खानापूर येथील नव्या बसस्थानकासमोरील थकबाकीदार भाडेकरूंना नोटीस | ಖಾನಾಪುರ ಹೊಸ ಬಸ್ ನಿಲ್ದಾಣದ ಎದುರಿನ ಬಾಡಿಗೆ ಬಾಕಿದಾರರಿಗೆ ನೋಟಿಸ್
खानापूर: शहरातील नव्या बसस्थानकासमोर असलेल्या नगरपंचायतीच्या वाणिज्य गाळ्यांचे भाडे दीर्घकाळापासून थकवणाऱ्या भाडेकरूंना खानापूर तहसीलदार दुंडप्पा कोमार व नगरपंचायतीचे मुख्याधिकारी संतोष कुरबेट यांनी नोटिसा बजावल्या आहेत.
सदर कारवाई नगरपंचायतीच्या उत्पन्नात होणाऱ्या नुकसानीच्या पार्श्वभूमीवर करण्यात आली असून, थकित भाडे तात्काळ भरावे, अन्यथा पुढील कायदेशीर कारवाई करण्यात येईल, असा इशारा नोटिसांद्वारे देण्यात आला आहे.
ಖಾನಾಪುರ ಹೊಸ ಬಸ್ ನಿಲ್ದಾಣದ ಎದುರಿನ ಬಾಡಿಗೆ ಬಾಕಿದಾರರಿಗೆ ನೋಟಿಸ್
ಖಾನಾಪುರ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಪಟ್ಟಣ ಪಂಚಾಯತಿಯ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ದೀರ್ಘಕಾಲದಿಂದ ಪಾವತಿಸದೇ ಇರುವ ಬಾಡಿಗೆದಾರರಿಗೆ ಖಾನಾಪುರ ತಹಶಿಲ್ದಾರ ದುಂಡಪ್ಪ ಕೋಮಾರ್ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಸಂತೋಷ ಕುರಬೇಟ್ ಅವರು ನೋಟಿಸ್ ಜಾರಿಗೊಳಿಸಿದ್ದಾರೆ.
ಪಟ್ಟಣ ಪಂಚಾಯತಿಯ ಆದಾಯಕ್ಕೆ ಉಂಟಾಗುತ್ತಿರುವ ನಷ್ಟದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಬಾಕಿ ಬಾಡಿಗೆಯನ್ನು ತಕ್ಷಣ ಪಾವತಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. ನಿಗದಿತ ಅವಧಿಯೊಳಗೆ ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

