खानापूरमध्ये झाड कोसळून दुचाकीस्वार जखमी; धोकादायक झाडांकडे दुर्लक्ष झाल्याचा आरोप | ಖಾನಾಪುರದಲ್ಲಿ ಮರ ಬಿದ್ದು ಬೈಕ್ ಸವಾರ ಗಾಯ; ಅಪಾಯಕಾರಿ ಮರಗಳ ತೆರವಿಗೆ ಆಗ್ರಹ
खानापूर : खानापूरहून जांबोटीला जाणारा मुख्य रस्ता हा दररोज हजारो पर्यटक आणि स्थानिक नागरिकांच्या वर्दळीचा मार्ग मानला जातो. मात्र, या रस्त्यावर धोकादायक झाडांकडे दुर्लक्ष झाल्यामुळे आज शानाया गार्डनजवळ दुचाकीस्वारावर झाड कोसळून गंभीर अपघात घडल्याची घटना समोर आली आहे.
मिळालेल्या माहितीनुसार, खानापूर–जांबोटी मार्गावरील शानाया गार्डन परिसरात दुचाकीवरून जात असताना विनायक पाटील यांच्यावर अचानक मोठे झाड कोसळले. या अपघातात विनायक पाटील गंभीर जखमी झाले असून त्यांची दुचाकी पूर्णपणे नुकसानग्रस्त झाली आहे. विनायक पाटील हे बरगाव येथील रहिवासी असून सुदैवाने ते प्राणघातक संकटातून बचावले.
दरम्यान, यापूर्वीही हलकर्णी गावाच्या हद्दीत कीड लागून पडण्याच्या अवस्थेत असलेल्या मोठ्या आंब्याच्या झाडाबाबत तक्रार केली होती. तरीदेखील याकडे दुर्लक्ष झाल्याचा आरोप नागरिकांकडून केला जात आहे.
धोकादायक झाडांची पाहणी करून ती वेळेत हटविण्याची जबाबदारी असताना संबंधित एसीएफ (सहायक वनसंरक्षक) आणि वन विभागाकडून योग्य ती कारवाई होत नसल्यामुळे नागरिकांमध्ये संताप व्यक्त केला जात आहे. तालुक्यातील प्रमुख रस्त्यांच्या कडेला असलेली जीर्ण व धोकादायक झाडे अद्यापही अपघाताचे कारण ठरू शकतात, अशी भीती व्यक्त केली जात आहे.
खानापूर–हळियाळ मार्गासह इतर महत्त्वाच्या रस्त्यांलगत असलेली अनेक जुनी झाडे सध्या धोकादायक अवस्थेत उभी असल्याने त्यांची तात्काळ पाहणी करून आवश्यक ती उपाययोजना करावी, अशी मागणी स्थानिक नागरिकांनी केली आहे.
ಖಾನಾಪುರದಲ್ಲಿ ಮರ ಬಿದ್ದು ಬೈಕ್ ಸವಾರ ಗಾಯ; ಅಪಾಯಕಾರಿ ಮರಗಳ ತೆರವಿಗೆ ಆಗ್ರಹ
ಖಾನಾಪುರ : ಖಾನಾಪುರದಿಂದ ಜಾಂಬೋಟಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಇಂದು ಮರ ಬಿದ್ದು ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಹಾಗೂ ಸ್ಥಳೀಯರು ಸಂಚರಿಸುವ ಈ ರಸ್ತೆಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಖಾನಾಪುರ–ಜಾಂಬೋಟಿ ರಸ್ತೆಯ ಶನಾಯಾ ಗಾರ್ಡನ್ ಸಮೀಪ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿನಾಯಕ ಪಾಟೀಲ್ ಅವರ ಮೇಲೆ ಇದ್ದಕ್ಕಿದ್ದಂತೆ ದೊಡ್ಡ ಮರವೊಂದು ಬಿದ್ದಿದೆ. ಈ ಘಟನೆಯಲ್ಲಿ ವಿನಾಯಕ ಪಾಟೀಲ್ ಅವರಿಗೆ ಗಾಯಗಳಾಗಿದ್ದು, ಅವರ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ವಿನಾಯಕ ಪಾಟೀಲ್ ಅವರು ಬರಗಾಂವ ಗ್ರಾಮದ ನಿವಾಸಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದಕ್ಕೂ ಮೊದಲು ಹಲ್ಕರ್ಣಿ ಗ್ರಾಮದ ವ್ಯಾಪ್ತಿಯಲ್ಲಿ ಗೆದ್ದಲು ಹಿಡಿದು ಬೀಳುವ ಸ್ಥಿತಿಯಲ್ಲಿದ್ದ ದೊಡ್ಡ ಮಾವಿನ ಮರದ ಕುರಿತು ಸಂಬಂಧಿತ ಇಲಾಖೆಗೆ ಸ್ಥಳೀಯ ನಾಗರಿಕರು ತಕರಾರು ನೀಡಿದ್ದರು. ಆದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಅಪಾಯಕಾರಿ ಮರಗಳನ್ನು ಪರಿಶೀಲಿಸಿ ಅವುಗಳನ್ನು ಸಮಯಕ್ಕೆ ಸರಿಯಾಗಿ ತೆರವುಗೊಳಿಸುವ ಜವಾಬ್ದಾರಿ ಸಂಬಂಧಿತ ಎಸಿಎಫ್ (ಸಹಾಯಕ ಅರಣ್ಯ ಸಂರಕ್ಷಕ) ಮತ್ತು ಅರಣ್ಯ ಇಲಾಖೆಯ ಮೇಲಿದೆ. ಆದರೆ ಈ ಕುರಿತು ಸಮರ್ಪಕ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಖಾನಾಪುರ–ಹಳಿಯಾಳ ರಸ್ತೆ ಸೇರಿದಂತೆ ತಾಲೂಕಿನ ಪ್ರಮುಖ ರಸ್ತೆಗಳ ಬದಿಯಲ್ಲಿ ಹಳೆಯ ಹಾಗೂ ಅಪಾಯಕಾರಿ ಮರಗಳು ಇನ್ನೂ ನಿಂತಿರುವುದರಿಂದ ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಭೀತಿ ವ್ಯಕ್ತವಾಗಿದೆ. ಆದ್ದರಿಂದ ಇಂತಹ ಮರಗಳನ್ನು ತಕ್ಷಣ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

