माजी सैनिकांच्या कल्याणासाठी संघटना कटिबद्ध: खानापूर येथे स्नेहमेळावा संपन्न | ಮಾಜಿ ಸೈನಿಕರ ಕಲ್ಯಾಣಕ್ಕೆ ಸಂಘಟನೆ ಬದ್ಧ: ಖಾನಾಪುರದಲ್ಲಿ ಸ್ನೇಹ ಸಮ್ಮಿಲನ
खानापूर: देशसेवेतून निवृत्त झाल्यानंतरही माजी सैनिकांचे संघटन समाजासाठी उपयुक्त ठरावे, या उद्देशाने खानापूर तालुका माजी सैनिक संघटनेची वाटचाल सुरू आहे. “माजी सैनिकांच्या कल्याणासाठी ही संघटना सातत्याने कार्यरत राहील आणि कोणत्याही अडचणीच्या काळात संघटना सदस्यांच्या पाठीशी खंबीरपणे उभी राहील,” असा निर्धार अध्यक्ष अमृत पाटील यांनी व्यक्त केला.
खानापूर येथे आयोजित माजी सैनिकांच्या स्नेहमेळाव्यात ते बोलत होते. यावेळी व्यासपीठावर अनिल देसाई, परशराम डागेकर, गणपत गावडे, दत्तात्रय गुरव आणि इतर मान्यवर उपस्थित होते.

या प्रसंगी मार्गदर्शन करताना अनिल देसाई म्हणाले की, “आजच्या तरुणांना व्यसनाधिनतेपासून दूर ठेवणे आवश्यक आहे. त्यांना सैन्य भरतीसाठी लागणारे आवश्यक प्रशिक्षण आणि माहिती देण्यासाठी माजी सैनिकांनी पुढाकार घ्यावा.”
या बैठकीत संघटनेच्या भविष्यातील उपक्रम आणि नियोजित वाटचालीवर सविस्तर चर्चा करण्यात आली. या मेळाव्याला सोमनाथ गुरव, अनंत देसाई, लक्ष्मण हगीरगेकर, मोहन गंगवाळकर, अर्जुन पाटील, गोकुळदास कोणेकर, मोनेश्री कामतगेकर, कृष्णा वांद्रे, महेश बापशेठ, बळीराम गावडा, गोविंद पाटील, म्हात्र नरसेवाडकर, सुरेश पवार यांच्यासह अनेक माजी सैनिक उपस्थित होते.
ಮಾಜಿ ಸೈನಿಕರ ಕಲ್ಯಾಣಕ್ಕೆ ಸಂಘಟನೆ ಬದ್ಧ: ಖಾನಾಪುರದಲ್ಲಿ ಸ್ನೇಹ ಸಮ್ಮಿಲನ
ಖಾನಾಪುರ:
ದೇಶಸೇವೆಯಿಂದ ನಿವೃತ್ತರಾದ ಮೇಲೆಯೂ ಮಾಜಿ ಸೈನಿಕರ ಸಂಘಟನೆಯು ಸಮಾಜದ ಏಳಿಗೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂಬ ಉದ್ದೇಶದೊಂದಿಗೆ ಖಾನಾಪುರ ತಾಲ್ಲೂಕು ಮಾಜಿ ಸೈನಿಕರ ಸಂಘಟನೆಯು ಮುನ್ನಡೆಯುತ್ತಿದೆ. “ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಈ ಸಂಘಟನೆಯು ನಿರಂತರವಾಗಿ ಶ್ರಮಿಸಲಿದೆ ಮತ್ತು ಯಾವುದೇ ಸಂಕಷ್ಟದ ಸಮಯದಲ್ಲಿ ಸಂಘಟನೆಯು ಮಾಜಿ ಸೈನಿಕರ ಬೆನ್ನಿಗೆ ದೃಢವಾಗಿ ನಿಲ್ಲಲಿದೆ” ಎಂದು ಅಧ್ಯಕ್ಷರಾದ ಅಮೃತ ಪಾಟೀಲ ತಿಳಿಸಿದರು.
ಖಾನಾಪುರದಲ್ಲಿ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಸ್ನೇಹ ಸಮ್ಮಿಲನ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಅನಿಲ ದೇಸಾಯಿ ಮಾತನಾಡಿ, “ಇಂದಿನ ಯುವ ಪೀಳಿಗೆಯನ್ನು ವ್ಯಸನ ಮುಕ್ತಗೊಳಿಸುವುದು ಅವಶ್ಯಕವಾಗಿದೆ. ಯುವಕರಿಗೆ ಸೈನ್ಯಕ್ಕೆ ಸೇರಲು ಬೇಕಾದ ಅಗತ್ಯ ತರಬೇತಿ ಮತ್ತು ಮಾಹಿತಿಯನ್ನು ನೀಡಲು ಮಾಜಿ ಸೈನಿಕರು ಮುಂದಾಗಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಂದಿನ ಕಾರ್ಯಯೋಜನೆಗಳು ಮತ್ತು ಭವಿಷ್ಯದ ಚಟುವಟಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಪರಶರಾಮ ಡಾಗೇಕರ, ಗಣಪತ ಗಾವಡೆ, ದತ್ತಾತ್ರಯ ಗುರವ, ಸೋಮನಾಥ ಗುರವ, ಅನಂತ ದೇಸಾಯಿ, ಲಕ್ಷ್ಮಣ ಹಗಿರಗೇಕರ, ಮೋಹನ ಗಂಗ್ವಾಳಕರ, ಅರ್ಜುನ ಪಾಟೀಲ, ಗೋಕುಳದಾಸ ಕೋಣೇಕರ ಸೇರಿದಂತೆ ಹಲವು ಮಾಜಿ ಸೈನಿಕರು ಉಪಸ್ಥಿತರಿದ್ದರು.

