एमएलसी चन्नराज हट्टीहोळी पॅनलचा १५ जागांवर अभूतपूर्व विजय
बेळगाव (एम.के. हुबळी) प्रतिनिधी:
एम.के. हुबळी येथील मलप्रभा सहकारी साखर कारखान्याच्या संचालक मंडळाच्या १५ जागांसाठी झालेल्या निवडणुकीत, महिला आणि बालकल्याण मंत्री लक्ष्मी हेब्बाळकर यांचे बंधू, आमदार चन्नराज हट्टीहोळी यांच्या नेतृत्वाखालील ‘मलप्रभा सहकारी साखर कारखाना शेतकरी पुन:चेतन पॅनल’ ने ऐतिहासिक विजय मिळवला आहे. या पॅनलने सर्वच्या सर्व १५ संचालक जागा जिंकून कारखान्यावर सत्ता स्थापन केली आहे.
या निवडणुकीत एका मंत्र्यासह (लक्ष्मी हेब्बाळकर) तीन आमदारांनी (चन्नराज हट्टीहोळी, बाबासाहेब पाटील, विठ्ठल हलगेकर) पॅनलचे नेतृत्व केल्याने हा निकाल अत्यंत प्रतिष्ठेचा ठरला होता. चन्नराज हट्टीहोळी यांच्या नेतृत्वाखालील पुन:चेतन पॅनलने कारखान्याचे विद्यमान अध्यक्ष नासिर बागवान यांच्या ‘शेतकरी आणि कामगार कल्याण पॅनल’ आणि रयत संघाचे नेते बसवराज मोकाशी यांच्या ‘ऊस उत्पादक आणि कारखाना विकास पॅनल’ चा पराभव केला.
मतदान तपशील: रविवारी (तारीख दिलेली नाही) झालेल्या मतदानादरम्यान, १६,९०३ मतदारांपैकी ८,३५९ शेतकऱ्यांनी (४९.४५%) शांततेत आपला हक्क बजावला. रात्री उशिरापर्यंत मतमोजणी सुरू होती.
विजयी उमेदवारांना मिळालेली मते (पुन:चेतन पॅनल):
मतदारसंघ | विजयी उमेदवार | मिळालेली मते |
सामान्य | चन्नराज बसवराज हट्टीहोळी | ४७३१ |
सामान्य | श्रीकांत नागप्पा इटगी | ४४२४ |
सामान्य | शिवनगौडा दोड्डगौडा पाटील | ४३४९ |
सामान्य | शंकर परप्पा किल्लेदार | ४२४५ |
सामान्य | श्रीशैल बसप्पा तुरमरी | ४१८३ |
सामान्य | शिवापुत्तप्पा बसवन्नेप्पा मरडी | ३८३८ |
सामान्य | रघु चंद्रशेखर पाटील | ३८२९ |
सामान्य | रामणागौडा सनगौडा पाटील | ३७३५ |
सामान्य | सुरेश यल्लाप्पा हुलिकट्टी | ३६६८ |
श्रेणी-अ | फक्कीराप्पा फक्कीराप्पा सक्रेन्नवर | ४१४२ |
श्रेणी-ब | शंकरप्पा सदेप्पा होळी | ४५०७ |
महिला (आरक्षित) | ललिता भालचंद्र पाटील | ४०४१ |
महिला (आरक्षित) | सुनीता महांतेश लंगोटी | ३९१३ |
अनुसूचित जाती | बाळाप्पा दुरगप्पा पूजार | ३८२७ |
अनुसूचित जमाती | भरमप्पा कल्लप्पा शिगेहल्ली | ४१६१ |
ಮಲಪ್ರಭಾ ಶುಗರ್ಸ್ ಆಡಳಿತಕ್ಕೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಬಣ!
ಪುನಶ್ಚೇತನ ಪ್ಯಾನಲ್ನ ಅಭೂತಪೂರ್ವ ಜಯಭೇರಿ, 15 ಸ್ಥಾನಗಳಲ್ಲಿ ಗೆಲುವು
ಬೆಳಗಾವಿ (ಎಂ.ಕೆ.ಹುಬ್ಬಳ್ಳಿ) ವರದಿ:
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ‘ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪ್ಯಾನಲ್’ ಭರ್ಜರಿ ಜಯ ಸಾಧಿಸಿದೆ. ಸ್ಪರ್ಧಿಸಿದ್ದ ಎಲ್ಲ 15 ನಿರ್ದೇಶಕ ಸ್ಥಾನಗಳನ್ನು ಪುನಶ್ಚೇತನ ಪ್ಯಾನಲ್ ಗೆದ್ದುಕೊಂಡಿದೆ.
ಈ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು, ಏಕೆಂದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಹೋದರ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರ ನೇತೃತ್ವದಲ್ಲಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗೂ ವಿಠ್ಠಲ ಹಲಗೇಕರ್ ಅವರು ಚುನಾವಣಾ ಕಣಕ್ಕಿಳಿದಿದ್ದರು. ಹಾಲಿ ಅಧ್ಯಕ್ಷ ನಾಸೀರ್ ಬಾಗವಾನ್ ನೇತೃತ್ವದ ‘ರೈತ ಮತ್ತು ಕಾರ್ಮಿಕ ಕಲ್ಯಾಣ ಪ್ಯಾನಲ್’ ಹಾಗೂ ರಾಯತ ಸಂಘದ ಬಸವರಾಜ ಮೊಕಾಶಿ ನೇತೃತ್ವದ ‘ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಅಭಿವೃದ್ಧಿ ಪ್ಯಾನಲ್’ಗಳನ್ನು ಮಣಿಸಿ ಪುನಶ್ಚೇತನ ಪ್ಯಾನಲ್ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಮತದಾನದ ವಿವರ: ರವಿವಾರದಂದು ನಡೆದ ಮತದಾನದಲ್ಲಿ ಶೇ.49.45ರಷ್ಟು (16,903 ಮತದಾರರಲ್ಲಿ 8,359 ರೈತರು) ಮತದಾನವಾಗಿತ್ತು. ತಡರಾತ್ರಿಯವರೆಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಯಿತು.
ವಿಜೇತ ಅಭ್ಯರ್ಥಿಗಳು ಮತ್ತು ಮತಗಳು (ಪುನಶ್ಚೇತನ ಪ್ಯಾನಲ್):
ಕ್ಷೇತ್ರ | ವಿಜೇತ ಅಭ್ಯರ್ಥಿ | ಪಡೆದ ಮತಗಳು |
ಸಾಮಾನ್ಯ | ಚನ್ನರಾಜ ಬಸವರಾಜ ಹಟ್ಟಿಹೊಳಿ | 4731 |
ಸಾಮಾನ್ಯ | ಶ್ರೀಕಾಂತ ನಾಗಪ್ಪ ಇಟಗಿ | 4424 |
ಸಾಮಾನ್ಯ | ಶಿವನಗೌಡ ದೊಡಗೌಡ ಪಾಟೀಲ | 4349 |
ಸಾಮಾನ್ಯ | ಶಂಕರ ಪರಪ್ಪ ಕಿಲ್ಲೇದಾರ | 4245 |
ಸಾಮಾನ್ಯ | ಶ್ರೀಶೈಲ ಬಸಪ್ಪಾ ತುರಮರಿ | 4183 |
ಸಾಮಾನ್ಯ | ಶಿವಪುತ್ರಪ್ಪ ಬಸವಣ್ಣೆಪ್ಪ ಮರಡಿ | 3838 |
ಸಾಮಾನ್ಯ | ರಘು ಚಂದ್ರಶೇಖರ ಪಾಟೀಲ | 3829 |
ಸಾಮಾನ್ಯ | ರಾಮನಗೌಡ ಸಣಗೌಡ ಪಾಟೀಲ | 3735 |
ಸಾಮಾನ್ಯ | ಸುರೇಶ ಯಲ್ಲಪ್ಪಾ ಹುಲಿಕಟ್ಟಿ | 3668 |
ಪ್ರವರ್ಗ-ಅ | ಫಕ್ಕೀರಪ್ಪ ಫಕ್ಕೀರಪ್ಪ ಸಕ್ರೆಣ್ಣವರ | 4142 |
ಪ್ರವರ್ಗ-ಬ | ಶಂಕರೆಪ್ಪ ಸದೆಪ್ಪ ಹೊಳಿ | 4507 |
ಮಹಿಳಾ (ಮೀಸಲು) | ಲಲಿತಾ ಭಾಲಚಂದ್ರ ಪಾಟೀಲ | 4041 |
ಮಹಿಳಾ (ಮೀಸಲು) | ಸುನಿತಾ ಮಹಾಂತೇಶ ಲಂಗೋಟಿ | 3913 |
ಪರಿಶಿಷ್ಟ ಜಾತಿ | ಬಾಳಪ್ಪ ದುರಗಪ್ಪ ಪೂಜಾರ | 3827 |
ಪರಿಶಿಷ್ಟ ಪಂಗಡ | ಭರಮಪ್ಪ ಕಲ್ಲಪ್ಪ ಶಿಗೆಹಳ್ಳಿ | 4161 |