खानापूरच्या माजी आमदार डॉ. अंजली निंबाळकर यांच्याकडे पुदुचेरीची अतिरिक्त जबाबदारी | ಖಾನಾಪುರ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಪುದುಚೇರಿ ಹೆಚ್ಚುವರಿ ಜವಾಬ್ದಾರಿ
खानापूरच्या माजी आमदार तथा डॉ. अंजली हेमंत निंबाळकर यांच्याकडे गोव्यापाठोपाठ आता पुदुचेरीचीही अतिरिक्त जबाबदारी सोपविण्यात आली आहे. All India Congress Committee (एआयसीसी)ने याबाबत आज प्रसारमाध्यमांना अधिकृत माहिती दिली.
तामिळनाडू आणि पुदुचेरी येथे विधानसभा निवडणुका तोंडावर आल्या असून, निवडणूक तयारी व पक्ष संघटना मजबूत करण्याच्या दृष्टीने कॉंग्रेस पक्षाने डॉ. अंजली निंबाळकर यांच्यावर पुदुचेरीची जबाबदारी सोपवली आहे. एआयसीसी सचिव म्हणून कार्यभार स्वीकारल्यानंतर पक्षाकडून त्यांच्यावर विविध राज्यांच्या जबाबदाऱ्या सोपविण्यात येत आहेत. त्यात आता पुदुचेरीची भर पडली आहे.
पक्ष संघटनेचे काम प्रामाणिकपणे व निष्ठेने करण्याचा त्यांचा ध्यास असून, त्या पूर्णवेळ संघटन बळकटीसाठी कार्यरत आहेत. सध्या त्यांच्या कार्यक्षेत्रात तीन केंद्रशासित प्रदेश आणि एका राज्याची जबाबदारी आहे. याशिवाय केरळ, उत्तराखंड आणि उत्तर प्रदेश येथील संघटन सृजनाचे कामही त्यांनी यापूर्वी सांभाळले आहे.
दरम्यान, वाढलेल्या संघटनात्मक जबाबदाऱ्यांमुळे खानापूरकडे काही प्रमाणात दुर्लक्ष होत असल्याची चर्चा काही कार्यकर्त्यांतून व्यक्त होत असली तरी चिंता करण्याचे कारण नसल्याचे स्थानिक पदाधिकाऱ्यांनी स्पष्ट केले आहे. लवकरच त्या खानापूरमध्येही अधिक सक्रिय होतील, असा विश्वास व्यक्त करण्यात येत आहे.
झेडपी, टीपी व पंचायत निवडणुका डॉ. अंजली निंबाळकर यांच्या नेतृत्वाखाली तालुक्यात जोरदारपणे लढविल्या जातील, याबाबत कार्यकर्त्यांमध्ये आत्मविश्वास आहे. येणाऱ्या निवडणुकांच्या पार्श्वभूमीवर कार्यकर्त्यांनी कामास लागण्याच्या सूचनाही त्यांनी दिल्या आहेत.
नवीन जबाबदारी मिळाल्याबद्दल खानापूर तालुका ब्लॉक कॉंग्रेसतर्फे डॉ. अंजली निंबाळकर यांचे अभिनंदन करण्यात आले.
ಖಾನಾಪುರ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಪುದುಚೇರಿ ಹೆಚ್ಚುವರಿ ಜವಾಬ್ದಾರಿ
ಖಾನಾಪುರದ ಮಾಜಿ ಶಾಸಕಿ ಹಾಗೂ ಡಾ. ಅಂಜಲಿ ಹೆಮಂತ ನಿಂಬಾಳ್ಕರ್ ಅವರಿಗೆ ಗೋವಾದ ನಂತರ ಇದೀಗ ಪುದುಚೇರಿ ರಾಜ್ಯದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. All India Congress Committee (ಎಐಸಿಸಿ) ಈ ಕುರಿತು ಇಂದು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದೆ.
ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪಕ್ಷ ಸಂಘಟನೆ ಬಲಪಡಿಸುವ ಹಾಗೂ ಚುನಾವಣಾ ಸಿದ್ಧತೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಪುದುಚೇರಿ ಜವಾಬ್ದಾರಿಯನ್ನು ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ವಹಿಸಿದೆ. ಎಐಸಿಸಿ ಕಾರ್ಯದರ್ಶಿಯಾಗಿರುವುದರಿಂದ ಇಂದಿನವರೆಗೆ ವಿವಿಧ ರಾಜ್ಯಗಳ ಜವಾಬ್ದಾರಿಗಳನ್ನು ಅವರಿಗೆ ಹಂತ ಹಂತವಾಗಿ ನೀಡಲಾಗುತ್ತಿದ್ದು, ಇದೀಗ ಪುದುಚೇರಿ ಕೂಡ ಸೇರ್ಪಡೆಯಾಗಿದೆ.
ಪಕ್ಷ ಸಂಘಟನೆ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಧ್ಯೇಯವನ್ನು ಹೊಂದಿರುವ ಡಾ. ಅಂಜಲಿ ನಿಂಬಾಳ್ಕರ್ ಸಂಪೂರ್ಣವಾಗಿ ಸಂಘಟನೆ ಬಲಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಕಾರ್ಯವ್ಯಾಪ್ತಿ ಮೂರು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಒಂದು ರಾಜ್ಯವನ್ನು ಒಳಗೊಂಡಿದೆ. ಇದರ ಜೊತೆಗೆ ಕೇರಳ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಲ್ಲಿ ಸಂಘಟನೆ ಸೃಜನ ಕಾರ್ಯವನ್ನೂ ಅವರು ನಿರ್ವಹಿಸಿರುವುದು ಗಮನಾರ್ಹವಾಗಿದೆ.
ಈ ನಡುವೆ ಸಂಘಟನೆ ಕಾರ್ಯದ ಒತ್ತಡದಿಂದ ಖಾನಾಪುರ ಕ್ಷೇತ್ರದ ಕಡೆ ಸ್ವಲ್ಪ ಗಮನ ಕಡಿಮೆಯಾಗಿದೆ ಎಂಬ ಮಾತು ಕೆಲ ಕಾರ್ಯಕರ್ತರಿಂದ ಕೇಳಿಬರುತ್ತಿದ್ದರೂ, ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ಶೀಘ್ರದಲ್ಲೇ ಡಾ. ಅಂಜಲಿ ನಿಂಬಾಳ್ಕರ್ ಖಾನಾಪುರದಲ್ಲೂ ಹೆಚ್ಚು ಚುರುಕಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಖಾನಾಪುರ ತಾಲೂಕಿನಲ್ಲಿ ಶಕ್ತಿಯಾಗಿ ಎದುರಿಸಲಾಗುವುದು ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರು ತಕ್ಷಣದಿಂದಲೇ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಡಾ. ಅಂಜಲಿ ನಿಂಬಾಳ್ಕರ್ ಸೂಚನೆ ನೀಡಿದ್ದಾರೆ.
