खानापूर

मी सुद्धा मुख्यमंत्री पदाच्या शर्यतीत! सतीश जारकीहोळींनी व्यक्त केली इच्छा |  ಸಿಎಂ ಕುರ್ಚಿಗೆ ಹತ್ತು ಮಂದಿ ಕಾಂಪಿಟೀಟರ್ಸ್; ಜಾರಕಿಹೊಳಿ ಸ್ಫೋಟಕ ಹೇಳಿಕೆ.

शिमोगा: कर्नाटकच्या राजकारणात मुख्यमंत्री बदलाच्या चर्चेने पुन्हा एकदा जोर धरला आहे. राज्याचे सार्वजनिक बांधकाम मंत्री सतीश जारकीहोळी यांनी आपणही मुख्यमंत्रीपदाच्या शर्यतीत असल्याचे उघडपणे कबूल केल्यामुळे राजकीय वर्तुळात मोठी खळबळ उडाली आहे. शिमोगा येथे प्रसारमाध्यमांशी बोलताना त्यांनी हे खळबळजनक विधान केले.

मुख्यमंत्र्यांच्या खुर्चीसाठी १० जण रांगेत!

सतीश जारकीहोळी यांनी स्पष्ट केले की, मुख्यमंत्री होण्याची इच्छा असणे गैर नाही. ते म्हणाले, “मुख्यमंत्रीपदाच्या शर्यतीत मी सुद्धा आहे आणि मी माझ्या संधीची वाट पाहत आहे. केवळ मीच नाही, तर उपमुख्यमंत्री डी.के. शिवकुमार यांच्यासह पक्षातील सुमारे १० दिग्गज नेते या पदासाठी इच्छुक असून ते रांगेत आहेत.”

संधी मिळेपर्यंत संयम हवा

राजकारणात प्रत्येकाला महत्त्वाकांक्षा असते, असे नमूद करत जारकीहोळी पुढे म्हणाले की, आकांक्षी नेत्यांची संख्या मोठी असली तरी लगेच मुख्यमंत्री बदलले जातील असे नाही. योग्य संधी येईपर्यंत संयमाने वाट पाहणे अनिवार्य असते. सध्या तरी मुख्यमंत्री बदलण्याचा कोणताही प्रश्न नाही, असे सांगून त्यांनी प्रकरणावर पडदा टाकण्याचा प्रयत्न केला.


‘ನಾನೂ ಕೂಡ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ’; ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ

ಶಿವಮೊಗ್ಗ:

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಾವೂ ಕೂಡ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅವರು ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಿಎಂ ಕುರ್ಚಿಗಾಗಿ ಹತ್ತು ಮಂದಿ ಸಾಲಿನಲ್ಲಿ!

ಮುಖ್ಯಮಂತ್ರಿಯಾಗುವ ಆಸೆ ಪಡುವುದರಲ್ಲಿ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ ಸತೀಶ್ ಜಾರಕಿಹೊಳಿ, “ಸಿಎಂ ರೇಸ್‌ನಲ್ಲಿ ನಾನೂ ಇದ್ದೇನೆ ಮತ್ತು ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಕೇವಲ ನಾನೊಬ್ಬನೇ ಅಲ್ಲ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಸುಮಾರು ೧೦ ಹಿರಿಯ ನಾಯಕರು ಈ ಹುದ್ದೆಯ ಆಕಾಂಕ್ಷಿಗಳಾಗಿದ್ದು, ಸಾಲಿನಲ್ಲಿ ನಿಂತಿದ್ದಾರೆ,” ಎಂದು ಹೇಳಿದರು.

ಅವಕಾಶ ಸಿಗುವವರೆಗೆ ಸಂಯಮ ಅಗತ್ಯ

ರಾಜಕಾರಣದಲ್ಲಿ ಪ್ರತಿಯೊಬ್ಬರಿಗೂ ಮಹತ್ವಾಕಾಂಕ್ಷೆ ಇರುತ್ತದೆ ಎಂದು ಹೇಳಿದ ಜಾರಕಿಹೊಳಿ, ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದ್ದರೂ ತಕ್ಷಣವೇ ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂದರ್ಥವಲ್ಲ. ರಾಜಕೀಯದಲ್ಲಿ ಅವಕಾಶ ಸಿಗುವವರೆಗೆ ತಾಳ್ಮೆಯಿಂದ ಕಾಯುವುದು ಅನಿವಾರ್ಯ ಎಂದು ಅವರು ತಿಳಿಸಿದರು. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ ಎನ್ನುವ ಮೂಲಕ ಅವರು ಚರ್ಚೆಗೆ ತೆರೆ ಎಳೆಯಲು ಪ್ರಯತ್ನಿಸಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या