खानापूर

खानापूरच्या तरुणाचा भीषण अपघात; विसरलेला मोबाईल ठरला जीवावर | ಖಾನಾಪುರ ತಾಲೂಕಿನ ಯುವಕನ ದುರ್ಮರಣ: ಮೊಬೈಲ್ ತರಲು ಹೋದಾಗ ಟಿಪ್ಪರ್ ಡಿಕ್ಕಿ

खानापूर: ट्रकमध्ये विसरलेला मोबाईल फोन आणण्यासाठी गेलेल्या एका २१ वर्षीय तरुणाचा भरधाव टिप्परच्या धडकेत जागीच मृत्यू झाला. ही हृदयद्रावक घटना शुक्रवारी रात्री १०:३० वाजण्याच्या सुमारास एम. के. हुबळी येथील मलनाड ढाब्याजवळ घडली. शोएब नजीर अहमद रोटीवाले (रा. पारिश्वाड, ता. खानापूर) असे मृत तरुणाचे नाव असून तो व्यवसायाने ट्रक क्लिनर होता.
मिळालेल्या माहितीनुसार, निलगिरीचे ओंडके वाहून नेणारा ट्रक (KA 41 A 8491) दांडेलीच्या दिशेने जात असताना जेवणासाठी एम. के. हुबळी येथे थांबला होता. चालक इनायतउल्ला आणि क्लिनर शोएब जेवण करत असताना शोएबला आपला मोबाईल ट्रकमध्ये राहिल्याची आठवण झाली. तो मोबाईल घेण्यासाठी ट्रककडे गेला असता, बेळगावहून धारवाडकडे जाणाऱ्या भरधाव टिप्परने उभ्या ट्रकला आणि शोएबला जोरदार धडक दिली.
या भीषण अपघातात शोएबचा जागीच अंत झाला. याप्रकरणी कित्तूर पोलिसांनी टिप्पर चालक दिलावर सुभान हवालदार याच्यावर गुन्हा दाखल केला असून पुढील तपास सुरू आहे.

ಕನ್ನಡ ಸುದ್ದಿ

ಮರೆತ ಮೊಬೈಲ್ ತರಲು ಹೋದ ಯುವಕನಿಗೆ ಕಾಯ್ದಿದ್ದ ಕಾಲ: ಟಿಪ್ಪರ್ ಡಿಕ್ಕಿಯಾಗಿ ಕ್ಲೀನರ್ ಸಾವು

ಬೆಳಗಾವಿ: ಲಾರಿಯಲ್ಲಿ ಮರೆತು ಬಂದಿದ್ದ ಮೊಬೈಲ್ ತರಲು ಹೋದ ಯುವಕನೊಬ್ಬನಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಎಂ. ಕೆ. ಹುಬ್ಬಳ್ಳಿ ಸಮೀಪದ ಮಲೆನಾಡು ಧಾಬಾ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ನಿವಾಸಿ ಶೋಯೆಬ್ ನಜೀರ್ ಅಹ್ಮದ್ ರೋಟಿವಾಲೆ (೨೧) ಮೃತಪಟ್ಟ ದುರ್ದೈವಿ.
ನೀಲಗಿರಿ ಮರದ ತುಂಡುಗಳನ್ನು ತುಂಬಿದ್ದ ಲಾರಿಯು (KA 41 A 8491) ದಾಂಡೇಲಿ ಕಡೆಗೆ ತೆರಳುತ್ತಿತ್ತು. ರಾತ್ರಿ ವೇಳೆ ಚಾಲಕ ಇನಾಯತ್‌ವುಲ್ಲಾ ಮತ್ತು ಕ್ಲೀನರ್ ಶೋಯೆಬ್ ಊಟಕ್ಕಾಗಿ ಧಾಬಾ ಬಳಿ ಲಾರಿ ನಿಲ್ಲಿಸಿದ್ದರು. ಈ ವೇಳೆ ತನ್ನ ಮೊಬೈಲ್ ಲಾರಿಯಲ್ಲೇ ಇರುವುದು ನೆನಪಾಗಿ ಶೋಯೆಬ್ ಅದನ್ನು ತರಲು ಹೋಗಿದ್ದನು. ಇದೇ ವೇಳೆ ಬೆಳಗಾವಿಯಿಂದ ಧಾರವಾಡ ಕಡೆಗೆ ಸಾಗುತ್ತಿದ್ದ ಟಿಪ್ಪರ್ ರಸ್ತೆ ಬದಿಯ ಲಾರಿಗೆ ಹಾಗೂ ಶೋಯೆಬ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಶೋಯೆಬ್ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಬಗ್ಗೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಚಾಲಕ ದಿಲಾವರ್ ಸುಭಾನ್ ಹವಾಲ್ದಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या