खानापूर

खानापूर जनतेचा ‘मोफत प्रवास’ संपला! गणेबैल टोल नाका पुन्हा सुरू | ಖಾನಾಪುರ ಜನತೆಯ ‘ಉಚಿತ ಪ್ರಯಾಣ’ ಅಂತ್ಯ! ಗಣೇಬೈಲ್ ಟೋಲ್ ನಾಕಾ ಪುನಾರಂಭ

खानापूर: बेळगाव-पणजी राष्ट्रीय महामार्गावरून (NH-748) प्रवास करणाऱ्या खानापूरकर आणि गोवा-कर्नाटक प्रवाशांसाठी मिळणारी ‘फ्री राईड’ आता संपली आहे. गेल्या आठवडाभरापासून बंद असलेला गणेबैल टोल नाका शनिवार संध्याकाळपासून पुन्हा कार्यान्वित झाला असून, आता वाहनचालकांना खिशाला कात्री लावावी लागणार आहे.

नेमकं प्रकरण काय होतं?

​किमान वेतनाच्या मागणीसाठी टोल नाक्यावरील सुमारे २५ कर्मचाऱ्यांनी १४ मार्चपासून कामबंद आंदोलन पुकारले होते. या संपामुळे कर्मचाऱ्यांनी टोलचे बॅरिअर्स उघडून ठेवले होते. परिणामी, खानापूरहून बेळगाव किंवा गोव्याच्या दिशेने जाणाऱ्या हजारो वाहनचालकांना एकही रुपया न देता मोफत प्रवास करता येत होता.

प्रशासनाचा ‘ॲक्शन मोड’ आणि हायटेक वसुली

​महसुलाचे मोठे नुकसान होत असल्याचे पाहून ‘राष्ट्रीय महामार्ग प्राधिकरणाने’ (NHI) तातडीने पावले उचलली आहेत.

  • स्वयंचलित यंत्रणा: आता टोल वसुली पूर्णपणे ‘फास्टॅग’ (FASTag) द्वारे स्वयंचलित पद्धतीने केली जात आहे.
  • नवे कर्मचारी: सध्या तात्पुरत्या स्वरूपात नवीन एजन्सीकडून कर्मचारी तैनात करण्यात आले आहेत.
  • कंत्राटदाराला नोटीस: पगाराच्या मुद्द्यावरून गोंधळ घालणाऱ्या जुन्या कंत्राटदाराला प्रशासनाने नोटीस  बजावली आहे.

“सध्या टोल वसुली हायटेक देखरेखीखाली सुरू झाली आहे. ज्या वाहनांचे फास्टॅग चालत नाहीत, तिथेच केवळ मानवी हस्तक्षेपाची मदत घेतली जात आहे.”
— भुवनेश कुमार, अधिकारी (NHAI)

स्थानिक कर्मचाऱ्यांना दिलासा

बेळगावचे जिल्हाधिकारी मोहम्मद रोशन यांनी या प्रकरणात मध्यस्थी केली होती. संपावर गेलेल्या स्थानिक कर्मचाऱ्यांना दिलासा देताना अधिकाऱ्यांनी आश्वासन दिले आहे की, जेव्हा नवीन कायमस्वरूपी कंत्राटदार नियुक्त केला जाईल, तेव्हा जुन्या स्थानिक कर्मचाऱ्यांना कामावर घेण्यास प्राधान्य दिले जाईल.

ಖಾನಾಪುರ ಜನತೆಯ ‘ಉಚಿತ ಪ್ರಯಾಣ’ ಅಂತ್ಯ! ಗಣೇಬೈಲ್ ಟೋಲ್ ನಾಕಾ ಪುನಾರಂಭ

ಖಾನಾಪುರ: ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ (NH-748) ಕಳೆದ ಕೆಲವು ದಿನಗಳಿಂದ ಸಾಗುತ್ತಿದ್ದ ವಾಹನ ಸವಾರರ ‘ಉಚಿತ ಪ್ರಯಾಣ’ಕ್ಕೆ ಈಗ ತೆರೆ ಬಿದ್ದಿದೆ. ಸಿಬ್ಬಂದಿಗಳ ಮುಷ್ಕರದಿಂದಾಗಿ ಸ್ಥಗಿತಗೊಂಡಿದ್ದ ಗಣೇಬೈಲ್ ಟೋಲ್ ಸಂಗ್ರಹವು ಶನಿವಾರ ಸಂಜೆಯಿಂದ ಮತ್ತೆ ಆರಂಭವಾಗಿದೆ.

ಏನಿದು ಪ್ರಕರಣ?

​ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಟೋಲ್ ನಾಕಾದ ಸುಮಾರು 25 ಸಿಬ್ಬಂದಿಗಳು ಮಾರ್ಚ್ 14 ರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಟೋಲ್ ಬ್ಯಾರಿಯರ್‌ಗಳನ್ನು ಮುಕ್ತಗೊಳಿಸಿದ್ದರು. ಇದರಿಂದಾಗಿ ಖಾನಾಪುರ, ಬೆಳಗಾವಿ ಮತ್ತು ಗೋವಾ ನಡುವೆ ಸಂಚರಿಸುವ ಸಾವಿರಾರು ವಾಹನಗಳು ಒಂದು ರೂಪಾಯಿ ಹಣ ನೀಡದೆ ಸುಗಮವಾಗಿ ಸಂಚರಿಸುತ್ತಿದ್ದವು. ಆದರೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತಿತ್ತು.

NHAI ನಿಂದ ಹೈಟೆಕ್ ಕ್ರಮ

​ಬೆಳೆಯುತ್ತಿರುವ ಆದಾಯದ ನಷ್ಟವನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಶನಿವಾರ ಸಂಜೆಯಿಂದ ಹೊಸ ವ್ಯವಸ್ಥೆಯೊಂದಿಗೆ ಟೋಲ್ ಸಂಗ್ರಹವನ್ನು ಪುನರಾರಂಭಿಸಿದೆ.

  • ಸ್ವಯಂಚಾಲಿತ ವ್ಯವಸ್ಥೆ: ಈಗ ಟೋಲ್ ಸಂಗ್ರಹವನ್ನು ಸಂಪೂರ್ಣವಾಗಿ ‘ಫಾಸ್ಟ್‌ಟ್ಯಾಗ್’ (FASTag) ಮೂಲಕ ಸ್ವಯಂಚಾಲಿತವಾಗಿ ಮಾಡಲಾಗುತ್ತಿದೆ.
  • ಹೊಸ ಸಿಬ್ಬಂದಿ ನೇಮಕ: ಸದ್ಯಕ್ಕೆ ಬೇರೆ ಏಜೆನ್ಸಿಯ ಮೂಲಕ ಹೊಸ ಸಿಬ್ಬಂದಿಗಳನ್ನು ನಿಯೋಜಿಸಿ ಕೆಲಸ ಮುಂದುವರಿಸಲಾಗಿದೆ.
  • ಗುತ್ತಿಗೆದಾರರಿಗೆ ನೋಟಿಸ್: ವೇತನದ ವಿಷಯವಾಗಿ ಗೊಂದಲ ಸೃಷ್ಟಿಸಿದ ಹಳೆಯ ಗುತ್ತಿಗೆದಾರರಿಗೆ ಆಡಳಿತ ಮಂಡಳಿಯು ನೋಟಿಸ್ ಜಾರಿ ಮಾಡಿದೆ.

ಪ್ರಸ್ತುತ ಟೋಲ್ ಸಂಗ್ರಹವು ಸಂಪೂರ್ಣವಾಗಿ ಹೈಟೆಕ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಫಾಸ್ಟ್‌ಟ್ಯಾಗ್ ಇಲ್ಲದ ಅಥವಾ ತಾಂತ್ರಿಕ ತೊಂದರೆ ಇರುವ ವಾಹನಗಳಿಗೆ ಮಾತ್ರ ಸಿಬ್ಬಂದಿಗಳ ನೆರವು ಪಡೆಯಲಾಗುತ್ತಿದೆ.”

ಭುವನೇಶ್ ಕುಮಾರ್, ಅಧಿಕಾರಿ (NHAI)

ಸ್ಥಳೀಯ ಸಿಬ್ಬಂದಿಗಳಿಗೆ ಭರವಸೆ

​ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ಸಭೆ ನಡೆಸಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ಸಿಬ್ಬಂದಿಗಳಿಗೆ ಅಧಿಕಾರಿಗಳು ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಹೊಸ ಗುತ್ತಿಗೆದಾರರನ್ನು ನೇಮಿಸುವಾಗ ಹಳೆಯ ಸ್ಥಳೀಯ ನೌಕರರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या