15 लाखांचे आमिष दाखवून स्थलांतराचा प्रयत्न; कणकुंबीत उद्या मेळावा | ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಆಮಿಷ ನೀಡಿ ಸ್ಥಳಾಂತರ ಯತ್ನ; ಕಣಕುಂಭಿಯಲ್ಲಿ ನಾಳೆ ಸಾರ್ವಜನಿಕ ಸಭೆ
खानापूर: प्रती कुटुंब १५ लाख रुपयांचे आमिष दाखवून भीमगड अभयारण्य व खानापूर तालुक्यातील कणकुंबी परिसरातील दुर्गम गावांचे स्थलांतर करण्याचे वनखात्याचे प्रयत्न सुरू असल्याचा आरोप ग्रामस्थांनी केला आहे. या प्रस्तावित स्थलांतराला विरोध करण्यासाठी आणि पुढील आंदोलनाची दिशा ठरवण्यासाठी उद्या शुक्रवार, दि. १९ रोजी सकाळी ११ वाजता माउली कणकुंबी मंदिर येथे मेळाव्याचे आयोजन करण्यात आले आहे.
अरण्य हितरक्षण समिती व स्थानिक नागरिकांच्या वतीने आयोजित या मेळाव्यास कणकुंबी व आसपासच्या गावांतील ग्रामस्थांनी मोठ्या संख्येने उपस्थित राहावे, असे आवाहन करण्यात आले आहे. कणकुंबी, हुळंद, चिगुळे, चिखले, माण, सडा, चोर्ला, चापोली, कापोली आदी गावांचे स्थलांतर प्रस्तावित असल्याचे सांगण्यात आले.
ग्रामस्थांच्या मते, स्थलांतर झाल्यास या भागातील धार्मिक परंपरा व ऐतिहासिक वारसा नष्ट होण्याची भीती आहे. तसेच वीज, पाणी, आरोग्य सेवा, शाळा व रस्ते यांसारख्या मूलभूत सुविधांबाबत अडथळे निर्माण केले जात असल्याचा आरोपही करण्यात आला आहे. या पार्श्वभूमीवर, स्थलांतराविरोधात एकत्र येण्यासाठी हा मेळावा आयोजित करण्यात आला आहे.
ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಆಮಿಷ ನೀಡಿ ಸ್ಥಳಾಂತರ ಯತ್ನ; ಕಣಕುಂಭಿಯಲ್ಲಿ ನಾಳೆ ಸಾರ್ವಜನಿಕ ಸಭೆ
ಖಾನಾಪುರ: ಭೀಮಗಡ ಅಭಯಾರಣ್ಯ ಹಾಗೂ ಖಾನಾಪುರ ತಾಲ್ಲೂಕಿನ ಕಣಕುಂಭಿ ಪ್ರದೇಶದ ದೂರದ ಗ್ರಾಮಗಳನ್ನು ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಆಮಿಷ ನೀಡಿ ಸ್ಥಳಾಂತರಿಸಲು ಅರಣ್ಯ ಇಲಾಖೆಯ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಪ್ರಸ್ತಾವಿತ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೂ, ಮುಂದಿನ ಹೋರಾಟದ ದಿಕ್ಕು ನಿರ್ಧರಿಸುವುದಕ್ಕೂ ನಾಳೆ ಶುಕ್ರವಾರ, ದಿನಾಂಕ 19ರಂದು ಬೆಳಿಗ್ಗೆ 11 ಗಂಟೆಗೆ ಕಣಕುಂಭಿಯಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.
ಅರಣ್ಯ ಹಿತರಕ್ಷಣ ಸಮಿತಿ ಹಾಗೂ ಸ್ಥಳೀಯ ನಾಗರಿಕರ ವತಿಯಿಂದ ನಡೆಯುವ ಈ ಸಭೆಗೆ ಕಣಕುಂಭಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ. ಕಣಕುಂಭಿ, ಹುಳಂದ, ಚಿಗುಳೆ, ಚಿಖಲೆ, ಮಾಣ, ಸಡಾ, ಚೋರ್ಲಾ, ಚಾಪೋಲಿ, ಕಾಪೋಲಿ ಸೇರಿದಂತೆ ಇತರ ಗ್ರಾಮಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಗ್ರಾಮಸ್ಥರ ಪ್ರಕಾರ, ಈ ಗ್ರಾಮಗಳು ಸ್ಥಳಾಂತರವಾದರೆ ಪ್ರದೇಶದ ಧಾರ್ಮಿಕ ಪರಂಪರೆ ಹಾಗೂ ಸ್ಥಳೀಯ ಇತಿಹಾಸಕ್ಕೆ ಧಕ್ಕೆ ಉಂಟಾಗಲಿದೆ. ಜೊತೆಗೆ ವಿದ್ಯುತ್, ನೀರು, ಆರೋಗ್ಯ ಸೇವೆ, ಶಾಲೆ ಹಾಗೂ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಅಡೆತಡೆ ಉಂಟುಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ, ಸ್ಥಳಾಂತರದ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಈ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.
