हुळंद गावात अस्वलाचा हल्ला : ग्रामस्थ गंभीर जखमी
खानापूर (प्रतिनिधी) :खानापूर तालुक्यातील हुळंद गावात आज (रविवार) संध्याकाळी पाचच्या सुमारास अस्वलाने गावातील वासुदेव नारायण गावडे यांच्यावर हल्ला केला. गावडे गंभीर जखमी झाले असून त्यांना तातडीने ॲंब्युलन्सद्वारे उपचारासाठी बेळगाव येथील रुग्णालयात हलविण्यात आले आहे.
गावडे यांच्यावर अस्वलाने प्रचंड हल्ला केल्याने एक डोळा पूर्णतः गमावल्याची माहिती त्यांच्या कुटुंबीयांनी दिली आहे. घटनेनंतर ग्रामस्थांमध्ये भीतीचे वातावरण निर्माण झाले आहे.
खानापूर ब्लॉक काँग्रेसने याप्रकरणी वनखात्याला इशारा देत सांगितले की योग्य उपचार न मिळाल्यास तीव्र आंदोलन करण्यात येईल.
ಹುಳಂದ ಗ್ರಾಮದಲ್ಲಿ ಕರಡಿಯ ದಾಳಿ : ಗ್ರಾಮಸ್ಥ ಗಂಭೀರವಾಗಿ ಗಾಯ
ಖಾನಾಪುರ (ವರದಿಗಾರ) :
ಖಾನಾಪುರ ತಾಲೂಕಿನ ಹುಳಂದ ಗ್ರಾಮದಲ್ಲಿ ಇಂದು (ಭಾನುವಾರ) ಸಂಜೆ ಐದು ಗಂಟೆ ವೇಳೆಗೆ ಕರಡಿಯು ಗ್ರಾಮದ ವಾಸುದೇವ ನರಾಯಣ ಗವಡೆ ಅವರ ಮೇಲೆ ಹಲ್ಲೆ ನಡೆಸಿತು. ಈ ದಾಳಿಯಲ್ಲಿ ಗವಡೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಲಾಗಿದೆ.
ಕರಡಿಯ ದಾಳಿಯಿಂದ ಗವಡೆ ಒಂದು ಕಣ್ಣು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಖಾನಾಪುರ ಬ್ಲಾಕ್ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಗವಡೆ ಅವರಿಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ತೀವ್ರ ಹೋರಾಟ ಕೈಗೊಳ್ಳುವುದಾಗಿ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದೆ.