भरधाव ट्रकखाली खानापूरच्या सुनील देसाई यांचा मृत्यू
बेळगाव : गोवा वेसजवळील सिग्नलवर गुरुवारी (दि. ४ सप्टेंबर) सायंकाळी झालेल्या भीषण अपघातात खानापूर तालुक्यातील कापोली येथील सुनील दिलीप देसाई (वय ४२) यांचा जागीच मृत्यू झाला.
मिळालेल्या माहितीनुसार, सायंकाळी साडेचार वाजण्याच्या सुमारास सुनील देसाई हे आपल्या स्प्लेंडर दुचाकीवरून जात असताना आरपीडी कॉलेजकडून भरधाव वेगात आलेल्या ट्रकने त्यांच्या दुचाकीला मागून जोरदार धडक दिली. धडकेची तीव्रता इतकी भीषण होती की, सुनील देसाई यांचा जागीच मृत्यू झाला.
या अपघातामुळे परिसरात काही काळ गोंधळाची परिस्थिती निर्माण झाली होती. घटनेची नोंद स्थानिक पोलिसांनी करून घेतली असून पुढील तपास सुरू आहे.
ಬೆಳಗಾವಿ : ವೇಗದ ಟ್ರಕ್ ಡಿಕ್ಕಿ – ಖಾನಾಪುರದ ಸುನಿಲ್ ದೇಸಾಯಿ ಮೃತ
ಬೆಳಗಾವಿ : ನಗರದ ಗೋವಾ ವೇಸ್ ಬಳಿ ಗುರುವಾರ (ಸೆ. 4) ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾನಾಪುರ ತಾಲೂಕು ಕಾಪೋಲಿ ಗ್ರಾಮದ ಸುನಿಲ್ ದಿಲೀಪ್ ದೇಸಾಯಿ (42) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಹಿತಿಯ ಪ್ರಕಾರ, ಸಂಜೆ 4.30ರ ಸುಮಾರಿಗೆ ಸುನಿಲ್ ದೇಸಾಯಿ ಅವರು ತಮ್ಮ ಸ್ಪ್ಲೆಂಡರ್ ಬೈಕ್‌ನಲ್ಲಿ ತೆರಳುತ್ತಿದ್ದರು. ಆ ವೇಳೆ ಆರ್‌ಪಿಡಿ ಕಾಲೇಜು ಭಾಗದಿಂದ ಬಂದ ವೇಗದ ಟ್ರಕ್ ಅವರು ಸಾಗುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿತು. ಡಿಕ್ಕಿ ಅಷ್ಟು ಭೀಕರವಾಗಿದ್ದು, ಅವರು ಟ್ರಕ್ ಚಕ್ರಗಳ ಕೆಳಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.
ಅಪಘಾತದಿಂದ ಕೆಲಕಾಲ ಸಂಚಾರ ಕಿಕ್ಕಿರಿದುಹೋಯಿತು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.