आमदार विठ्ठलराव हलगेकर यांच्या वाढदिवसानिमित्त जांबोटी भाजपकडून भव्य रक्तदान शिबिर | ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಜನ್ಮದಿನದ ಪ್ರಯುಕ್ತ ಜಾಂಬೋಟಿ ಬಿಜೆಪಿ ವತಿಯಿಂದ ಭವ್ಯ ರಕ್ತದಾನ ಶಿಬಿರ
खानापूर : खानापूर तालुक्याचे आमदार श्री विठ्ठलराव हलगेकर यांच्या वाढदिवसाचे औचित्य साधून भारतीय जनता पार्टी जांबोटी विभागाच्या वतीने सामाजिक बांधिलकी जपत भव्य रक्तदान शिबिराचे आयोजन करण्यात आले आहे.

हे रक्तदान शिबिर येत्या बुधवार, ७ जानेवारी रोजी सकाळी १० ते दुपारी २ वाजेपर्यंत श्री मारुती मलप्रभा तीर्थक्षेत्र, हब्बनहट्टी येथे संपन्न होणार आहे.
वाढदिवस साजरा करण्यापेक्षा समाजातील गरजू रुग्णांना रक्ताचा पुरवठा व्हावा, या उदात्त हेतूने या उपक्रमाचे आयोजन करण्यात आले असून, “रक्तदान हेच श्रेष्ठ दान” या भावनेतून कार्यक्रम राबवण्यात येत आहे.
या शिबिराच्या यशस्वी आयोजनासाठी भाजप जांबोटी विभागातील पदाधिकारी व कार्यकर्ते सक्रिय असून, तालुक्यातील तरुण रक्तदाते तसेच नागरिकांनी मोठ्या संख्येने सहभागी होऊन आमदार विठ्ठलराव हलगेकर यांना वाढदिवसाची आगळीवेगळी भेट द्यावी, असे आवाहन आयोजकांकडून करण्यात आले आहे.
ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಜನ್ಮದಿನದ ಪ್ರಯುಕ್ತ ಜಾಂಬೋಟಿ ಬಿಜೆಪಿ ವತಿಯಿಂದ ಭವ್ಯ ರಕ್ತದಾನ ಶಿಬಿರ
ಖಾನಾಪುರ : ಖಾನಾಪುರ ತಾಲ್ಲೂಕಿನ ಶಾಸಕ ಶ್ರೀ ವಿಠ್ಠಲರಾವ್ ಹಲಗೇಕರ್ ಅವರ ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಜಾಂಬೋಟಿ ವಿಭಾಗದ ವತಿಯಿಂದ ಸಮಾಜಮುಖಿ ಚಿಂತನೆಯೊಂದಿಗೆ ಭವ್ಯ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಈ ರಕ್ತದಾನ ಶಿಬಿರವು ಬುಧವಾರ, ಜನವರಿ 7ರಂದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರೀ ಮಾರುತಿ ಮಲಪ್ರಭಾ ತೀರ್ಥಕ್ಷೇತ್ರ, ಹಬ್ಬನಹಟ್ಟಿಯಲ್ಲಿ ನಡೆಯಲಿದೆ.
ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜದಲ್ಲಿನ ಅಗತ್ಯವಿರುವ ರೋಗಿಗಳಿಗೆ ರಕ್ತದ ಕೊರತೆ ನಿವಾರಿಸುವ ಉದಾತ್ತ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. “ರಕ್ತದಾನವೇ ಶ್ರೇಷ್ಠ ದಾನ” ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.
ಈ ಶಿಬಿರದ ಯಶಸ್ಸಿಗಾಗಿ ಬಿಜೆಪಿ ಜಾಂಬೋಟಿ ವಿಭಾಗದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ತಾಲ್ಲೂಕಿನ ಹೆಚ್ಚಿನ ಸಂಖ್ಯೆಯ ಯುವ ರಕ್ತದಾತರು ಹಾಗೂ ಸಾರ್ವಜನಿಕರು ಭಾಗವಹಿಸಿ ಶಾಸಕ ವಿಠ್ಠಲರಾವ್ ಹಲಗೇಕರ್ ಅವರಿಗೆ ಜನ್ಮದಿನದ ಅರ್ಥಪೂರ್ಣ ಶುಭಾಶಯ ಸಲ್ಲಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
