डोंगरगांव येथे श्री गणेश जयंतीनिमित्त विविध धार्मिक कार्यक्रमांचे आयोजन | ಡೊಂಗರ್ಗಾವ್ನಲ್ಲಿ ಶ್ರೀ ಗಣೇಶ ಜಯಂತಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ
खानापूर: सालाबाद प्रमाणे यंदाही मौजे डोंगरगांव येथे श्री गणेश जयंती उत्साहात साजरी करण्यात येणार आहे. यानिमित्त बुधवार, दिनांक 22/01/2026 रोजी विविध धार्मिक व सांस्कृतिक कार्यक्रमांचे आयोजन करण्यात आले आहे.
कार्यक्रमाची सुरुवात सकाळी 10:00 वाजता श्री गणेश मूर्तीच्या अभिषेकाने होईल. त्यानंतर दुपारी 12:00 वाजता गणहोम संपन्न होईल. गणहोमानंतर गावातील सुवासिनी व गणेशभक्त एकत्र येऊन पाळण्याचा कार्यक्रम पार पाडतील.
दुपारी 02:00 ते 03:00 या वेळेत भाविकांसाठी तीर्थप्रसाद व महाप्रसादाचे आयोजन करण्यात आले आहे. सायंकाळी 04:00 ते 05:30 या वेळेत गावातील वारकरी मंडळींचे भजन होणार आहे.
त्यानंतर सायंकाळी 06:00 ते 07:30 या वेळेत परमपूज्य कलावती आईंच्या सायंस्मरण भजन व प्रवचनाचा कार्यक्रम होईल.
रात्री 08:30 ते 10:30 या वेळेत मराठी मुलांची शाळा, डोंगरगांव येथील इयत्ता 7 वीच्या विद्यार्थ्यांचा निरोप समारंभ तसेच लहान मुलांचे सांस्कृतिक कार्यक्रम सादर करण्यात येणार आहेत.
तरी सर्व गणेशभक्तांनी व ग्रामस्थांनी या सर्व कार्यक्रमांना मोठ्या संख्येने उपस्थित राहून कार्यक्रमाचा लाभ घ्यावा, असे आवाहन आयोजकांतर्फे करण्यात आले आहे.
ಡೊಂಗರ್ಗಾವ್ನಲ್ಲಿ ಶ್ರೀ ಗಣೇಶ ಜಯಂತಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ
ಪ್ರತಿ ವರ್ಷದಂತೆ ಈ ವರ್ಷವೂ ಡೊಂಗರ್ಗಾವ್ ಗ್ರಾಮದಲ್ಲಿ ಶ್ರೀ ಗಣೇಶ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಈ ನಿಮಿತ್ತ ಬುಧವಾರ, ದಿನಾಂಕ 22/01/2026 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಶ್ರೀ ಗಣೇಶ ಮೂರ್ತಿಗೆ ಅಭಿಷೇಕದೊಂದಿಗೆ ಪ್ರಾರಂಭವಾಗಲಿದೆ. ನಂತರ ಮಧ್ಯಾಹ್ನ 12:00 ಗಂಟೆಗೆ ಗಣಹೋಮ ನೆರವೇರಲಿದೆ. ಗಣಹೋಮದ ಬಳಿಕ ಗ್ರಾಮದಲ್ಲಿನ ಸುಮಂಗಲಿಯರು ಹಾಗೂ ಗಣೇಶ ಭಕ್ತರು ಸೇರಿ ಪಾಳ್ಣೆ ಕಾರ್ಯಕ್ರಮ ನಡೆಸಲಿದ್ದಾರೆ.
ಮಧ್ಯಾಹ್ನ 02:00 ರಿಂದ 03:00 ಗಂಟೆಯವರೆಗೆ ಭಕ್ತರಿಗೆ ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 04:00 ರಿಂದ 05:30 ರವರೆಗೆ ಗ್ರಾಮದ ವಾರಕರಿ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅನಂತರ ಸಂಜೆ 06:00 ರಿಂದ 07:30 ರವರೆಗೆ ಪರಮಪೂಜ್ಯ ಕಲಾವತಿ ಅಮ್ಮನವರ ಸಾಯಂಸ್ಮರಣ ಭಜನೆ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 08:30 ರಿಂದ 10:30 ರವರೆಗೆ ಡೊಂಗರ್ಗಾವ್ ಮರಾಠಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ವಿದಾಯ ಸಮಾರಂಭ ಹಾಗೂ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಆದ್ದರಿಂದ ಎಲ್ಲ ಗಣೇಶ ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
