खानापूर

26 रोजी ‘खानापूर बंद’ची हाक; शहरातील काँक्रीटीकरणाच्या संथ कामाविरोधात व्यापाऱ्यांचा निर्णय | ೨೬ರಂದು ‘ಖಾನಾಪುರ ಬಂದ್’ ಕರೆ; ರಸ್ತೆ ಕಾಂಕ್ರೀಟೀಕರಣದ ನಿಧಾನಗತಿಗೆ ವ್ಯಾಪಾರಿಗಳ ಆಕ್ರೋಶ

खानापूर: खानापूर शहरांतर्गत राजा टाईल्स ते करंबळ क्रॉसपर्यंत सुरू असलेल्या रस्त्याच्या काँक्रीटीकरणाच्या कामाची गती अत्यंत संथ असल्याने शहरातील व्यापार-उद्योगावर गंभीर परिणाम झाला आहे. याच्या निषेधार्थ शहरातील सर्व व्यापारी असोसिएशनने गुरुवार, दि. २६ रोजी ‘खानापूर बंद’ची हाक दिली असून तहसीलदार तसेच खानापूर पोलीस निरीक्षक यांना निवेदन देण्यात आले आहे.

शहरातील महामार्गाच्या काँक्रीटीकरणाचे काम ऑक्टोबर महिन्यापासून सुरू करण्यात आले आहे. मात्र कंत्राटदार आणि सार्वजनिक बांधकाम विभागाकडून कोणतेही ठोस नियोजन न करता संपूर्ण रस्ता वाहतुकीसाठी बंद करण्यात आल्याचा आरोप व्यापाऱ्यांनी केला आहे. परिणामी शहराची दोन्ही प्रवेशद्वारे बंद झाली असून, नागरिक व व्यापाऱ्यांना मोठ्या अडचणींना सामोरे जावे लागत आहे.

गेल्या पाच महिन्यांत चार कि.मी. रस्त्यापैकी केवळ दोन कि.मी. कामही पूर्ण झालेले नाही. व्यापाऱ्यांनी वारंवार एक बाजूने वाहतूक सुरू ठेवून काम करण्याची मागणी केली होती; मात्र त्याकडे दुर्लक्ष झाल्याचे सांगण्यात आले. त्यामुळे व्यापार पूर्णपणे कोलमडल्याची भावना व्यापाऱ्यांनी व्यक्त केली आहे.

दरम्यान, मासळी मार्केट परिसरात सीडी (क्रॉस ड्रेनेज) उभारणीच्या कामालाही शेतकऱ्यांनी विरोध दर्शविला होता. या विरोधाकडे दुर्लक्ष करून काम सुरू केल्याने शेतकऱ्यांनी न्यायालयात दाद मागितली आहे. तरीही सार्वजनिक बांधकाम विभागाकडून कोणतीही ठोस कारवाई अथवा पाठपुरावा होत नसल्याने संताप व्यक्त केला जात आहे.

सध्या शहरातील मुख्य रस्त्यावर धुळीचे साम्राज्य पसरले असून आरोग्याच्या समस्या निर्माण होत आहेत. नागरिक, प्रवासी आणि व्यापाऱ्यांना नाहक त्रास सहन करावा लागत असल्याने संताप वाढत आहे.

या पार्श्वभूमीवर गुरुवार, दि. २६ रोजी संपूर्ण खानापूर बंद ठेवण्यात येणार असून तहसीलदार कार्यालयासमोर ठिय्या आंदोलन करण्यात येणार असल्याची माहिती व्यापारी संघटनेचे प्रमुख महांतेश राऊत यांनी दिली.

यावेळी व्यापारी असोसिएशनचे पदाधिकारी बसवराज होंदडगट्टी, राजेंद्र पुजेरी, प्रदीप शेट्टी, शिवशंकर कट्टीमनी, रमेश जैन, आदर्श राऊत, आदित्य कलाल, मोहम्मद हनिफ नंदगडी, शिवा सुळकर, विशाल सावंत, अनिकेत निलजकर, लोकेश कलबुर्गी यांच्यासह व्यापारी व नागरिक मोठ्या संख्येने उपस्थित होते.

೨೬ರಂದು ‘ಖಾನಾಪುರ ಬಂದ್’ ಕರೆ; ರಸ್ತೆ ಕಾಂಕ್ರೀಟೀಕರಣದ ನಿಧಾನಗತಿಗೆ ವ್ಯಾಪಾರಿಗಳ ಆಕ್ರೋಶ

ಪ್ರತಿನಿಧಿ | ಖಾನಾಪುರ

ಖಾನಾಪುರ ನಗರದೊಳಗಿನ ರಾಜಾ ಟೈಲ್ಸ್‌ನಿಂದ ಕರಂಬಳ ಕ್ರಾಸ್‌ವರೆಗೆ ನಡೆಯುತ್ತಿರುವ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ನಗರದಲ್ಲಿನ ವ್ಯಾಪಾರ-ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆ ನಗರದಲ್ಲಿನ ಎಲ್ಲಾ ವ್ಯಾಪಾರಿ ಅಸೋಸಿಯೇಶನ್ ವತಿಯಿಂದ ಗುರುವಾರ, ದಿ. ೨೬ರಂದು ‘ಖಾನಾಪುರ ಬಂದ್’ಕ್ಕೆ ಕರೆ ನೀಡಲಾಗಿದೆ. ಈ ಕುರಿತು ತಹಶೀಲ್ದಾರ್ ಹಾಗೂ ಖಾನಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಮನವಿ ಸಲ್ಲಿಸಲಾಗಿದೆ.

ನಗರದೊಳಗಿನ ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟೀಕರಣ ಕಾಮಗಾರಿ ಅಕ್ಟೋಬರ್ ತಿಂಗಳಿಂದ ಆರಂಭಗೊಂಡಿದೆ. ಆದರೆ ಗುತ್ತಿಗೆದಾರರು ಹಾಗೂ ಸಾರ್ವಜನಿಕ ಕಾಮಗಾರಿಗಳ ಇಲಾಖೆಯಿಂದ ಸಮರ್ಪಕ ಯೋಜನೆ ರೂಪಿಸದೆ, ಸಂಪೂರ್ಣ ರಸ್ತೆಯನ್ನು ಸಂಚಾರಕ್ಕೆ ಬಂದ್ ಮಾಡಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಇದರಿಂದ ನಗರದ ಎರಡು ಪ್ರವೇಶ ದ್ವಾರಗಳು ಸಂಪೂರ್ಣವಾಗಿ ಬಂದ್ ಆಗಿ, ನಾಗರಿಕರು ಮತ್ತು ವ್ಯಾಪಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.

ಕಳೆದ ಐದು ತಿಂಗಳಿನಲ್ಲಿ ನಾಲ್ಕು ಕಿ.ಮೀ. ರಸ್ತೆ ಕಾಮಗಾರಿಯಲ್ಲಿ ಕೇವಲ ಎರಡು ಕಿ.ಮೀ. ಮಾತ್ರ ಪೂರ್ಣಗೊಂಡಿದೆ. ಒಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಿ ಕಾಮಗಾರಿ ನಡೆಸುವಂತೆ ವ್ಯಾಪಾರಿಗಳು ಹಲವಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ತಿಳಿಸಲಾಗಿದೆ. ಇದರಿಂದ ವ್ಯಾಪಾರ ಸಂಪೂರ್ಣ ಕುಸಿದಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಮೀನು ಮಾರುಕಟ್ಟೆ ಸಮೀಪ ಸಿಡಿ (ಕ್ರಾಸ್ ಡ್ರೇನೇಜ್) ನಿರ್ಮಾಣಕ್ಕೂ ರೈತರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕಾಮಗಾರಿ ಮುಂದುವರಿಸಲಾಗಿದ್ದು, ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವಿಷಯದಲ್ಲೂ ಸಾರ್ವಜನಿಕ ಕಾಮಗಾರಿಗಳ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ಷೇಪಿಸಲಾಗಿದೆ.

ಇದೇ ವೇಳೆ, ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ನಗರದಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿ, ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತಿವೆ. ನಾಗರಿಕರು, ಪ್ರಯಾಣಿಕರು ಹಾಗೂ ವ್ಯಾಪಾರಿಗಳು ಅನಾವಶ್ಯಕ ತೊಂದರೆ ಅನುಭವಿಸುತ್ತಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟು ಗುರುವಾರ, ದಿ. ೨೬ರಂದು ಖಾನಾಪುರ ಬಂದ್ ಆಚರಿಸಲಾಗುವುದು. ಜೊತೆಗೆ ತಹಶೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ವ್ಯಾಪಾರಿ ಸಂಘಟನೆಯ ಅಧ್ಯಕ್ಷ ಮಹಾಂತೇಶ ರಾವತ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವ್ಯಾಪಾರಿ ಅಸೋಸಿಯೇಶನ್‌ನ ಪದಾಧಿಕಾರಿಗಳಾದ ಬಸವರಾಜ್ ಹೊಂದಡಗಟ್ಟಿ, ರಾಜೇಂದ್ರ ಪುಜೇರಿ, ಪ್ರದೀಪ್ ಶೆಟ್ಟಿ, ಶಿವಶಂಕರ ಕಟ್ಟಿಮನಿ, ರಮೇಶ್ ಜೈನ್, ಆದರ್ಶ ರಾವತ್, ಆದಿತ್ಯ ಕಲಾಲ್, ಮೊಹಮ್ಮದ್ ಹನೀಫ್ ನಂದಗಡಿ, ಶಿವ ಸುಳಕರ, ವಿಶಾಲ್ ಸಾವಂತ್, ಅನಿಕೇತ್ ನಿಲಜ್ಕರ್, ಲೋಕೇಶ್ ಕಲಬುರ್ಗಿ ಸೇರಿದಂತೆ ಅನೇಕ ವ್ಯಾಪಾರಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या