भीषण अपघात; खानापूर तालुक्यातील युवकाचा मृत्यू | ಭೀಕರ ಅಪಘಾತ; ಖಾನಾಪುರ ತಾಲ್ಲೂಕಿನ ಯುವಕ ಸಾವು
वेरणा: वेरणा–मडगाव महामार्गावर रविवारी रात्री झालेल्या भीषण अपघातात खानापूर तालुक्यातील एका युवकाचा जागीच मृत्यू झाला. प्रवासी बस व दुचाकीची समोरासमोर धडक होऊन दुचाकीने पेट घेतल्याने हा दुर्दैवी प्रकार घडला.
या अपघातात केवीन ईशेंती परेरा उर्फ शाणू (वय ३२, रा. गुंजी, ता. खानापूर, जि. बेळगाव) याचा मृत्यू झाला. सध्या तो दक्षिण गोव्यातील माजोर्डा भागात वास्तव्यास होता आणि वेर्णा औद्योगिक वसाहतीत नोकरी करत होता.

वेर्णा पोलिसांकडून मिळालेल्या माहितीनुसार, रविवारी रात्री सुमारे सात वाजण्याच्या सुमारास केवीन हा आपल्या मोटारसायकलवरून वेर्णाहून मडगावकडे जात होता. यावेळी समोरून येणाऱ्या प्रवासी बसशी त्याची समोरासमोर जोरदार धडक झाली. धडकेनंतर दुचाकीने पेट घेतल्याने केवीन गंभीर जखमी होऊन होरपळला आणि त्याचा जागीच मृत्यू झाला.
घटनेनंतर त्याला दक्षिण गोवा जिल्हा रुग्णालयात दाखल करण्यात आले असता डॉक्टरांनी त्याला मृत घोषित केले. या प्रकरणी वेर्णा पोलिसांनी बसचालक जाकीर हुसेन शेख (रा. सांकवाळ) याच्याविरुद्ध गुन्हा नोंद केला असून पुढील तपास सुरू आहे. मयत केवीनवर सोमवारी संध्याकाळी संगरगाळी–गुंजी येथे अंत्यसंस्कार करण्यात आले.
ಕನ್ನಡ ಸುದ್ದಿ
ವೆರ್ನಾ–ಮಡಗಾಂವ್ ಹೆದ್ದಾರಿಯಲ್ಲಿ ಭೀಕರ ಅಪಘಾತ; ಖಾನಾಪುರ ತಾಲ್ಲೂಕಿನ ಯುವಕ ಸಾವು
ವೆರ್ನಾ : ವೆರ್ನಾ–ಮಡಗಾಂವ್ ರಾಷ್ಟ್ರೀಯ ಹೆದ್ದಾರಿಯ ಅಗ್ನೇಲ್ ಆಶ್ರಮ ಶಿಕ್ಷಣ ಸಂಸ್ಥೆ ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾನಾಪುರ ತಾಲ್ಲೂಕಿನ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಯಾಣಿಕರ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ಗೆ ಬೆಂಕಿ ಹೊತ್ತಿಕೊಂಡು ದುರ್ಘಟನೆ ನಡೆದಿದೆ.
ಮೃತನನ್ನು ಕೇವಿನ್ ಈಶೆಂಟಿ ಪೆರೇರಾ ಅಲಿಯಾಸ್ ಶಾನು (ವಯಸ್ಸು 32), ಗುಂಜಿ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ ಮೂಲದವರು ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ದಕ್ಷಿಣ ಗೋವಾದ ಮಜೋರ್ಡಾ ಪ್ರದೇಶದಲ್ಲಿ ವಾಸವಿದ್ದು, ವೆರ್ನಾ ಕೈಗಾರಿಕಾ ವಸಾಹತಿಯಲ್ಲಿ ಉದ್ಯೋಗದಲ್ಲಿದ್ದರು.
ವೆರ್ನಾ ಪೊಲೀಸ್ ಇಲಾಖೆ ನೀಡಿದ ಮಾಹಿತಿಯಂತೆ, ಭಾನುವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ಕೇವಿನ್ ತನ್ನ ಬೈಕ್ನಲ್ಲಿ ವೆರ್ನಾದಿಂದ ಮಡಗಾಂವ್ ಕಡೆಗೆ ತೆರಳುತ್ತಿದ್ದರು. ಅದೇ ವೇಳೆ ಎದುರುಗಡೆಯಿಂದ ಬರುತ್ತಿದ್ದ ಪ್ರಯಾಣಿಕರ ಬಸ್ ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತಕ್ಷಣ ಬೈಕ್ಗೆ ಬೆಂಕಿ ಹೊತ್ತಿಕೊಂಡು ಕೇವಿನ್ ಗಂಭೀರವಾಗಿ ಗಾಯಗೊಂಡು ಸುಟ್ಟುಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಅವರನ್ನು ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತ ಎಂದು ಘೋಷಿಸಿದ್ದಾರೆ. ಈ ಸಂಬಂಧ ವೆರ್ನಾ ಪೊಲೀಸರು ಬಸ್ ಚಾಲಕ ಜಾಕೀರ್ ಹುಸೇನ್ ಶೇಖ್ (ಸಾಂಕವಾಳ ನಿವಾಸಿ) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಮೃತನ ಅಂತ್ಯಕ್ರಿಯೆಯನ್ನು ಸೋಮವಾರ ಸಂಜೆ ಸಂಗರಗಾಳಿ–ಗುಂಜಿಯಲ್ಲಿ ನೆರವೇರಿಸಲಾಗಿದೆ.
