खानापूर

खानापूर मार्गे अपहरण: अल्पवयीन मुलीवर अत्याचार करणाऱ्या नराधमाला 30 वर्षे कारावास | ಖಾನಾಪುರ ಮಾರ್ಗವಾಗಿ ಅಪಹರಣ; ಪೋಕಸೊ ಪ್ರಕರಣದಲ್ಲಿ ಕಠಿಣ ಶಿಕ್ಷೆ

बेळगाव:  अल्पवयीन मुलीवर लैंगिक अत्याचार केल्याच्या अत्यंत गंभीर गुन्ह्यात देशनूर  येथील एका 24 वर्षीय युवकाला जिल्हा पोक्सो न्यायालयाने 30 वर्षांचा सश्रम कारावास आणि एक लाख रुपये दंडाची कठोर शिक्षा सुनावली आहे. जिल्हा व सत्र न्यायाधीश सी. एम. पुष्पलता यांनी शुक्रवारी (दि. 6) हा महत्त्वपूर्ण निकाल दिला. लक्ष्मण मारुती कुरगुंद (वय 24) असे शिक्षा झालेल्या आरोपीचे नाव आहे.
नेमकी घटना काय?
खटल्यातील माहितीनुसार, 28 डिसेंबर 2023 रोजी आरोपी लक्ष्मण याने पीडित अल्पवयीन मुलीला दुचाकीवरून खानापूरमार्गे गोव्याला पळवून नेले होते. तिथे त्याने पीडितेवर लैंगिक अत्याचार करण्याचा प्रयत्न केला. त्यानंतर त्याने तिला मिरज (जि. सांगली) येथे नेऊन तिथे तिच्यावर अत्याचार केले. पीडित मुलगी घरी परतल्यानंतर तिने घडलेला प्रकार पालकांना सांगितला. याप्रकरणी नेसरगी पोलीस ठाण्यात तक्रार दाखल करण्यात आली होती.
तपास आणि कायदेशीर कारवाई
तत्कालीन पोलीस निरीक्षक राघवेंद्र हवालदार यांनी या प्रकरणाचा सखोल तपास केला. आरोपीविरुद्ध भारतीय दंड संहितेच्या कलम 343, 376 (2) आणि पोक्सो (POCSO) कायद्याच्या कलम 4 व 6 अन्वये गुन्हा नोंदवून न्यायालयात दोषारोपपत्र दाखल केले होते.
न्यायालयाचा निकाल आणि दंड
सुनावणीदरम्यान सरकारी वकील ॲड. एल. व्ही. पाटील यांनी १० साक्षीदार, ७१ कागदोपत्री पुरावे आणि १६ महत्त्वाचे मुद्देमाल सादर केले. पुराव्यांची साखळी सिद्ध झाल्याने न्यायालयाने आरोपीला दोषी ठरवले.

  • शिक्षा: ३० वर्षे सश्रम कारावास.
  • दंड: १ लाख रुपये (दंड न भरल्यास १ वर्षाची अतिरिक्त शिक्षा).
  • नुकसानभरपाई: पीडित मुलीला जिल्हा विधी सेवा प्राधिकरणाकडून ४ लाख रुपयांची मदत देण्याचे आदेशही न्यायालयाने दिले आहेत.

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಯುವಕನಿಗೆ 30 ವರ್ಷಗಳ ಕಠಿಣ ಜೈಲು, ₹1 ಲಕ್ಷ ದಂಡ

ಬೆಳಗಾವಿ :
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೇಶನೂರಿನ ಯುವಕನಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯವು 30 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ. ನ್ಯಾಯಾಧೀಶೆ ಸಿ. ಎಂ. ಪುಷ್ಪಲತಾ ಅವರು ಶುಕ್ರವಾರ (ದಿ. 6) ತೀರ್ಪು ಪ್ರಕಟಿಸಿದರು. ಆರೋಪಿಯು ಲಕ್ಷ್ಮಣ ಮಾರತಿ ಕುರಗುಂದ (ವಯಸ್ಸು 24) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ: 2023ರ ಡಿಸೆಂಬರ್ 28ರಂದು ಆರೋಪಿಯಾದ ಲಕ್ಷ್ಮಣನು ಅಪ್ರಾಪ್ತ ಬಾಲಕಿಯನ್ನು ದ್ವಿಚಕ್ರ ವಾಹನದಲ್ಲಿ ಖಾನಾಪುರ ಮಾರ್ಗವಾಗಿ ಗೋವಾಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಯತ್ನಿಸಿದ್ದಾನೆ. ನಂತರ ಗೋವೆಯಿಂದ ಮಿರ್ಜೆ (ಸಾಂಗ್ಲಿ ಜಿಲ್ಲೆ)ಗೆ ಕರೆದೊಯ್ದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಘಟನೆಯ ಬಳಿಕ ಬಾಲಕಿ ಮನೆಗೆ ಮರಳಿ ನಡೆದ ಘಟನೆಯನ್ನು ತನ್ನ ಪಾಲಕರಿಗೆ ತಿಳಿಸಿದ್ದಾಳೆ. ಇದರಿಂದಾಗಿ ಬಾಲಕಿಯ ಪಾಲಕರು ನೆಸರಗಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಹವಾಲ್ದಾರ್ ಅವರು ಪ್ರಕರಣದ ತನಿಖೆ ನಡೆಸಿ, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 343, 376(2) ಹಾಗೂ ಪೋಕ್ಸೋ ಕಾಯ್ದೆಯ ಕಲಂ 4 ಮತ್ತು 6ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು.

ನ್ಯಾಯಾಲಯದಲ್ಲಿ ಒಟ್ಟು 10 ಸಾಕ್ಷಿಗಳ ಹೇಳಿಕೆ, 71 ದಾಖಲೆ ಸಾಕ್ಷ್ಯಗಳು ಹಾಗೂ 16 ವಸ್ತು ಸಾಕ್ಷ್ಯಗಳನ್ನು ಪರಿಶೀಲಿಸಲಾಯಿತು. ಎಲ್ಲಾ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಯು ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು 30 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಮತ್ತೊಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇದಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪೀಡಿತ ಬಾಲಕಿಯ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಡ್ವೊಕೇಟ್ ಎಲ್. ವಿ. ಪಾಟೀಲ್ ಅವರು ವಾದ ಮಂಡಿಸಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या