खानापूर

मुलाच्या पहिल्या वाढदिवसानिमित्त तिवोली शाळेतील विद्यार्थ्यांना वह्या-पेनचे वाटप; नागेंद्र पाटील यांचा स्तुत्य उपक्रम |ಮಗನ ಮೊದಲ ಹುಟ್ಟುಹಬ್ಬದ ಅಂಗವಾಗಿ ತಿವೋಳಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಣೆ; ನಾಗೇಂದ್ರ ಪಾಟೀಲ ಅವರ ಮಾದರಿ ಕಾರ್ಯ

खानापूर, ता. 19 : वाढदिवस म्हटला की मोठा खर्च, सजावट, फटाक्यांची आतषबाजी आणि मेजवानी असे चित्र आजकाल पाहायला मिळते. मात्र, या अनावश्यक खर्चाला फाटा देत मुलाचा पहिला वाढदिवस सामाजिक बांधिलकी जपत साजरा करण्याचा आदर्श तिवोली येथील नागेंद्र पाटील यांनी घालून दिला आहे.

आपला मुलगा श्रेयांश 19 नोव्हेंबर रोजी एक वर्षाचा झाल्याच्या आनंदानिमित्त नागेंद्र पाटील यांनी आपल्या गावच्या सरकारी पूर्ण प्राथमिक मराठी शाळा, तिवोली येथील विद्यार्थ्यांना वह्या व पेनचे वाटप केले.

वाढदिवसानिमित्त होणारा अनावश्यक खर्च करण्याऐवजी त्याच काही पैशातून गरजू विद्यार्थ्यांना शैक्षणिक साहित्य द्यावे आणि त्यांच्या शिक्षणाला हातभार लावावा, या उदात्त हेतूने त्यांनी हा उपक्रम राबविला.

आजकाल वाढदिवस साजरा करण्यासाठी मोठ्या प्रमाणात पैसा खर्च केला जातो. मात्र, त्याच पैशाचा उपयोग विद्यार्थ्यांच्या शैक्षणिक गरजा पूर्ण करण्यासाठी केला, तर त्यातून मिळणारा आनंद अधिक मोलाचा ठरतो. हाच सकारात्मक विचार नागेंद्र पाटील यांनी आपल्या कृतीतून समाजासमोर ठेवला आहे.

पहिल्या वाढदिवसानिमित्त विद्यार्थ्यांच्या चेहऱ्यावर आनंद फुलविणारा हा उपक्रम निश्चितच कौतुकास्पद आहे. नागेंद्र पाटील यांच्या या सामाजिक जाणिवेचे गावातून तसेच विविध स्तरांतून कौतुक व स्वागत होत आहे. वाढदिवस साजरा करण्याची ही विधायक पद्धत इतरांसाठीही प्रेरणादायी ठरत आहे.

ಮಗನ ಮೊದಲ ಹುಟ್ಟುಹಬ್ಬದ ಅಂಗವಾಗಿ ತಿವೋಳಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಣೆ; ನಾಗೇಂದ್ರ ಪಾಟೀಲ ಅವರ ಮಾದರಿ ಕಾರ್ಯ

ಖಾನಾಪುರ ವಾರ್ತೆ

ಖಾನಾಪುರ, ನ. 20 : ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬವೆಂದರೆ ಅದ್ಧೂರಿ ಅಲಂಕಾರ, ಪಟಾಕಿ ಸಿಡಿತ, ಭೋಜನಕೂಟ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಹಣ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ ತಮ್ಮ ಮಗನ ಮೊದಲ ಹುಟ್ಟುಹಬ್ಬವನ್ನು ಸಾಮಾಜಿಕ ಕಳಕಳಿಯೊಂದಿಗೆ ಆಚರಿಸುವ ಮೂಲಕ ತಿವೋಳಿ ಗ್ರಾಮದ ನಾಗೇಂದ್ರ ಪಾಟೀಲ ಅವರು ಇತರರಿಗೆ ಮಾದರಿಯಾಗಿದ್ದಾರೆ.

ತಮ್ಮ ಪುತ್ರ ಶ್ರೇಯಾಂಶ ಒಂದು ವರ್ಷ ಪೂರೈಸಿದ ಸಂತೋಷದ ಸಂದರ್ಭದಲ್ಲಿ ನಾಗೇಂದ್ರ ಪಾಟೀಲ ಅವರು ತಿವೋಳಿ ಗ್ರಾಮದ ಸರ್ಕಾರಿ ಪೂರ್ಣ ಪ್ರಾಥಮಿಕ ಮರಾಠಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಿದರು.

ಹುಟ್ಟುಹಬ್ಬದ ಹೆಸರಿನಲ್ಲಿ ಅನಗತ್ಯವಾಗಿ ಹಣ ಖರ್ಚು ಮಾಡುವ ಬದಲು, ಅದೇ ಹಣವನ್ನು ಬಡ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗೆ ಬಳಸಬೇಕು ಮತ್ತು ಅವರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂಬ ಉದಾತ್ತ ಉದ್ದೇಶದಿಂದ ಈ ಉಪಕ್ರಮ ಕೈಗೊಂಡಿದ್ದಾರೆ.

ಇಂದಿನ ದಿನಗಳಲ್ಲಿ ಹುಟ್ಟುಹಬ್ಬದ ಆಚರಣೆಗೆ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಆದರೆ, ಅದೇ ಹಣದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅವರ ಮುಖದಲ್ಲಿ ಸಂತೋಷ ಮೂಡಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂಬ ಸಂದೇಶವನ್ನು ನಾಗೇಂದ್ರ ಪಾಟೀಲ ಅವರು ತಮ್ಮ ಕಾರ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ.

ಮಗನ ಮೊದಲ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳೊಂದಿಗೆ ಸಂತೋಷ ಹಂಚಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಸೇರಿದಂತೆ ವಿವಿಧ ವಲಯಗಳಿಂದ ಮೆಚ್ಚುಗೆ ಹಾಗೂ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಹುಟ್ಟುಹಬ್ಬವನ್ನು ಆಚರಿಸುವ ಈ ವಿಭಿನ್ನ ಹಾಗೂ ಸಮಾಜಮುಖಿ ಪರಿಕಲ್ಪನೆ ಇತರರಿಗೂ ಪ್ರೇರಣೆಯಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या