हलशीवाडीचे सुपुत्र श्री. विष्णू रामचंद्र देसाई यांना एम.डी.आर.टी. हा जागतिक पुरस्कार
खानापूर : हलशीवाडी गावचे सुपुत्र व सध्या पुण्यात वास्तव्यास असलेले श्री. विष्णू रामचंद्र देसाई यांना विमा व वित्तीय सेवांमधील जागतिक मानांकन मिळाले आहे. विमा क्षेत्रातील ऑस्कर म्हणून ओळखला जाणारा एम.डी.आर.टी. (मिलियन डॉलर राऊंड टेबल) हा सर्वोच्च पुरस्कार त्यांना प्रदान करण्यात आला.
हा सन्मान आदित्य बिर्ला सन लाईफ इन्शुरन्स कंपनी तर्फे 2024 साठी जाहीर करण्यात आला होता. कोलंबो (श्रीलंका) येथे पार पडलेल्या कार्यक्रमात कंपनीचे सीडीओ श्री. संदीपजी मिश्रा यांच्या हस्ते श्री. देसाई यांना हा पुरस्कार देण्यात आला.
या यशाबद्दल हलशीवाडी व खानापूर परिसरात आनंद व्यक्त होत असून श्री. विष्णू देसाई यांचे सर्वत्र कौतुक केले जात आहे.
ಹಲಶಿವಾಡಿ ಮೂಲದ ಶ್ರೀ ವಿಷ್ಣು ರಾಮಚಂದ್ರ ದೇಸಾಯಿ ಅವರಿಗೆ ಎಂ.ಡಿ.ಆರ್.ಟಿ. ಜಾಗತಿಕ ಪ್ರಶಸ್ತಿ
ಹಲಶಿವಾಡಿ (ತಾ. ಖಾನಾಪುರ) ಮೂಲದವರಾಗಿದ್ದು ಪ್ರಸ್ತುತ ಪುಣೆಯಲ್ಲಿ ವಾಸವಿರುವ ಶ್ರೀ ವಿಷ್ಣು ರಾಮಚಂದ್ರ ದೇಸಾಯಿ ಅವರಿಗೆ ವಿಮೆ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುವ ಗೌರವ ಎಂ.ಡಿ.ಆರ್.ಟಿ. (ಮಿಲಿಯನ್ ಡಾಲರ್ ರೌಂಡ್ ಟೇಬಲ್) ಪ್ರಶಸ್ತಿ ಲಭಿಸಿದೆ. ವಿಮಾ ಕ್ಷೇತ್ರದ ಆಸ್ಕರ್ ಎಂದೇ ಗುರುತಿಸಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅವರು ಪಡೆಯುವ ಭಾಗ್ಯ ಪಡೆದಿದ್ದಾರೆ.
ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶುರನ್ಸ್ ಕಂಪನಿ ವತಿಯಿಂದ 2024ರ ಎಂ.ಡಿ.ಆರ್.ಟಿ. ಪ್ರಶಸ್ತಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯ ಸಿಡಿಓ ಶ್ರೀ ಸಂಧೀಪ್ ಮಿಶ್ರಾ ಅವರಿಂದ ಶ್ರೀ ದೇಸಾಯಿ ಅವರಿಗೆ ಪ್ರದಾನ ಮಾಡಲಾಯಿತು.
ಈ ಸಾಧನೆ ಹಿನ್ನೆಲೆಯಲ್ಲಿ ಹಲಶಿವಾಡಿ ಹಾಗೂ ಖಾನಾಪುರ ಪ್ರದೇಶದಲ್ಲಿ ಸಂತೋಷ ವ್ಯಕ್ತವಾಗಿದ್ದು, ಶ್ರೀ ವಿಷ್ಣು ದೇಸಾಯಿ ಅವರ ಭರ್ಜರಿ ಪ್ರಶಸ್ತಿಗೆ ಎಲ್ಲೆಡೆ ಅಭಿನಂದನೆ ವ್ಯಕ್ತವಾಗುತ್ತಿದೆ.