खानापूर तालुक्यातील ज्येष्ठ नागरिकांसाठी 27 जानेवारी रोजी विशेष कार्यशाळा | ಖಾನಾಪುರ ತಾಲ್ಲೂಕಿನ ಹಿರಿಯ ನಾಗರಿಕರಿಗಾಗಿ ಜನವರಿ 27ರಂದು ವಿಶೇಷ ಕಾರ್ಯಾಗಾರ
खानापूर : खानापूर तालुक्यातील सर्व ज्येष्ठ नागरिकांसाठी कर्नाटक सरकारच्या वतीने एक महत्त्वपूर्ण कार्यशाळा मंगळवार, दिनांक 27 जानेवारी 2026 रोजी सकाळी ठीक 11.00 वाजता तालुका पंचायत कार्यालय, खानापूर येथे आयोजित करण्यात आली आहे.
हा उपक्रम तालुका पंचायत खानापूर व सिव्हिल कोर्ट खानापूर यांच्या संयुक्त विद्यमाने आयोजित करण्यात आला आहे.
या कार्यशाळेत ज्येष्ठ नागरिकांसाठी केंद्र सरकार व राज्य सरकारच्या विविध योजना, सवलती तसेच कायदेशीर हक्क व मार्गदर्शनाची सविस्तर माहिती देण्यात येणार आहे.
ज्येष्ठ नागरिक संघटना, खानापूर यांच्या वतीने कळविण्यात आले आहे की संघटनेचे अध्यक्ष, उपाध्यक्ष, कार्यदर्शी, पदाधिकारी तसेच संघटनेचे सर्व सभासद या कार्यक्रमास उपस्थित राहणार आहेत.
खानापूर तालुक्यातील सर्व ज्येष्ठ नागरिकांनी या उपयुक्त कार्यशाळेस मोठ्या संख्येने उपस्थित राहावे, असे आवाहन ज्येष्ठ नागरिक संघटनेचे अध्यक्ष श्री. बनवशी सर व कार्यकर्ते श्री. पवार सर यांनी केले आहे.
ಖಾನಾಪುರ ತಾಲ್ಲೂಕಿನ ಹಿರಿಯ ನಾಗರಿಕರಿಗಾಗಿ ಜನವರಿ 27ರಂದು ವಿಶೇಷ ಕಾರ್ಯಾಗಾರ
ಖಾನಾಪುರ : ಖಾನಾಪುರ ತಾಲ್ಲೂಕಿನ ಎಲ್ಲಾ ಹಿರಿಯ ನಾಗರಿಕರಿಗಾಗಿ ಕರ್ನಾಟಕ ಸರ್ಕಾರದ ವತಿಯಿಂದ ಮಂಗಳವಾರ, ದಿನಾಂಕ 27 ಜನವರಿ 2026 ರಂದು ಬೆಳಿಗ್ಗೆ ಸರಿಯಾಗಿ 11.00 ಗಂಟೆಗೆ ತಾಲ್ಲೂಕು ಪಂಚಾಯತ್ ಕಚೇರಿ, ಖಾನಾಪುರದಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯತ್ ಖಾನಾಪುರ ಹಾಗೂ ಸಿವಿಲ್ ಕೋರ್ಟ್ ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗುತ್ತಿದೆ.
ಕಾರ್ಯಾಗಾರದಲ್ಲಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಮತ್ತು ಕಾನೂನು ಸಂಬಂಧಿತ ಮಾಹಿತಿಯನ್ನು ನೀಡಲಾಗುವುದು.
ಖಾನಾಪುರ ಹಿರಿಯ ನಾಗರಿಕರ ಸಂಘಟನೆಯಿಂದ ತಿಳಿಸಲ್ಪಟ್ಟಂತೆ, ಸಂಘಟನೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಖಾನಾಪುರ ತಾಲ್ಲೂಕಿನ ಎಲ್ಲಾ ಹಿರಿಯ ನಾಗರಿಕರು ಈ ಉಪಯುಕ್ತ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಿರಿಯ ನಾಗರಿಕರ ಸಂಘಟನೆಯ ಅಧ್ಯಕ್ಷರಾದ ಶ್ರೀ. ಬನವಶಿ ಸರ್ ಹಾಗೂ ಕಾರ್ಯಕರ್ತರಾದ ಶ್ರೀ. ಪವಾರ್ ಸರ್ ಅವರು ಮನವಿ ಮಾಡಿದ್ದಾರೆ.

