್ವಿ ಆಯೋಜನೆಗಾಗಿ ಆಯೋಜಕರು ವಿಶೇಷ ಶ್ರಮವಹಿಸಿದ್ದರು. ಇದರಿಂದ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ದೊರೆಯಿತು.
ಸಾಯಿ ಸ್ಪೋರ್ಟ್ಸ್ ಅಕಾಡೆಮಿಯ ದಿಟ್ಟ ಸಾಧನೆ
ಸಾಯಿ ಸ್ಪೋರ್ಟ್ಸ್ ಅಕಾಡೆಮಿ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಹಲವಾರು ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಪದಕಗಳ ಮಳೆಗರೆದು ಗಮನಸೆಳೆದರು.
ಎರಡು ಚಿನ್ನದ ಪದಕ ವಿಜೇತರು: ಆಶೀಷ ಅಂಗಡಿಕರ್, ಆರೋಹಿ ಕಾಟಗಾಳಕರ, ಸಾಯಿ ಆನಂದಾಚೆ, ನಕ್ಷ ಹಿರೇಮಠ, ಕಾರ್ತಿಕ್ ಚೌಧರಿ, ವಿಕ್ರಾಂತ್ ಚೌಧರಿ, ಸುಜಿತ್ ಸಾಲೋಖೆ, ಶಿವಾಂಗಿ ಮೋದಗೇಕರ್, ಶ್ರೇಯಸ್ ಬಜಂತ್ರಿ, ಆದಿಯಾ ಸಯ್ಯಿದ್, ಅಮಿನಾ ತಾಶಿಲ್ದಾರ್, ಅಲ್ಮಾಸ್ ತಾಶಿಲ್ದಾರ್ ಮತ್ತು ಅಕ್ಕಿರಾಕ್ಷ ಅವರು ತಲಾ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡರು.
ಎರಡು ಬೆಳ್ಳಿ ಪದಕ ವಿಜೇತರು: ಸೋಹಮ್ ವಾಘಮಾರೆ, ಸ್ವರಾಜ್ ಪಾಟೀಲ್ ಮತ್ತು ಮೈಶಾ ಜೈನ್ ತಲಾ ಎರಡು ಬೆಳ್ಳಿ ಪದಕಗಳನ್ನು ಗೆದ್ದರು.
ಎರಡು ಕಂಚಿನ ಪದಕ ವಿಜೇತ: ಸಾರ್ತಕ್ ಮಾರ್ದೋಳ್ಕರ್ ಎರಡು ಕಂಚಿನ ಪದಕಗಳನ್ನು ಪಡೆದು ಅಕಾಡೆಮಿಗೆ ಕೀರ್ತಿ ತಂದರು.
ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ ಗಣ್ಯರ ಹಸ್ತದಿಂದ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಸ್ಪರ್ಧೆಯ ಯಶಸ್ಸಿನಿಂದ ಖಾನಾಪುರ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆತಿದೆ.
