खानापूर: भीषण अपघात; 9 वर्षीय बालकाचा मृत्यू | ಭೀಕರ ರಸ್ತೆ ಅಪಘಾತ, ಬೆಂಗಳೂರಿನ 9 ವರ್ಷದ ಬಾಲಕ ಮೃತ್ಯು
खानापूर: तालुक्यातील गुंडोळी गावाजवळ शुक्रवारी सकाळी साडेसातच्या सुमारास भरधाव कारचा टायर फुटल्याने कार थेट झाडावर आदळून भीषण अपघात झाला. या दुर्घटनेत कोरमंगल, बेंगळूर येथील नऊ वर्षीय बालकाचा दुर्दैवी मृत्यू झाला असून कारमधील अन्य दोघे बालक जखमी झाले आहेत.
मृत बालकाचे नाव हियांशू अक्षय (वय ९, रा. कोरमंगल – बेंगळूर) असे आहे. तर गुणव (वय १०) आणि सव्या (वय १०) ही दोन मुले जखमी झाली आहेत. अपघातावेळी हियांशूचे वडील अक्षय हे कार चालवत होते.
प्राथमिक माहितीनुसार, कारच्या उजव्या बाजूचा टायर अचानक फुटल्याने चालकाचे वाहनावरील नियंत्रण सुटले आणि कार रस्त्यालगत असलेल्या झाडावर जोरात आदळली. अपघाताची तीव्रता मोठी असल्याने हियांशूचा जागीच मृत्यू झाला.
या घटनेची नोंद नंदगड पोलीस स्थानकात करण्यात आली असून पुढील तपास पोलीस करीत आहेत.
ಗುಂಡೋಳಿ ಸಮೀಪ ಭೀಕರ ರಸ್ತೆ ಅಪಘಾತ
ಕಾರು ಮರಕ್ಕೆ ಡಿಕ್ಕಿಯಾಗಿ ಬೆಂಗಳೂರಿನ 9 ವರ್ಷದ ಬಾಲಕ ಮೃತ್ಯು
ಇಬ್ಬರು ಮಕ್ಕಳು ಗಾಯಗೊಂಡರು; ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗಾವಿ : ಖಾನಾಪುರ ತಾಲ್ಲೂಕಿನ ಗುಂಡೋಳಿ ಗ್ರಾಮದ ಸಮೀಪ ಶುಕ್ರವಾರ ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಕೋರ್ಮಂಗಲ ನಿವಾಸಿ 9 ವರ್ಷದ ಬಾಲಕನೊಬ್ಬ ದುರ್ಮರಣಕ್ಕೀಡಾಗಿದ್ದಾನೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ಮೃತ ಬಾಲಕನನ್ನು ಹಿಯಾಂಶು ಅಕ್ಷಯ (ವಯಸ್ಸು 9, ಕೋರ್ಮಂಗಲ – ಬೆಂಗಳೂರು) ಎಂದು ಗುರುತಿಸಲಾಗಿದೆ. ಗಾಯಗೊಂಡ ಮಕ್ಕಳನ್ನು ಗುಣವ (ವಯಸ್ಸು 10) ಹಾಗೂ ಸವ್ಯ (ವಯಸ್ಸು 10) ಎಂದು ತಿಳಿದುಬಂದಿದೆ. ಅಪಘಾತದ ವೇಳೆ ಹಿಯಾಂಶು ತಂದೆ ಅಕ್ಷಯ ಅವರು ಕಾರು ಚಾಲನೆ ಮಾಡುತ್ತಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ, ಕಾರಿನ ಬಲಭಾಗದ ಟೈರ್ ಅಚಾನಕ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಹೆಚ್ಚಾಗಿದ್ದರಿಂದ ಬಾಲಕ ಹಿಯಾಂಶು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
