खानापूर

कापोली हादरले! चारित्र्याच्या संशयावरून पतीने केली पत्नीची  हत्या; आरोपी पती पोलिसांच्या ताब्यात | ಖಾನಾಪುರ: ಪತ್ನಿಯ ನಡತೆಯ ಮೇಲೆ ಶಂಕೆ; ಲಾಠಿ, ಲಟ್ಟಣಿಗೆಯಿಂದ ಹೊಡೆದು ಪತ್ನಿಯನ್ನ ಕೊಲೆಗೈದ ಪಾಪಿ ಪತಿ

नंदगड (प्रतिनिधी): खानापूर तालुक्यातील कापोली येथे संशयाचे भूत डोक्यात शिरल्याने एका पतीने आपल्या पत्नीची लाटणे आणि काठीने अमानुष मारहाण करून हत्या केल्याची खळबळजनक घटना उघडकीस आली आहे. श्रीमती किरण अविनाश बाळेकुंद्री (वय ३०) असे मृत महिलेचे नाव असून, याप्रकरणी नंदगड पोलिसांनी आरोपी पती अविनाश मारुती बाळेकुंद्री याला बेड्या ठोकल्या आहेत. मंगळवारी पहाटेच्या सुमारास कापोली येथील राहत्या घरी ही घटना घडली.
मिळालेल्या माहितीनुसार, मृत किरण बाळेकुंद्री या कापोली येथे स्वतःच्या मालकीचे किराणा दुकान चालवत होत्या. दुकानातील कामामुळे किंवा व्यवसायानिमित्त त्या ग्राहकांशी मोबाईलवर संवाद साधत असत. मात्र, पत्नीचे कोणाशी तरी अनैतिक संबंध आहेत, असा संशय आरोपी पती अविनाश याने मनात धरला होता. याच संशयावरून त्यांच्यात वारंवार खटके उडत असत. २० जानेवारी रोजी पहाटे ५:३० च्या सुमारास याच कारणावरून पुन्हा वाद झाला आणि रागाच्या भरात अविनाशने पत्नीला अमानुष मारहाण करण्यास सुरुवात केली.
आरोपीने घरात असलेल्या लाटण्याने आणि काठीने किरण यांच्या डोक्यावर, चेहऱ्यावर आणि शरीराच्या अन्य भागांवर वर्मी घाव घातले. ही मारहाण इतकी भीषण होती की, किरण बाळेकुंद्री यांचा जागीच मृत्यू झाला. घटनेनंतर दुपारी १२:४५ वाजता या प्रकरणाची नोंद नंदगड पोलीस ठाण्यात करण्यात आली. पोलीस निरीक्षक आर. एल. धर्मट्टी यांनी पथकासह घटनास्थळी भेट देऊन पंचनामा केला आणि आरोपीला तात्काळ ताब्यात घेतले. या अमानुष कृत्यामुळे कापोली परिसरात तीव्र संताप व्यक्त होत असून, आरोपीला कठोर शिक्षा देण्याची मागणी स्थानिक नागरिकांकडून केली जात आहे. पोलीस निरीक्षक धर्मट्टी यांच्या मार्गदर्शनाखाली पोलीस या प्रकरणाचा पुढील सखोल तपास करत आहेत.

ಖಾನಾಪುರ: ಪತ್ನಿಯ ನಡತೆಯ ಮೇಲೆ ಶಂಕೆ; ಲಾಠಿ, ಲಟ್ಟಣಿಗೆಯಿಂದ ಹೊಡೆದು ಪತ್ನಿಯನ್ನ ಕೊಲೆಗೈದ ಪಾಪಿ ಪತಿ

ನಂದಗಡ (ವರದಿ):

ಹೆಂಡತಿಯ ನಡತೆಯ ಮೇಲೆ ಸಂಶಯಗೊಂಡು ಪತಿಯೊಬ್ಬ ಆಕೆಯನ್ನು ಅಮಾನವೀಯವಾಗಿ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ಕಿರಣ್ ಅವಿನಾಶ್ ಬಾಳೇಕುಂದ್ರಿ (೩೦) ಕೊಲೆಯಾದ ದುರ್ದೈವಿ ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿ ಅವಿನಾಶ್ ಮಾರುತಿ ಬಾಳೇಕುಂದ್ರಿ ಎಂಬಾತನನ್ನು ನಂದಗಡ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಮೃತ ಕಿರಣ್ ಅವರು ಕಾಪೋಲಿ ಗ್ರಾಮದಲ್ಲಿ ಸ್ವಂತ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು. ಅಂಗಡಿಯ ವ್ಯವಹಾರದ ನಿಮಿತ್ತ ಅವರು ಗ್ರಾಹಕರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಆದರೆ, ಇದನ್ನು ತಪ್ಪಾಗಿ ಭಾವಿಸಿದ ಪತಿ ಅವಿನಾಶ್, ಕಿರಣ್ ಅವರ ನಡತೆಯ ಮೇಲೆ ಸಂಶಯ ಪಡಲು ಶುರುಮಾಡಿದ್ದ. “ನೀನು ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದೀಯಾ” ಎಂದು ಆರೋಪಿಸಿ ಪದೇ ಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ.

​ಜನವರಿ ೨೦ರಂದು ಮುಂಜಾನೆ ಸುಮಾರು ೫:೩೦ರ ವೇಳೆಗೆ ಮನೆಯಲ್ಲಿ ಇದೇ ವಿಷಯವಾಗಿ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಅವಿನಾಶ್, ಮನೆಯಲ್ಲಿದ್ದ ಲಟ್ಟಣಿಗೆ ಮತ್ತು ಕಟ್ಟಿಗೆಯಿಂದ ಕಿರಣ್ ಅವರ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ಕಿರಣ್ ಅವರ ತಲೆ, ಮುಖ ಮತ್ತು ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಪರಿಣಾಮ, ಅವರು ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೊಲೀಸ್ ತನಿಖೆ:

ಘಟನೆ ನಡೆದ ನಂತರ ಮಧ್ಯಾಹ್ನ ೧೨:೪೫ಕ್ಕೆ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಪತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ೨೦೨೩ರ ಕಲಂ ೧೦೩(೧) ಮತ್ತು (೨) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

​ನಂದಗಡ ಪೊಲೀಸ್ ನಿರೀಕ್ಷಕರಾದ ಆರ್. ಎಲ್. ಧರ್ಮಟ್ಟಿ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡೆದ ಈ ಕೊಲೆ ಪ್ರಕರಣ ಕಾಪೋಲಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶವನ್ನು ಮೂಡಿಸಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या