घोटगाळी गावची कन्या भावना देसाईची CRPF मध्ये निवड | ಘೋಟಗಾಳಿ ಗ್ರಾಮದ ಪುತ್ರಿ ಭಾವನಾ ದೇಸಾಯಿ CRPFಗೆ ಆಯ್ಕೆ
घोटगाळी : घोटगाळी गावची लाडकी कन्या कु. भावना (राणी) महादेव देसाई हिची भारतीय केंद्रीय राखीव पोलिस दल (CRPF) मध्ये यशस्वी निवड झाली आहे. भावना ही कै. पांडुरंग देसाई व श्रीमती रुक्मिणी देसाई यांची नात, तसेच सौ. उमा व श्री महादेव पांडुरंग देसाई यांची ज्येष्ठ कन्या आहे.
अथक परिश्रम, कठोर मेहनत आणि हट्टी जिद्दीच्या जोरावर भावनाने हे घवघवीत यश संपादन केले आहे. घोटगाळी गावातून महिलावर्गातून देशसेवेसाठी CRPF मध्ये निवड होणारी भावना ही पहिलीच तरुणी ठरली असून, तिने गावाचा नावलौकिक वाढविला आहे.
भावना देसाईच्या या उल्लेखनीय यशाबद्दल गावात सर्वत्र कौतुक होत असून, तिच्यावर अभिनंदनाचा वर्षाव होत आहे. तिच्या पुढील वाटचालीसाठी सर्व स्तरांतून हार्दिक शुभेच्छा व्यक्त करण्यात येत आहेत.
ಘೋಟಗಾಳಿ ಗ್ರಾಮದ ಪುತ್ರಿ ಭಾವನಾ ದೇಸಾಯಿ CRPFಗೆ ಆಯ್ಕೆ
ಘೋಟಗಾಳಿ :
ಘೋಟಗಾಳಿ ಗ್ರಾಮದ ಹೆಮ್ಮೆಯ ಪುತ್ರಿ ಕು. ಭಾವನಾ (ರಾಣಿ) ಮಹಾದೇವ ದೇಸಾಯಿ ಅವರು ಭಾರತೀಯ ಕೇಂದ್ರಿಯ ರಿಸರ್ವ್ ಪೊಲೀಸ್ ಪಡೆ (CRPF) ಗೆ ಯಶಸ್ವಿಯಾಗಿ ಆಯ್ಕೆಯಾಗಿದ್ದಾರೆ. ಭಾವನಾ ಅವರು ದಿವಂಗತ ಪಾಂಡುರಂಗ ದೇಸಾಯಿ ಹಾಗೂ ಶ್ರೀಮತಿ ರುಕ್ಮಿಣಿ ದೇಸಾಯಿ ಅವರ ಮೊಮ್ಮಗಳು, ಮತ್ತು ಸೌ. ಉಮಾ ಹಾಗೂ ಶ್ರೀ ಮಹಾದೇವ ಪಾಂಡುರಂಗ ದೇಸಾಯಿ ಅವರ ಹಿರಿಯ ಪುತ್ರಿ ಆಗಿದ್ದಾರೆ.
ಅವಿರತ ಪರಿಶ್ರಮ, ಕಠಿಣ ಶಿಸ್ತು ಮತ್ತು ದೃಢ ಸಂಕಲ್ಪದ ಫಲವಾಗಿ ಭಾವನಾ ಈ ಮಹತ್ವದ ಸಾಧನೆ ಮಾಡಿದ್ದಾರೆ. ಘೋಟಗಾಳಿ ಗ್ರಾಮದಿಂದ ಮಹಿಳಾ ವಿಭಾಗದಲ್ಲಿ ದೇಶಸೇವೆಗೆ CRPFಗೆ ಆಯ್ಕೆಯಾದ ಮೊದಲ ಯುವತಿ ಎಂಬ ಗೌರವವನ್ನು ಭಾವನಾ ಪಡೆದುಕೊಂಡಿದ್ದು, ಇದರಿಂದ ಗ್ರಾಮದ ಗೌರವ ಮತ್ತಷ್ಟು ಹೆಚ್ಚಾಗಿದೆ.
ಭಾವನಾ ದೇಸಾಯಿ ಅವರ ಈ ವಿಶಿಷ್ಟ ಸಾಧನೆಗೆ ಗ್ರಾಮಸ್ಥರಿಂದ ಹಾಗೂ ವಿವಿಧ ವಲಯಗಳಿಂದ ಹಾರ್ದಿಕ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದ್ದು, ಅವರ ಮುಂದಿನ ಸೇವಾ ಜೀವನಕ್ಕೆ ಹಾರ್ದಿಕ ಶುಭಾಶಯಗಳು ತಿಳಿಸಲಾಗುತ್ತಿವೆ.
