दिवाळीच्या पार्श्वभूमीवर विशेष रेल्वे सेवा: बेंगळुरू–बेळगाव एक्सप्रेस चालवणार | ದೀಪಾವಳಿ ಪ್ರಯುಕ್ತ ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ರೈಲು ಸೇವೆ
बेळगाव: प्रत्येक सणानिमित्त प्रवाशांची वाढलेली गर्दी लक्षात घेऊन दक्षिण पश्चिम रेल्वे विभागाने दिवाळीला सर एम. विश्वेश्वरय्या टर्मिनस बेंगळुरू ते बेळगाव दरम्यान एक विशेष एक्सप्रेस रेल्वे सेवा चालवण्याचा निर्णय घेतला आहे.
रेल्वे क्रमांक 06503 सर एम. विश्वेश्वरय्या टर्मिनस बेंगळुरू–बेळगाव विशेष एक्सप्रेस ही गाडी 17 ऑक्टोबर 2025 रोजी संध्याकाळी 5.30 वाजता बेंगळुरूहून सुटून पुढील दिवशी सकाळी 5.30 वाजता बेळगाव येथे पोहोचेल.
परतीची गाडी क्रमांक 06504 बेळगाव–सर एम. विश्वेश्वरय्या टर्मिनस बेंगळुरू विशेष एक्सप्रेस ही 22 ऑक्टोबर 2025 रोजी संध्याकाळी 5.30 वाजता बेळगावहून सुटून पुढील दिवशी सकाळी 5.00 वाजता बेंगळुरू येथे पोहोचेल.
या विशेष रेल्वेला मार्गात चिक्कबनावर, तुमकूर, अरसीकेरे, बीरूर, दावणगेरे, हरिहर, हावेरी, हुबळी, धारवाड, अलनावर आणि लोंडा या स्थानकांवर थांबा असेल.
या गाडीत एकूण 19 कोचेस असून त्यात 1 ए.सी. 2-टिअर, 3 ए.सी. 3-टिअर, 10 स्लीपर, 3 जनरल आणि 2 एस.एल.आर./डी कोचेस असतील.
📰 ದೀಪಾವಳಿ ಪ್ರಯುಕ್ತ ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ರೈಲು ಸೇವೆ
ಬೆಳಗಾವಿ : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ಒಂದು ಪ್ರಯಾಣದ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06503 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 17, 2025ರಂದು ಸಂಜೆ 5:30 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 5:30 ಗಂಟೆಗೆ ಬೆಳಗಾವಿ ತಲುಪಲಿದೆ.
ವಾಪಸ್ಸು ಪ್ರಯಾಣದ ರೈಲು ಸಂಖ್ಯೆ 06504 ಬೆಳಗಾವಿ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 22, 2025ರಂದು ಸಂಜೆ 5:30 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ಈ ರೈಲು ಮಾರ್ಗಮಧ್ಯೆ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಲೊಂಡಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲು ಒಟ್ಟು 19 ಬೋಗಿಗಳನ್ನು ಒಳಗೊಂಡಿದ್ದು, ಅವುಗಳಲ್ಲಿ 1 ಎಸಿ 2-ಟೈರ್, 3 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 3 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ.
➡️ ಈ ವಿಶೇಷ ಸೇವೆಯು ದೀಪಾವಳಿ ಹಬ್ಬದ ಪ್ರಯಾಣಿಕರಿಗೆ ಬಹು ಉಪಯುಕ್ತವಾಗುವ ನಿರೀಕ್ಷೆ ವ್ಯಕ್ತವಾಗಿದೆ.